Wednesday, July 6, 2022

ಮತ್ತೆ ಚಿನ್ನ, ಬೆಳ್ಳಿ ದುಬಾರಿ

Follow Us

newsics.com
ಬೆಂಗಳೂರು: ಶುಕ್ರವಾರ (ಮೇ 20) ಚಿನ್ನ, ಬೆಳ್ಳಿ ಮತ್ತೆ ದುಬಾರಿಯಾಗಿದೆ. 10 ಗ್ರಾಂ ಚಿನ್ನಕ್ಕೆ 640 ರೂ. ಹೆಚ್ಚಳವಾಗಿದೆ. ಬೆಳ್ಳಿ 1 ಕೆಜಿಗೆ ಬರೋಬ್ಬರಿ 900 ರೂ. ಏರಿಕೆಯಾಗಿದೆ.
ಚಿನ್ನದ ಉತ್ಪಾದನೆಯಲ್ಲಿ ಪ್ರಮುಖ ರಾಷ್ಟ್ರವಾಗಿರುವ ರಷ್ಯಾ ಮೇಲಿನ ನಿರ್ಬಂಧಗಳಿಂದಾಗಿ ಆಮದು ಕಡಿಮೆಯಾಗುವ ಭೀತಿ ಚಿನ್ನದ ಬೆಲೆಯ ಹೆಚ್ಚಳಕ್ಕೆ ಕಾರಣವಾಗಿದೆ. ದೇಶದಲ್ಲಿ ಚಿನ್ನದ ಬೆಲೆ ಹೆಚ್ಚಳಕ್ಕೆ ರಷ್ಯಾ- ಉಕ್ರೇನ್ ಯುದ್ಧ ಕೂಡ ಕಾರಣ ಎಂದು ವಿಶ್ಲೇಷಿಸಲಾಗಿದೆ.
ದೇಶದಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 47,350 ರೂ.ಗಳಷ್ಟಿತ್ತು. ಈಗ 47,950 ರೂ. ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ 51,670 ರೂ. ಇತ್ತು. ಈಗ 52,310 ರೂ. ಆಗಿದೆ.
22 ಕ್ಯಾರೆಟ್ ಚಿನ್ನ ಚೆನ್ನೈನಲ್ಲಿ 48,310 ರೂ. ಮುಂಬೈ- 47,950 ರೂ, ದೆಹಲಿ- 47,950 ರೂ, ಕೋಲ್ಕತ್ತಾ- 47,950 ರೂ, ಬೆಂಗಳೂರು- 47,950 ರೂ, ಹೈದರಾಬಾದ್- 47,950 ರೂ, ಕೇರಳ- 47,950 ರೂ, ಪುಣೆ- 48,050 ರೂ, ಮಂಗಳೂರು- 47,950 ರೂ, ಮೈಸೂರು- 47,950 ರೂ. ಇದೆ.
24 ಕ್ಯಾರೆಟ್ ಚಿನ್ನ ಚೆನ್ನೈನಲ್ಲಿ 52,700 ರೂ, ಮುಂಬೈ- 52,310 ರೂ, ದೆಹಲಿ- 52,310 ರೂ, ಕೋಲ್ಕತ್ತಾ- 52,310 ರೂ, ಬೆಂಗಳೂರು- 52,310 ರೂ, ಹೈದರಾಬಾದ್- 52,310 ರೂ, ಕೇರಳ- 52,310 ರೂ, ಪುಣೆ- 52,350 ರೂ, ಮಂಗಳೂರು- 52,310 ರೂ, ಮೈಸೂರು- 52,310 ರೂ.ಗಳಷ್ಟಿದೆ.
ನಿನ್ನೆ ಕುಸಿತ ಕಂಡಿದ್ದ ಬೆಳ್ಳಿ ಬೆಲೆ ಇಂದು ಭಾರೀ ಏರಿಕೆ ಕಂಡಿದೆ. ಒಂದೇ ದಿನದಲ್ಲಿ 1 ಕೆಜಿ ಬೆಳ್ಳಿ ಬೆಲೆ 900 ರೂ. ಏರಿಕೆಯಾಗಿದೆ. ದೇಶದಲ್ಲಿ 1 ಕೆಜಿ ಬೆಳ್ಳಿಯ ದರ 67,600 ರೂ.ಗಳಿದ್ದದ್ದು ಶುಕ್ರವಾರ 68,500 ರೂ. ಆಗಿದೆ. ಬೆಂಗಳೂರಿನಲ್ಲಿ 72,800 ರೂ, ಮೈಸೂರು- 72,800 ರೂ., ಮಂಗಳೂರು- 72,800 ರೂ., ಮುಂಬೈ- 68,500 ರೂ, ಚೆನ್ನೈ- 72,800 ರೂ, ದೆಹಲಿ- 68,500 ರೂ, ಹೈದರಾಬಾದ್- 72,800 ರೂ, ಕೋಲ್ಕತ್ತಾದಲ್ಲಿ 68,500 ರೂ.ಗಳಷ್ಟಿದೆ.

