ಬೆಂಗಳೂರು: ಒಂದೆಡೆ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಇದೆ. ಇನ್ನೊಂದೆಡೆ ಜನರ ನಿರ್ಲಕ್ಷ್ಯವೂ ಮುಂದುವರೆದಿದೆ. ಸೀಲ್ ಡೌನ್, ಲಾಕ್ ಡೌನ್’ಗೆಲ್ಲ ಹೆದರದ ಜನ ಮಾಸ್ಕ್ ಬಿಟ್ಟು ಊರೆಲ್ಲ ಓಡಾಡುತ್ತಿದ್ದಾರೆ. ಹೀಗಾಗಿ ಜನರಲ್ಲಿ ತಿಳಿವಳಿಕೆ ಮೂಡಿಸಲು ಬಿಬಿಎಂಪಿ ಸೆಲೆಬ್ರಿಟಿಗಳ ಮೊರೆ ಹೋಗಿದೆ.
ಹೌದು, ಜನರಲ್ಲಿ ಕೊರೋನಾ ಬಗ್ಗೆ ತಿಳಿವಳಿಕೆ ಮೂಡಿಸುವ ನಿಟ್ಟಿನಲ್ಲಿ ಬಿಬಿಎಂಪಿ ನಟ ರಮೇಶ್ ಅರವಿಂದ್ ಅವರನ್ನು ಕೊರೋನಾ ರಾಯಭಾರಿಯಾಗಿ ನೇಮಿಸಿದೆ. ಬಿಬಿಎಂಪಿ ಕೊರೋನಾ ರಾಯಭಾರಿಯಾಗಿ ನೇಮಕವಾದ ಬಳಿಕ ಮಾತನಾಡಿದ ನಟ ರಮೇಶ್ ಅರವಿಂದ್, ಜನರು ಕೊರೋನಾ ಬಗ್ಗೆ ಭಯಗೊಳ್ಳಬಾರದು. ಆದರೆ ಸಾಮಾಜಿಕ ಅಂತರ ಪಾಲಿಸಬೇಕು. ಮಾಸ್ಕ್ ಧರಿಸಿ ಒಳ್ಳೆಯ ಆಹಾರ ಸೇವಿಸಿ. ಮನೆಯಲ್ಲೇ ಇರಿ ಸೇಫ್ ಆಗಿರಿ ಎಂದು ಮನವಿ ಮಾಡಿದ್ದಾರೆ.
ನಟ ರಮೇಶ್ ಬೆಂಗಳೂರಿನ ಕೊರೋನಾ ರಾಯಭಾರಿ
Follow Us