newsics.com
ನವದೆಹಲಿ: ಭಾರತೀಯ ವಾಯುಪಡೆಯ ಮಹಿಳಾ ಪೈಲಟ್‍ಗಳು ಸಧ್ಯದಲ್ಲೇ ರಫೇಲ್ ಯುದ್ಧ ವಿಮಾನ ಹಾರಾಟ ನಿರ್ವಹಿಸುವ ಗೋಲ್ಡರ್ ಏರೋಸ್ ತಂಡಕ್ಕೆ ಸೇರ್ಪಡೆಯಾಗಲಿದ್ದಾರೆ.
ವಾಯುಸೇನೆಯ ಹಿರಿಯ ಅಧಿಕಾರಿಗಳು ಈ ವಿಚಾರವನ್ನು ಖಚಿತಪಡಿಸಿದ್ದು, ಪ್ರಸ್ತುತ ಮಿಗ್-21 ಯುದ್ಧ ವಿಮಾನ ಹಾರಾಟ ನಿರ್ವಹಿಸುತ್ತಿದ್ದ ಮಹಿಳಾ ಪೈಲಟ್‍ಗಳನ್ನು ಆಂತರಿಕ ಪ್ರಕ್ರಿಯೆಗಳ ಬಳಿಕ ರಫೇಲ್ ಹಾರಾಟಕ್ಕೆ ಆಯ್ಕೆಮಾಡಲಾಗಿದ್ದು, ಸಧ್ಯ ಅವರು ಯುದ್ಧ ವಿಮಾನ ಹಾರಾಟದ ತರಬೇತಿ ಪಡೆಯುತ್ತಿದ್ದಾರೆ ಎಂದಿದ್ದಾರೆ.
ಭಾರತೀಯ ವಾಯುಸೇನೆಯು ಪ್ರಸ್ತುತ 10 ಮಹಿಳಾ ಪೈಲಟ್‍ಗಳಿದ್ದು, 18 ಮಹಿಳಾ ನ್ಯಾವಿಗೇಟರ್‍ಗಳಿದ್ದು, ಒಟ್ಟು ಮಹಿಳಾ ಅಧಿಕಾರಿಗಳ ಸಂಖ್ಯೆ 1875. ಕಳೆದ ವಾರ ರಕ್ಷಣಾ ಇಲಾಕೆಯ ರಾಜ್ಯ ಸಚಿವ ಶ್ರೀಪಾದ್ ನಾಯಕ್ ಸಂಸತ್ತಿಗೆ ವಿವರಣೆ ನೀಡಿದ್ದು, ಮಹಿಳಾ ಪೈಲಟ್‍ಗಳನ್ನು ಅಗತ್ಯಕ್ಕೆ ಅನುಗುಣವಾಗಿ ವಾಯುಸೇನೆಯ ಕಾರ್ಯಾಚರಣೆಗಳಿಗೆ ಬಳಸಿಕೊಳ್ಳಲಾಗುತ್ತಿದೆ ಎಂದಿದ್ದರು.
ಕಳೆದ ಸೆಪ್ಟೆಂಬರ್ 10 ರಂದು ವಾಯುಸೇನೆಯ ಗೋಲ್ಡರ್ ಏರೋಸ್ ನ್ನು ಪುನರುತ್ಥಾನಗೊಳಿಸಲಾಗಿದೆ. ಈ ಸ್ಕ್ಯಾಡ್ರನ್ 1951 ರಲ್ಲಿ ಅಂಬಾಲಾ ವಾಯುಪಡೆಯಲ್ಲಿ ಆರಂಭವಾಗಿತ್ತು.ಈ ಸ್ಕ್ಯಾಡ್ರನ್ ತನ್ನ ಸಾಧನೆಯ ಪಟ್ಟಿಯಲ್ಲಿ ಹಲವು ಹೊಸತುಗಳನ್ನು ಸಾಧಿಸಿದ್ದು, 1955 ರಲ್ಲಿ ಮೊದಲಹ್ಯಾವಿಲ್ಯಾಂಡ್ ವ್ಯಾಂಪೈರ್‍ನ್ನು ಕೂಡ ಹೊಂದಿತ್ತು.
ಸೆಪ್ಟೆಂಬರ್ 10 ರಂದು ಅಂಬಾಲಾ ವಾಯುನೆಲೆಯಲ್ಲಿ ಐದು ಫ್ರೆಂಚ್ ನಿರ್ಮಿತ ಮಲ್ಟಿರೋಲ್ ರಾಫೇಲ್ ಫೈಟರ್ ಜೆಟ್‍ಗಳನ್ನು ಭಾರತೀಯ ವಾಯುಸೇನೆಗೆ ಸೇರಿಸಲಾಗಿದ್ದು, ಇದೀಗ ಈ ಜೆಟ್‍ಗಳಿಗೆ ಮಹಿಳಾ ಪೈಟರ್‍ಗಳು ದಿಶೆ ತೋರಲಿದ್ದಾರೆ.
ರಫೆಲ್ ಯುದ್ಧ ವಿಮಾನಕ್ಕೆ ಸದ್ಯದಲ್ಲೇ ಮಹಿಳಾ ಪೈಲಟ್
Follow Us