newsics.com
ಕೀನ್ಯಾ: ಅಪರೂಪದಲ್ಲಿ ಅಪರೂಪ ಎಂಬಂತೆ ಕೀನ್ಯಾದಲ್ಲಿನ ಆಫ್ರಿಕಾ ಆನೆಯೊಂದು ಅವಳಿ ಮರಿಗಳಿಗೆ ಜನ್ಮ ನೀಡಿದೆ.
ಕೀನ್ಯಾದ ಸಂಬೂರು ನ್ಯಾಷನಲ್ ಪಾರ್ಕ್ ಈ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ. ಅವಳಿ ಆನೆ ಮರಿಗಳನ್ನು ತೀವ್ರ ಕಾಳಜಿ ವಹಿಸಿ ಸಂರಕ್ಷಿಸಲಾಗುತ್ತಿದೆ ಎಂದು ನ್ಯಾಷನಲ್ ಪಾರ್ಕ್ ಅಧಿಕಾರಿಗಳು ತಿಳಿಸಿದ್ದಾರೆ.
ಬೊರಾ ಎಂಬ ಆಫ್ರಿಕಾ ಆನೆ ಇತ್ತೀಚೆಗೆ ಎರಡು ಅವಳಿ ಮರಿಗಳಿಗೆ ಜನ್ಮ ನೀಡಿದೆ ಎಂದು ಕೀನ್ಯಾದ ವನ್ಯಜೀವಿ ಇಲಾಖೆ ಮಾಹಿತಿ ನೀಡಿದೆ. 2006ರಲ್ಲಿ ಕೀನ್ಯಾದಲ್ಲಿ ಒಂದು ಆನೆ ಅವಳಿ ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಆ ಮರಿಗಳು ಮರಣ ಹೊಂದಿದ್ದವು ಎನ್ನಲಾಗಿದೆ.
ಕೀನ್ಯಾದಲ್ಲಿ 2018ರಲ್ಲಿ 16,000 ಇದ್ದ ಆನೆಗಳ ಸಂಖ್ಯೆ 2020ರಲ್ಲಿ 34,000ಕ್ಕೆ ಏರಿಕೆಯಾಗಿದೆ.