ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಆಲ್ ಇಂಡಿಯಾ ಇನ್ ಸ್ಯ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಮುಂದಿನ ವಾರ ಅಂತಿಮ ಪೊರೆನ್ಸಿಕ್ ವರದಿ ನೀಡಲಿದೆ.
ಈ ಬಗ್ಗೆ ಏಆಯ್ ಆಯ್ ಎಂಎಸ್ ಪೊರೆನ್ಸಿಕ್ ವಿಭಾಗದ ಮುಖ್ಯಸ್ಥ ಡಾ.ಸುಧೀರ್ ಗುಪ್ತಾ ವಿವರಣೆ ನೀಡಿದ್ದು, ಈಗಾಗಲೇ ನಾವು ವರದಿ ಸಿದ್ಧಪಡಿಸಿದ್ದೇವೆ.ಮೆಡಿಕಲ್ ಬೋರ್ಡ್ ನ ತಜ್ಞರ ಅಧ್ಯಯನ ವರದಿ ಮುಂದಿನ ವಾರ ಸಿಬಿಐ ಅಧಿಕಾರಿಗಳ ಕೈ ಸೇರಲಿದ್ದು ಇದು ತನಿಖೆ ಹಾಗೂ ಪ್ರಕರಣದ ಅನುಮಾನಗಳಿಗೆ ಉತ್ತರ ನೀಡಲಿದೆ ಎಂದಿದ್ದಾರೆ.
ಕೇಂದ್ರಿಯ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಹಾಗೂ ಸಿಬಿಐ ತನಿಖಾ ವರದಿ ಅರ್ಥ ಮಾಡಿಕೊಂಡ ಬಳಿಕ ಅಂತಿಮ ವೈಧ್ಯಕೀಯ ವರದಿ ನೀಡಬಹುದು ಎಂದು ಗುಪ್ತಾ ಅಭಿಪ್ರಾಯಿಸಿದ್ದಾರೆ.
ಸಪ್ಟೆಂಬರ್ ೭ ರಂದು ರಜಪೂತ್ ಸಾವಿನಲ್ಲಿ ವಿಷ ಪ್ರಾಶನದ ಸಾಧ್ಯತೆಗಳನ್ನು ಪರಿಶೀಲಿಸಲು ಏಮ್ಸ್ ಒಳಾಂಗಗಳ ಪರೀಕ್ಷೆ ಕೂಡ ನಡೆಸಿತ್ತು.
ಮುಂದಿನ ವಾರ ಏಮ್ಸ್ ನೀಡಲಿರುವ ವೈದ್ಯಕೀಯ ವರದಿ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ.
ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಶಾಂತ್ ಪ್ರೇಯಸಿ ರಿಯಾ ಚಕ್ರವರ್ತಿಯನ್ನು ಸಿಬಿಐ ವಶಕ್ಕೆ ಪಡೆದಿ
ಸುಶಾಂತ್ ಸಿಂಗ್ ಪ್ರಕರಣ ಮುಂದಿನ ವಾರ ಅಂತಿಮ ವರದಿ ನೀಡಲಿರುವ ಏಮ್ಸ್ ಎಫ್ಎಸ್ ಎಲ್ ತಂಡ
Follow Us