newsics.com
ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 1963 ಮಂದಿಗೆ ಕೊರೋನಾ ಸೋಂಕು ತಗುಲಿದೆ. ರಾಜ್ಯದಲ್ಲಿ ಈಗ 32936 ಕೊವಿಡ್-19 ಸಕ್ರಿಯ ಪ್ರಕರಣಗಳಿವೆ ಎಂದು ತಿಳಿದುಬಂದಿದೆ.
ರಾಜ್ಯದಲ್ಲಿ ಇಂದು (ನ.9) 19 ಜನರು ಕೊರೋನಾಗೆ ಬಲಿಯಾಗಿದ್ದು, ಒಟ್ಟು ಸಾವಿನ ಸಂಖ್ಯೆ 11410ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಹೆಲ್ತ್ ಬುಲೆಟಿನ್ ತಿಳಿಸಿದೆ.
ಒಟ್ಟು ಕೊರೋನಾ ಸೋಂಕಿತ 848850 ಪ್ರಕರಣಗಳ ಪೈಕಿ 804485 ಸೋಂಕಿತರು ಈಗಾಗಲೇ ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಒಂದು ದಿನದಲ್ಲೇ 2686 ಸೋಂಕಿತರು ಗುಣಮುಖರಾಗಿದ್ದಾರೆ.
ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲೇ 15457 ಜನರನ್ನು ರಾಪಿಡ್ ಆಂಟಿಜೆನ್ ಡಿಟೆಕ್ಷನ್ ತಪಾಸಣೆಗೆ ಒಳಪಡಿಸಲಾಗಿದ್ದು, 69508 ಜನರಿಗೆ RT-PCR ವೈದ್ಯಕೀಯ ತಪಾಸಣೆ ನಡೆಸಲಾಗಿದೆ. ಒಂದೇ ದಿನ 84965 ಜನರನ್ನು ಕೋವಿಡ್-19 ಟೆಸ್ಟ್ ಗೆ ಒಳಪಡಿಸಲಾಗಿದೆ. ರಾಜ್ಯದಲ್ಲಿ ಈವರೆಗೆ 88,23,191 ಜನರಿಗೆ ಕೊವಿಡ್-19 ತಪಾಸಣೆಗೆ ಒಳಪಡಿಸಲಾಗಿದೆ.
ಬಾಗಲಕೋಟೆ 22, ಬಳ್ಳಾರಿ 37, ಬೆಳಗಾವಿ 34, ಬೆಂಗಳೂರು ಗ್ರಾಮಾಂತರ 93, ಬೆಂಗಳೂರು 978, ಬೀದರ್ 3, ಚಾಮರಾಜನಗರ 12, ಚಿಕ್ಕಬಳ್ಳಾಪುರ 56, ಚಿಕ್ಕಮಗಳೂರು 6, ಚಿತ್ರದುರ್ಗ 69, ದಕ್ಷಿಣ ಕನ್ನಡ 18, ದಾವಣಗೆರೆ 19, ಧಾರವಾಡ 33, ಗದಗ 4, ಹಾಸನ 48, ಹಾವೇರಿ 13, ಕಲಬುರಗಿ 34, ಕೊಡಗು 14, ಕೋಲಾರ 52, ಕೊಪ್ಪಳ 16, ಮಂಡ್ಯ 73, ಮೈಸೂರು 95, ರಾಯಚೂರು 20, ರಾಮನಗರ 3, ಶಿವಮೊಗ್ಗ 28, ತುಮಕೂರು 65, ಉಡುಪಿ 29, ಉತ್ತರ ಕನ್ನಡ 47, ವಿಜಯಪುರ 38, ಯಾದಗಿರಿ 3 ಕೊರೋನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ.
ಹೆಚ್ಚಿನ ಮಾಹಿತಿಗಾಗಿ: 09-11-2020 HMB English
3ನೇ ಹಂತದ ಲಸಿಕೆ ಪ್ರಯೋಗ ಶೇ .90ರಷ್ಟು ಯಶಸ್ವಿಯಾಗಿದೆ- ಫಿಜರ್ ಸಂಸ್ಥೆ
ಪ್ರಿ ವೆಡ್ಡಿಂಗ್ ಫೋಟೊಶೂಟ್; ತೆಪ್ಪ ಮುಳುಗಿ ವಧು, ವರ ಸಾವು
ಕೆಂಪು ಬಣ್ಣಕ್ಕೆ ತಿರುಗಿದ ನದಿ ನೀರು: ಆತಂಕಗೊಂಡ ಜನರು
ನಟಿ ದೀಪಿಕಾ ಕಾಮಯ್ಯ ಇನ್ಸ್ಟಾಗ್ರಾಂ ಅಕೌಂಟ್ ಹ್ಯಾಕ್
ಸಿದ್ದರಾಮಯ್ಯ, ತೇಜಸ್ವಿ ಸೂರ್ಯ, ನಟ ದರ್ಶನ್’ಗೆ ತಲಾ 250 ರೂ. ದಂಡ