♦ ಐದೇ ಆನೆಗಳು ದಸರಾದಲ್ಲಿ ಭಾಗಿ ♦ ಆನೆಗಳಿಗೂ ಕೊರೋನಾ ಟೆಸ್ಟ್
newsics.com
ಮೈಸೂರು: ಈ ಬಾರಿಯ ದಸರಾದಲ್ಲಿ ಇದೇ ಮೊದಲ ಬಾರಿಗೆ ಅಭಿಮನ್ಯು ಆನೆ ಅಂಬಾರಿ ಹೊರಲಿದೆ.
ಕೊರೋನಾ ಹಿನ್ನೆಲೆಯಲ್ಲಿ ಈ ಬಾರಿ ನಡೆಯಲಿರುವ ಸರಳ ದಸರಾಗೆ 5 ಆನೆಗಳ ಆಯ್ಕೆ ಅಂತಿಮವಾಗಿದ್ದು, ಎಲ್ಲ ಆನೆಗಳಿಗೂ ಕೋವಿಡ್ ಟೆಸ್ಟ್ ಮಾಡಲು ನಿರ್ಧರಿಸಲಾಗಿದೆ. ಪ್ರತಿ ವರ್ಷದಂತೆ 50 ದಿನದ ಮುನ್ನವೇ ಆನೆಗಳು ಮೈಸೂರಿಗೆ ಆಗಮಿಸಿ ರಾಜಬೀದಿಗಳಲ್ಲಿ ತಾಲೀಮು ಇರುವುದಿಲ್ಲ.
ಮೈಸೂರು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದಿಂದ ಆನೆಗಳ ಅಂತಿಮ ಪಟ್ಟಿಯನ್ನ ಕೇಂದ್ರ ಅರಣ್ಯಾಧಿಕಾರಿಗೆ ರವಾನೆ ಮಾಡಿದ್ದು ಆನೆಗಳ ಹೆಸರು ಹಾಗೂ ಆನೆಗಳ ಆರೋಗ್ಯ ಸ್ಥಿತಿಯ ವರದಿ ಸಲ್ಲಿಸಲಾಗಿದೆ. ಇನ್ನೆರಡು ದಿನದಲ್ಲಿ ಕೇಂದ್ರ ಅರಣ್ಯಾಧಿಕಾರಿಯಿಂದ ಅನುಮತಿ ಸಾಧ್ಯತೆ ಇದೆ. ಈ ಬಾರಿ ಅಭಿಮನ್ಯು ಆನೆಯೇ ಅಂಬಾರಿ ಹೊರುವ ಆನೆಯಾಗಿ ಆಯ್ಕೆಯಾಗುವುದು ದೃಢಪಟ್ಟಿದೆ. ಈ ಬಾರಿಯದಲ್ಲಿ ದಸರಾದಲ್ಲಿ ಅರ್ಜುನ ಆನೆ ಭಾಗಿಯಾಗುವುದಿಲ್ಲ. 60 ವರ್ಷ ದಾಟಿರುವ ಹಿನ್ನೆಲೆಯಲ್ಲಿ ಅರ್ಜುನ ಆನೆಗೆ ದಸರಾದ ಯಾವುದೇ ಜವಬ್ದಾರಿ ನೀಡುತ್ತಿಲ್ಲ. ಈ ನಿಟ್ಟಿನಲ್ಲಿ ಈ ಬಾರಿಯ ಜಂಬೂಸವಾರಿಯಲ್ಲಿ 5 ಆನೆಗಳು ಮಾತ್ರ ಭಾಗಿಯಾಗಲಿದ್ದು, ಹೆಚ್ಚುವರಿ ಆನೆಗಳನ್ನು ಈ ಬಾರಿ ಕಾಡಿನಿಂದ ಕರೆತರುವುದಿಲ್ಲ. ಅಲ್ಲದೆ ಮೊದಲ ದಿನದಿಂದ ಕೊನೆ ದಿನದವರೆಗೂ ಆನೆಗಳು ಅರಮನೆ ಆವರಣದಲ್ಲೇ ವಾಸ್ತವ್ಯ ಇರಲಿವೆ ಎಂದು ಮೈಸೂರು ವನ್ಯಜೀವಿ ವಿಭಾಗದ ಅರಣ್ಯಾಧಿಕಾರಿ ಅಲೆಕ್ಸಾಂಡರ್ ಹೇಳಿದ್ದಾರೆ.
