Sunday, May 29, 2022

ನಾಳೆ ಸಿಸಿಬಿ ಎದುರು ಹಾಜರಾಗಲಿರೋ ಐಂದ್ರಿತಾ-ದಿಗಂತ್

Follow Us

ಸ್ಯಾಂಡಲವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಟಾರ್ ಕಪಲ್ಸ್ ಐಂದ್ರಿತಾ ರೇ ಮತ್ತು ದಿಗಂತ್ ನಾಳೆ ಸಿಸಿಬಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ. ಈ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿರುವ ನಟಿ ಐಂದ್ರಿತಾ , ಸಿಸಿಬಿ ಅಧಿಕಾರಿಗಳು ಫೋನ್ ಮೂಲಕ ನೋಟಿಸ್ ನೀಡಿದ್ದು, ನಾಳೆ 11 ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ. ನಾಳೆ 11 ಗಂಟೆಗೆವಿಚಾರಣೆಗೆ ಹಾಜರಾಗುತ್ತೇವೆ ಹಾಗೂ ಸಿಸಿಬಿ ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತೇವೆ ಎಂದಿದ್ದಾರೆ.

ಇದಕ್ಕೂ ಮೊದಲು ಕೆಲ ಮಾಧ್ಯಮಗಳಿಗೆ ಕೊಂಚ ಅಸಮಧಾನದಿಂದಲೇ ಉತ್ತರ ನೀಡಿದ್ದ ನಟ ದಿಗಂತ್, ನಮಗೆ ಸಿಸಿಬಿ ನೋಟಿಸ್ ಸಿಕ್ಕಿದೆ. ನಾಳೆ ವಿಚಾರಣೆಗೆ ಹಾಜರಾಗುತ್ತೇವೆ. ನಾವೆಲ್ಲೂ ಓಡಿಹೋಗಿಲ್ಲ ಅಥವಾ ತಲೆಮರೆಸಿಕೊಂಡಿಲ್ಲ ಎಂದಿದ್ದರು. ಬಳಿಕ ಟ್ವೀಟರ್ ನಲ್ಲಿ ಪ್ರತ್ಯಕ್ಷವಾದ ನಟಿ ಐಂದ್ರಿತಾ ನಾಳೆ ಸಿಸಿಬಿ ಮುಂದೇ ಹಾಜರಾಗೋದಾಗಿ ಹೇಳಿದ್ದಾರೆ.

ಇದಕ್ಕೂ ಮುನ್ನ ಐಂದ್ರಿತಾ ದಂಪತಿ ಕೇರಳ ಪ್ರವಾಸಕ್ಕೆ ಹೋಗಿದ್ದಾರೆ. ಮನೆಯಲ್ಲಿ ಇಲ್ಲ ಎಂದು ದಿಗಂತ ಪೋಷಕರು ಮಾಹಿತಿ ನೀಡಿದ್ದರೇ, ಐಂದ್ರಿತಾ ರೇ ನಿವಾಸದ ಸೆಕ್ಯೂರಿಟಿ ಗಾರ್ಡ ಮೇಡಂ ಕಳೆದ ಐದು ದಿನದಿಂದ ಮನೆಗೆ ಬಂದಿಲ್ಲ. ಎಲ್ಲಿ ಹೋಗಿದ್ದಾರೆ ಗೊತ್ತಿಲ್ಲ ಎಂಬ ಪ್ರತಿಕ್ರಿಯೆ ನೀಡಿದ್ದ. ಈ ಹಿನ್ನೆಲೆಯಲ್ಲಿ ಐಂದ್ರಿತಾ ಸಿಸಿಬಿಯಿಂದ ಪಾರಾಗಲು ಬೆಂಗಳೂರಿನಿಂದ ಹೊರಕ್ಕೆ ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿತ್ತು.
ಮೂಲಗಳ ಮಾಹಿತಿ ಪ್ರಕಾರ, ರಾಗಿಣಿ ಬಂಧನವಾಗುತ್ತಿದ್ದಂತೆ ಈ ತಾರಾದಂಪತಿಗೆ ಸಿಸಿಬಿ ನೋಟಿಸ್ ಬರುವ ಭಯ ಎದುರಾಗಿದ್ದು, ಈಗಾಗಲೇ ಕಾನೂನಿನ ನೆರವಿಗಾಗಿ ವಕೀಲರನ್ನು ಸಂಪರ್ಕಿಸಿ ಎಲ್ಲ ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ . ನಾಳೆ ವಕೀಲರೊಂದಿಗೆ ಐಂದ್ರಿತಾ ರೇ ಹಾಗೂ ದಿಗಂತ ಸಿಸಿಬಿ ಮುಂದೇ ಹಾಜರಾಗಲಿದ್ದಾರೆ ಎನ್ನಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ

newsics.com ಬೆಂಗಳೂರು: ಹಿರಿಯ ನಟ, ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರಿಗೆ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಜನಸೇವೆ ಮಾಡುವ...

ಇಂದು 89 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಮಾತು

newsics.com ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇಂದು 89 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ 11 ಗಂಟೆಗೆ ಮಾತನಾಡಲಿದ್ದಾರೆ. 88 ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹಿಂದಿನ ಪ್ರಧಾನಿಗಳು ದೇಶಕ್ಕಾಗಿ ಮಾಡಿದ ಸೇವೆಯನ್ನು...

ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ಬಳಿಕ ಸ್ಮರಣ ಶಕ್ತಿಯನ್ನೇ ಕಳೆದು ಕೊಂಡ ಪತಿ!

newsics.com ಐರಿಷ್ : ಪತ್ನಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ 10 ನಿಮಿಷದ ಬಳಿಕ ವ್ಯಕ್ತಿಯು ನೆನಪಿನ ಶಕ್ತಿ ಕಳೆದುಕೊಂಡ ವಿಚಿತ್ರ ಘಟನೆಯು ಐರಿಷ್ ನಲ್ಲಿ ನಡೆದಿದೆ. ಇದೊಂದು ಅಲ್ಪಾವಧಿ ಸ್ಮರಣ ಶಕ್ತಿ ಸಮಸ್ಯೆಯಾಗಿದ್ದು ವೈದ್ಯಕೀಯ ಭಾಷೆಯಲ್ಲಿ...
- Advertisement -
error: Content is protected !!