Sunday, July 3, 2022

ಕೊರೋನಾ ಬಳಿಕ ಚೀನಾದಲ್ಲಿ ಹೊಸ ಮಾದರಿಯ ಪ್ಲೇಗ್

Follow Us

ಬೀಜಿಂಗ್‌: ಕೊರೋನಾ ಬಳಿಕ ಚೀನಾದಲ್ಲಿ ಹೊಸ ಮಾದರಿಯ ಪ್ಲೇಗ್‌ ಕಾಣಿಸಿಕೊಂಡಿದೆ.
2009ರಲ್ಲಿ ಟಿಬೆಟ್‌ ಪ್ರಸ್ಥಭೂಮಿಯ, ಕ್ವಿಂಗೈ ಪ್ರಾಂತ್ಯದ ಜಿಕೆಟನ್‌ ಎಂಬಲ್ಲಿ ಈ ಕಾಯಿಲೆ ಹರಡಿತ್ತು. ಆಗ ಹಲವರು ಸಾವಿಗೀಡಾಗಿದ್ದರು. ಬಳಿಕ ಈಗ ಮತ್ತೆ ಈ ಕಾಯಿಲೆ ಕಾಣಿಸಿಕೊಂಡಿದೆ. ಉತ್ತರ ಚೀನಾದ ವ್ಯಕ್ತಿಯೊಬ್ಬರು ‘ಬುಬೊನಿಕ್ ಪ್ಲೇಗ್’ ಎನ್ನುವ ಹೊಸ ಮಾದರಿಯ ಪ್ಲೇಗ್‌ನಿಂದ ಮೃತಪಟ್ಟಿದ್ದಾರೆ. ಒಂದೇ ವಾರದಲ್ಲಿ ಈ ಕಾಯಿಲೆಯಿಂದ ಇಬ್ಬರು ಅಸುನೀಗಿದ್ದಾರೆ.
ಈ ಕಾಯಿಲೆ ಬಂದವರಲ್ಲಿ ಬಹು ಅಂಗಾಂಗ ವೈಫಲ್ಯ ಉಂಟಾಗುತ್ತದೆ. ಇದೇ ಸಮಸ್ಯೆಯಿಂದ ವ್ಯಕ್ತಿ ಶುಕ್ರವಾರ ಮೃತಪಟ್ಟಿದ್ದಾರೆ ಎಂದು ಬಯಾನಾವೋರ್ ನಗರ ಆರೋಗ್ಯ ಆಯುಕ್ತರು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾರೆ. ಮೃತ ವ್ಯಕ್ತಿ ವಾಸಿಸುತ್ತಿದ್ದ ಪ್ರದೇಶವನ್ನು ಸೀಲ್‌ಡೌನ್‌ ಮಾಡಲಾಗಿದೆ. ಅವರ ನಿಕಟ ಸಂಪರ್ಕದಲ್ಲಿದ್ದ ಏಳು ಮಂದಿಯ ಮೇಲೆ ನಿಗಾ ಇರಿಸಲಾಗಿದೆ. ಅವರೆಲ್ಲರ ಪರೀಕ್ಷೆ ಮಾಡಲಾಗಿದ್ದು, ಪ್ಲೇಗ್‌ನ ನೆಗೆಟಿವ್‌ ವರದಿ ಬಂದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಶೋಂ ರೂಂಗೆ ಡಾಗ್ ರಿಸೆಪ್ಷನಿಸ್ಟ್

ಮತ್ತಷ್ಟು ಸುದ್ದಿಗಳು

vertical

Latest News

ಕಲುಷಿತ ನೀರು ಸೇವನೆ; 40 ಕ್ಕೂ ಹೆಚ್ಚು ಜನ ಅಸ್ವಸ್ಥ

newsics.com ರಾಯಚೂರು; ಕಲುಷಿತ ನೀರು ಸೇವನೆ ಮಾಡಿ 40 ಕ್ಕೂ ಹೆಚ್ಚು ಜನ ಅಸ್ವಸ್ಥಗೊಂಡ ಘಟನೆ ರಾಯಚೂರಿನಲ್ಲಿ ನಡೆದಿದೆ. ಅನೇಕರು ವಾಂತಿ ಭೇದಿಯಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಲ್ಕಂದಿನ್ನಿಯ ಸರ್ಕಾರಿ...

ಅನಾರೋಗ್ಯ ನೆಪವೊಡ್ಡಿ ಏರ್ ಇಂಡಿಯಾ ಸಂದರ್ಶನಕ್ಕೆ ಹಾಜರಾದ ಇಂಡಿಗೋ ಸಿಬ್ಬಂದಿ, ವಿಮಾನ ಸೇವೆ ವ್ಯತ್ಯಯ

newsics.com ನವದೆಹಲಿ: ಏರ್ ಇಂಡಿಗೋ ಸಿಬ್ಬಂದಿ ಅನಾರೋಗ್ಯದ ನೆಪವೊಡ್ಡಿ ಶನಿವಾರ ಏರ್ ಇಂಡಿಯಾ‌ ಸಂದರ್ಶನಕ್ಕೆ ತೆರಳಿದ್ದರಿಂದ ಇಂಡಿಗೋ ಸೇವೆಯಲ್ಲಿ‌ ವ್ಯತ್ಯಯ ಉಂಟಾಗಿತ್ತು. ವಿಮಾನಯಾನ ವ್ಯತ್ಯಯ ಉಂಟಾಗಿದ್ದಕ್ಕೆ ಇಂಡಿಗೋ ಬಳಿ ಕಾರಣ ಕೇಳಲಾಗಿದೆ ಎಂದು ನಾಗರಿಕ ವಿಮಾನಯಾನ...

ಬೆಂಗಳೂರಿನಲ್ಲಿ 746 ಮಂದಿ ಸೇರಿ ರಾಜ್ಯದಲ್ಲಿ 826 ಜನಕ್ಕೆ ಕೊರೋನಾ ಸೋಂಕು

newsics.com ಬೆಂಗಳೂರು ; ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ ಇಂದು ಒಟ್ಟು 826 ಕೊರೊನಾ ಪ್ರಕರಣ ವರದಿಯಾಗಿದೆ.ಸಕ್ರಿಯ ಪ್ರಕರಣಗಳ ಸಂಖ್ಯೆ 6,666ಕ್ಕೆ ಏರಿಕೆ ಕಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 39,72,285ಕ್ಕೆ ಏರಿಕೆಯಾಗಿದೆ. ಇಂದು ಯಾವುದೇ ಸಾವು...
- Advertisement -
error: Content is protected !!