ಈ ಮಧ್ಯೆ, ಈ ಬಾರಿಯ ದಸರಾದಲ್ಲಿ ಭಾಗಿಯಾಗುವ ಆನೆಗಳಿಗೆ ಕೋವಿಡ್ ಟೆಸ್ಟ್ ಮಾಡುವ ನಿರ್ಧಾರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಬಂದಿದ್ದಾರೆ. ಮನುಷ್ಯರಿಂದ ಪ್ರಾಣಿಗಳಿಗೆ ಸೋಂಕು ಹರಡುವ ಸಾಧ್ಯತೆಯಿಂದ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಆನೆಗಳಿಗೆ ಹಾಗೂ ಆನೆಗಳ ಮಾವುತ ಕಾವಾಡಿಗಳಿಗೆ ಕೋವಿಡ್ ಟೆಸ್ಟ್ ಮಾಡುವ ನಿರ್ಧಾರ ಮಾಡಲಾಗಿದೆ. ಆನೆಗಳ ಆರೋಗ್ಯದ ಮೇಲೆ ಹೆಚ್ಚಿನ ನಿಗಾ ವಹಿಸಲಾಗುವುದು.
ಅಷ್ಟೇ ಅಲ್ಲ, ಈ ಬಾರಿ ಅರಮನೆ ಒಳಗೆ ಆನೆಗಳ ಸಾರ್ವಜನಿಕ ವಿಕ್ಷಣೆ ರದ್ದು ಮಾಡುವ ಚಿಂತನೆಯಲ್ಲೂ ಅರಣ್ಯ ಇಲಾಖೆ ಇದೆ. ಮಾವುತರು ಸಹ ಪದೆ ಪದೆ ಆನೆ ಬಳಿ ತೆರಳಬಾರದು. ದಸರಾ ಮುಗಿದ ನಂತರ ಆನೆಗಳ ಆರೋಗ್ಯ ತಪಾಸಣೆ ಮಾಡಿ ಆನೆಗಳಿಗೆ ಸೋಂಕು ಇಲ್ಲ ಎಂದು ದೃಢಪಟ್ಟ ಮೇಲಷ್ಟೆ ಆನೆಗಳನ್ನು ಶಿಬಿರದ ಕಾಡಿಗೆ ಕಳುಹಿಸಲಾಗುವುದು ಎಂದು ಮೈಸೂರು ವನ್ಯಜೀವಿ ಅರಣ್ಯಾಧಿಕಾರಿ ಅಲೆಕ್ಸಾಂಡರ್ ಹೇಳಿದರು.
7 ತಿಂಗಳ ಹೆಣ್ಣುಮಗುವನ್ನು ಬಕೆಟ್’ನಲ್ಲಿ ಮುಳುಗಿಸಿ ಕೊಂದ ವಕೀಲ ಅಪ್ಪ!
2022ರಿಂದ ಹೊಸ ಪಠ್ಯಕ್ರಮ, ಅಂಕಪಟ್ಟಿ ಶಿಕ್ಷಣಕ್ಕೆ ತಿಲಾಂಜಲಿ
ಜಾರಿ ನಿರ್ದೇಶನಾಲಯದಿಂದ ಕೇರಳ ಉನ್ನತ ಶಿಕ್ಷಣ ಸಚಿವರ ವಿಚಾರಣೆ
ಕೇಂದ್ರ ಸಚಿವ ಸುರೇಶ್ ಅಂಗಡಿಗೆ ಕೊರೋನಾ
ಹಿರಿಯ ನಟಿ ಡಯಾನಾ ರಿಗ್ ಇನ್ನಿಲ್ಲ