newsics.com
ಕಾಬೂಲ್: ಅಫ್ಘಾನಿಸ್ತಾನ ಸರ್ಕಾರ ಸಂಪೂರ್ಣವಾಗಿ ತಾಲಿಬಾನಿಗಳಿಗೆ ಶರಣಾಗಿದೆ. ಅಫ್ಘಾನ್ ಅಧ್ಯಕ್ಷ ಘನಿ ಉಗ್ರರಿಗೆ ಅಧಿಕಾರ ಹಸ್ತಾಂತರ ನಡೆಸಿದ್ದಾರೆ ಎಂದು ವರದಿಯಾಗಿದೆ.
ಶಾಂತಿಯುವಾಗಿ ಅಧಿಕಾರ ಹಸ್ತಾಂತರಿಸುವುದಾಗಿ ಅಫ್ಗಾನಿಸ್ತಾನದ ಒಳಾಡಳಿತ ಇಲಾಖೆ (ಗೃಹ ಇಲಾಖೆ) ತಿಳಿಸಿದೆ ಎಂದು ಹಲವು ಅಂತರರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇದರೊಂದಿಗೆ ಮುಲ್ಲಾ ಅಬ್ದುಲ್ ಘನಿ ಬರಾದಾರ್ ಅವರನ್ನು ದೇಶದ ನೂತನ ಅಧ್ಯಕ್ಷರಾಗಿ ಘೋಷಿಸಲಾಗಿದೆ ಎಂದು ಹೇಳಲಾಗಿದೆ.
ಯಾವುದೇ ರೀತಿಯ ಸಾವು ನೋವುಗಳಿಲ್ಲದೆ ದೇಶವನ್ನು ಹಸ್ತಾಂತರಿಸುವಂತೆ ತಾಲಿಬಾನ್ ಕೇಳಿತ್ತು. ಹೀಗಾಗಿ ಅಧ್ಯಕ್ಷ ಅಶ್ರಫ್ ಘನಿ ಅಧಿಕಾರವನ್ನು ಹಸ್ತಾಂತರಿಸಿದ್ದಾರೆ ಎಂದು ವರದಿ ತಿಳಿಸಿದೆ. ಅಧಿಕೃತವಾಗಿ ರಾಜೀನಾಮೆ ಘೋಷಣೆ ಮಾಡವುದು ಬಾಕಿಯಿದೆ ಎಂದು ವರದಿ ತಿಳಿಸಿದೆ.