Wednesday, November 29, 2023

ವಿದೇಶಿ ದೇಣಿಗೆ ಪಡೆವ ಎನ್’ಜಿಒಗಳಿಗೆ ಆಧಾರ್ ಕಡ್ಡಾಯ

Follow Us

newsics.com 
ನವದೆಹಲಿ: ವಿದೇಶಿ ದೇಣಿಗೆ ಪಡೆಯಲು ಬಯಸುವ ಎನ್ ಜಿಒಗಳಿಗೆ ಆಧಾರ್ ಕಡ್ಡಾಯಗೊಳಿಸಲು ಲೋಕಸಭೆ ‘ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆ, 2010 ತಿದ್ದುಪಡಿಗೆ’ ಸೋಮವಾರ ಲೋಕಸಭೆ ಅನುಮೋದನೆ ನೀಡಿದೆ.
ಮಂಗಳವಾರ (ಸೆ.22) ರಾಜ್ಯಸಭೆಯಲ್ಲಿ ಈ ತಿದ್ದುಪಡಿ ಕಾಯ್ದೆ ಮಂಡನೆಯಾಗಲಿದೆ. ಪ್ರತಿ ವರ್ಷ ಸಾವಿರಾರು ಕೋಟಿ ರೂಪಾಯಿ ವಿದೇಶಿ ದೇಣಿಯ ಬಳಕೆಯು ಪಾರದರ್ಶಕವಾಗಿರಲು ಹಾಗೂ ಲೆಕ್ಕಾಚಾರ ಹೊಂದಿರಲು ವಿದೇಶಿ ದೇಣಿಗೆ (ನಿಯಂತ್ರಣ) ಕಾಯ್ದೆಗೆ (ಎಫ್‌ಸಿಆರ್‌ಎ) ತರಲಾಗಿರುವ ತಿದ್ದುಪಡಿ ಸಹಕಾರಿಯಾಗಲಿದೆ ಎಂದು ಕೇಂದ್ರ ಸರ್ಕಾರ ಭಾನುವಾರ ಹೇಳಿತ್ತು.

ಚೀನಾದಿಂದ ಆಮದು ಪ್ರಮಾಣ ಶೇ.27 ಕುಸಿತ

ಎಫ್‌ಸಿಆರ್‌ಎ ತಿದ್ದುಪಡಿಗೆ ಮೇಲ್ಮನೆಯಿಂದ ಅನುಮೋದನೆ ಪಡೆದು ಅದಕ್ಕೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ಅಂಕಿತ ದೊರೆತರೆ, ಸಾರ್ವಜನಿಕ ಸೇವೆಯಲ್ಲಿರುವವರು ವಿದೇಶಿ ದೇಣಿಗೆ ಪಡೆಯುವುದಕ್ಕೆ ನಿರ್ಬಂಧ ಬೀಳಲಿದೆ. ವಿದೇಶಿ ಮೂಲಗಳಿಂದ ದೇಣಿಗೆ ಪಡೆಯಲಿರುವ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಆಧಾರ್ ಸಂಖ್ಯೆ ನೀಡುವುದು ಕಡ್ಡಾಯವಾಗಲಿದೆ. ತಿದ್ದುಪಡಿಯಿಂದಾಗಿ ಸ್ವೀಕರಿಸಲಾಗುವ ವಿದೇಶಿ ದೇಣಿಗೆಯಲ್ಲಿ ಆಡಳಿತಾತ್ಮಕ ಉದ್ದೇಶಗಳಿಗೆ ಶೇ.50ರಷ್ಟು ಬದಲು ಶೇ. 20ರಷ್ಟು ಮೊತ್ತವನ್ನಷ್ಟೇ ಬಳಸಲು ಅವಕಾಶವಿರುತ್ತದೆ.
2011 ಮೇ 1 ರಂದು ಕಾಯ್ದೆ ಜಾರಿಗೆ ಬಂದಿದ್ದು, ಎರಡು ಬಾರಿ ತಿದ್ದುಪಡಿಯಾಗಿದೆ. ಅಂಕಿ-ಅಂಶಗಳ ಪ್ರಕಾರ, 2016-17 ಮತ್ತು 2018-19ರ ಅವಧಿಯಲ್ಲಿ ವಿವಿಧ ನೋಂದಾಯಿತ ಸೇವಾ ಸಂಸ್ಥೆಗಳು ಒಟ್ಟು ₹58,000 ಕೋಟಿ ವಿದೇಶಿ ದೇಣಿಗೆಯನ್ನು ಸ್ವೀಕರಿಸಿವೆ.

