ಶ್ರೀನಗರ: 71ನೇ ಗಣರಾಜ್ಯೋತ್ಸವದ ನೆನಪಿಗಾಗಿ ರಾಷ್ಟ್ರೀಯ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾ ಇದೇ ಮೊದಲ ಬಾರಿಗೆ ತನ್ನ ಪ್ರಯಾಣಿಕರಿಗೆ ಸುಮಾರು 30 ಸಾವಿರ ಬೀಜಸಹಿತ ಪರಿಸರಸ್ನೇಹಿ ರಾಷ್ಟ್ರಧ್ವಜಗಳನ್ನು ವಿತರಿಸಿದೆ.
ದೇಶದ ಪ್ರಮುಖ ವಿಮಾನ ನಿಲ್ದಾಣಗಳಾದ ಶ್ರೀನಗರ, ದೆಹಲಿ, ಮುಂಬಯಿ, ಕೊಲ್ಕತ್ತ, ಚೆನ್ನೈ, ಬೆಂಗಳೂರು ಹಾಗೂ ಹೈದರಾಬಾದ್‌ಗಳಲ್ಲಿ ಬೆಳಗ್ಗೆ ಆಗಮಿಸುವ ಪ್ರಯಾಣಿಕರಿಗೆ ಇವುಗಳನ್ನು ವಿತರಿಸಲಾಯಿತು ಎಂದು ಸಂಸ್ಥೆಯ ವಕ್ತಾರ ಧನಂಜಯ್ ಕುಮಾರ್ ತಿಳಿಸಿದರು.
ರಾಷ್ಟ್ರಧ್ವಜಗಳನ್ನು ಕೈಯಿಂದ ತಯಾರಿಸಲಾಗಿದೆ. ಈ ಧ್ವಜಗಳನ್ನು ಮಧ್ಯಪ್ರದೇಶದ ಸಹರಿಯ ಬುಡಕಟ್ಟು ಜನಾಂಗದ ಕಲಾವಿದರು ತಯಾರಿಸಿದ್ದಾರೆ. ಕಾಗದ, ಹತ್ತಿ ಚೂರು, ಬಟ್ಟೆ ತುಂಡುಗಳಿಂದ ತಯಾರಿಸಲಾಗಿದೆ. ಇವುಗಳಲ್ಲಿ ಚೆಂಡು ಮಲ್ಲಿಗೆ ಹಾಗೂ ಮೆಂತ್ಯ ಬೀಜಗಳನ್ನು ತುಂಬಿಸಲಾಗಿದೆ. ಇವುಗಳು ನೆಲಕ್ಕೆ ಬಿದ್ದರೆ, ಈ ಬೀಜಗಳು ಗಿಡಗಳಾಗಿ ಹಸಿರು ಪಸರಿಸಲಿದೆ ಎಂದರು.
ಹೂವಿನ ಬೀಜಸಹಿತ ಧ್ವಜ ವಿತರಿಸಿದ ಏರ್ ಇಂಡಿಯಾ
Follow Us