ಜೂನ್ ಮೂರನೇ ವಾರದಲ್ಲಿ ದ್ವಿತೀಯ ಪಿಯು ಫಲಿತಾಂಶ ಸಾಧ್ಯತೆ

ಕೆನಡಾ ಪಾರ್ಲಿಮೆಂಟ್ ನಲ್ಲಿ ಕನ್ನಡದಲ್ಲಿ ಮಾತನಾಡಿದ ಸಂಸದ ಚಂದ್ರ ಆರ್ಯ

ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತಕ್ಕೆ ಚಿನ್ನ

ಮತ್ತಷ್ಟು ಸುದ್ದಿಗಳು

vertical

Latest News

ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಐಎಎಸ್ ಅಧಿಕಾರಿಯ ಬಂಧನ

newsics.com ಜಾರ್ಖಂಡ್‌: ಜಾರ್ಖಂಡ್‌ನಲ್ಲಿ ಐಐಟಿ ವಿದ್ಯಾರ್ಥಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಖುಂಟಿ ಉಪವಿಭಾಗಾಧಿಕಾರಿ ಸಯ್ಯದ್ ರಿಯಾಜ್ ಅಹಮದ್ ಅವರನ್ನು ಸೋಮವಾರ ಬಂಧಿಸಲಾಗಿದೆ ಎಂದು ಪೊಲೀಸರು...

ರಾಜ್ಯದಲ್ಲಿ ಮಳೆಯ ಅಬ್ಬರ, ಚಿಕ್ಕಮಗಳೂರು ಸಹಿತ ಹಲವು ಜಿಲ್ಲೆಗಳಲ್ಲಿ ರಜೆ ಘೋಷಣೆ

newsics.com ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಲೆನಾಡು, ಕರಾವಳಿ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಎಡೆಬಿಡದೆ ಸುರಿಯುತ್ತಿರುವ ಮಳೆಯ ಹಿನ್ನೆಲೆಯಲ್ಲಿ ಶಿವಮೊಗ್ಗದ ಮೂರು ತಾಲೂಕುಗಳಲ್ಲಿ ಶಾಲೆಗೆ ರಜೆ ಘೋಷಿಸಲಾಗಿದೆ. ಸಾಗರ, ಹೊಸನಗರ ಮತ್ತು...

ಇಂದು ಚಂದ್ರಶೇಖರ್ ಗುರೂಜಿ ಅಂತ್ಯಕ್ರಿಯೆ

newsics.com ಹುಬ್ಬಳ್ಳಿ:  ದುಷ್ಕರ್ಮಿಗಳ ಚೂರಿ ಇರಿತದಿಂದ ಮೃತಪಟ್ಟಿರುವ ಸರಳ ವಾಸ್ತು ಖ್ಯಾತಿಯ ಚಂದ್ರ ಶೇಖರ್ ಗುರೂಜಿ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ನಡೆಯಲಿದೆ. ಹುಬ್ಬಳ್ಳಿ ಹೊರವಲಯದಲ್ಲಿರುವ ಅವರ ಜಮೀನಿನಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಸದಸ್ಯರು...
- Advertisement -
error: Content is protected !!