12 ಕೋಟಿ ಲಾಟರಿ ಗೆದ್ದ ದೇಗುಲದ ಕ್ಲರ್ಕ್!

9 ಬ್ಯಾಂಕ್’ಗಳಿಗೆ 1,400 ಕೋಟಿ ವಂಚನೆ; ಕ್ವಾಲಿಟಿ ವಿರುದ್ಧ ಸಿಬಿಐ ಕೇಸ್

ಮತ್ತಷ್ಟು ಸುದ್ದಿಗಳು

vertical

Latest News

ಮೈಸೂರು ವಿವಿ ಪ್ರೊಫೆಸರ್ ವಿರುದ್ಧ ಪಿಎಚ್ಡಿ ವಿದ್ಯಾರ್ಥಿನಿಯಿಂದ ಪೊಲೀಸರಿಗೆ ದೂರು: FIR ದಾಖಲು

newsics.com ಮೈಸೂರು: ಮೈಸೂರು ವಿಶ್ವವಿದ್ಯಾಲಯದ ಪ್ರೊಫೆಸರ್ ಶುಭ ಗೋಪಾಲ್ ವಿರುದ್ಧ ಪಿಎಚ್.ಡಿ. ವಿದ್ಯಾರ್ಥಿನಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರು ವಿವಿಯ ಮೈಕ್ರೋ ಬಯಾಲಜಿ ವಿಭಾಗದ ಪ್ರೊ.ಶುಭ ಗೋಪಾಲ್ ವಿರುದ್ಧ...

ಮುಂದಿನ ವರ್ಷದಿಂದ 500 ರಿಂದ 600 ಕರ್ನಾಟಕ ಪಬ್ಲಿಕ್ ಸ್ಕೂಲ್ ಆರಂಭ: ಮಧು ಬಂಗಾರಪ್ಪ

newsics.com ಹಾಸನ: ಮುಂದಿನ ಶೈಕ್ಷಣಿಕ ವರ್ಷದಲ್ಲಿ 500 ರಿಂದ 600 ಪಬ್ಲಿಕ್ ಶಾಲೆಗಳನ್ನು ಸ್ಥಾಪನೆ ಮಾಡಲಾಗುವುದು. ಚುನಾವಣೆ ಸಂದರ್ಭದಲ್ಲಿ ನೀಡಿದ 5 ಗ್ಯಾರಂಟಿಗಳನ್ನು ಈಡೇರಿಸಿದ್ದು, ಶಾಲೆಗಳ ಅಭಿವೃದ್ಧಿಗೂ ಹಾಗೂ ಗ್ಯಾರಂಟಿಗೂ ಯಾವ ಸಂಬಂಧವಿಲ್ಲ ಎಂದು...

2024ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆ

newsics.com ಬೆಂಗಳೂರು: 2024ಕ್ಕೆ ಮುಂಜೂರಾದ ಸಾರ್ವತ್ರಿಕ ರಜೆಗಳ ಪಟ್ಟಿಯನ್ನು ಕರ್ನಾಟಕ ಸರ್ಕಾರವು ಬಿಡುಗಡೆ ಮಾಡಿದೆ. ಎಲ್ಲಾ ಎರಡನೇ ಶನಿವಾರ, ನಾಲ್ಕನೇ ಶನಿವಾರ ಮತ್ತು ಭಾನುವಾರಗಳು ಸೇರಿದಂತೆ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಹೀಗಿದೆ. ಜನವರಿ 15,...
- Advertisement -
error: Content is protected !!