newsics.com
ಕೋಲ್ಕತ್ತ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಜಲಂಗಿ ಎಂಬಲ್ಲಿ ಅಲ್ಖೈದಾ ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಭಾನುವಾರ ಬಂಧಿಸಿದೆ.
ಶಮೀಮ್ ಅನ್ಸಾರಿ ಬಂಧಿತ ಉಗ್ರ. ಪಾಕಿಸ್ತಾನ ಮೂಲದ ಅಲ್ಖೈದಾ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪದ ಮೇಲೆ ಈತನನ್ನು ಬಂಧಿಸಲಾಗಿದೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ತಿಳಿಸಿದೆ.
ಈ ಮೊದಲು ಬಂಧಿಸಿರುವ ಭಯೋತ್ಪಾದಕರೊಂದಿಗೆ ಶಮೀಮ್ ನಂಟು ಹೊಂದಿರುವುದು ಖಚಿತವಾದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ. ಈತನ ಮೊಬೈಲ್ ಜಪ್ತಿ ಮಾಡಲಾಗಿದೆ. ಈತ ಕೇರಳಕ್ಕೂ ಭೇಟಿ ನೀಡಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಕೋಲ್ಕತ್ತದಲ್ಲಿ ಅಲ್ಖೈದಾ ಉಗ್ರನ ಬಂಧನ
Follow Us