newsics.com
ಮುಂಬೈ: ಹಿಂದಿ ಚಿತ್ರ ನಿರ್ಮಾಪಕ, ನಿರ್ದೇಶಕ, ನಟ ಅನುರಾಗ್ ಕಶ್ಯಪ್ ವಿರುದ್ಧ ನಟಿ ಪಾಯಲ್ ಘೋಶ್ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದೆ ಅನುರಾಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ, ಈಗ ಪೊಲೀಸ್ ಠಾಣೆ ಮೆಟ್ಟಿಲೇರಿ ಅಧಿಕೃತವಾಗಿ ದೂರು ದಾಖಲಿಸಿದ್ದಾರೆ. ಆದರೆ, ನಟಿ ಪಾಯಲ್ ಮಾಡಿರುವ #MeToo ಆರೋಪವನ್ನು ಅನುರಾಗ್ ಕಶ್ಯಪ್ ಅಲ್ಲಗಳೆದಿದ್ದಾರೆ.
ಅನುರಾಗ್ ಅವರು ತನ್ನ ಮುಂದೆ ನಿಂತು ನನ್ನ ಸಲ್ವಾರ್ ಕಮೀಜ್ ತೆಗೆದರು. ಅತ್ಯಾಚಾರವೆಸಗಿದರು. ನಾನು ವಿರೋಧಿಸಿದಾಗ ಇದೆಲ್ಲವೂ ಮಾಮೂಲಿ, ದೈಹಿಕ ಸುಖ ಪಡೆಯಲು ಒಂದು ಕಾಲ್ ಮಾಡಿದರೆ ಸಾಕು ಎಂದು ನನಗೆ ಹೇಳಿದ್ದರು ಎಂದು ದೂರಿನಲ್ಲಿ ಹೇಳಿದ್ದಾರೆ. ಅನುರಾಗ್ ವಿರುದ್ಧ ಐಪಿಸಿ ಸೆಕ್ಷನ್ 376, 354, 341, 342 ಅನ್ವಯ ದೂರು ದಾಖಲಿಸಲಾಗಿದ್ದು, ಸಂತ್ರಸ್ತೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ಪಾಯಲ್ ಪರ ವಕೀಲರು ತಿಳಿಸಿದ್ದಾರೆ.
ಅವರು ನನ್ನ ಸಲ್ವಾರ್ ಕಮೀಜ್ ತೆಗೆದರು… ಅನುರಾಗ್ ವಿರುದ್ಧ ಪಾಯಲ್ ಮೀ ಟೂ ಆರೋಪ
ಅನುರಾಗ್ ಪರ ತಾಪ್ಸಿ ಪೊನ್ನು, ಸೈಯಾಮಿ ಖೇರ್, ರಾಮ್ ಗೋಪಾಲ್ ವರ್ಮಾ, ಅನುಭವ್ ಸಿನ್ಹಾ, ಕಲ್ಕಿ ಕೋಚ್ಲಿನ್, ಆರ್ತಿ ಬಜಾಜ್(ಇಬ್ಬರು ಅನುರಾಗ್ ಮಾಜಿ ಪತ್ನಿಯರು) ಮಾತನಾಡಿ, ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ, ಅನುರಾಗ್ ಕಶ್ಯಪ್ ಅವರ ವಕೀಲರಾದ ಪ್ರಿಯಾಂಕಾ ಖಿಮಾನಿ, ನನ್ನ ಕಕ್ಷಿದಾರರ ಮೇಲೆ ಬಂದಿರುವ ಆರೋಪಗಳು ನಿರಾಧಾರ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.