Wednesday, May 18, 2022

ಬಿಪಿನ್ ರಾವತ್ ಸೇರಿ ಎಲ್ಲ 13 ಪಾರ್ಥಿವ ಶರೀರ ನಾಳೆ ದೆಹಲಿಗೆ ರವಾನೆ

Follow Us

newsics.com

ನವದೆಹಲಿ: ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಮೂರೂ ಸೇನಾಪಡೆಗಳ‌ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ ಎಲ್ಲ 13 ಪಾರ್ಥಿವ ಶರೀರಗಳನ್ನು ನಾಳೆ ದೆಹಲಿಗೆ ಸ್ಥಳಾಂತರಿಸಲಾಗುವುದು ಎಂದು ಸೇನಾ ಮೂಲಗಳು ತಿಳಿಸಿವೆ.

ಸೇನಾ ವಿಧಿ ವಿಧಾನಗಳಂತೆ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ (ಡಿ.9) ದೆಹಲಿಯಲ್ಲಿ ಅಂತ್ಯಕ್ರಿಯೆ ನಡೆಯುವ ಸಾಧ್ಯತೆಯಿದೆ.

ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರಗಳನ್ನು ದೆಹಲಿಗೆ ತರಲಾಗುವುದು. ಅಂತಿಮ‌ ದರ್ಶನದ ಬಳಿಕ ಅಂತ್ಯಕ್ರಿಯೆ ನಡೆಯಲಿದೆ. ಈ ಕುರಿತಂತೆ ಪ್ರಧಾನಿ‌ ಮೋದಿಯವರು ಬುಧವಾರ ಸಂಜೆ ಕರೆದಿರುವ ತುರ್ತು ಸಭೆಯಲ್ಲಿ ಚರ್ಚೆ ನಡೆಯಲಿದೆ.

ರಾವತ್ ಸಾವಿಗೆ ಪ್ರಧಾನಿ ಮೋದಿ, ರಕ್ಷಣ ಅಸಚಿವ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂತಾಪ ಸೂಚಿಸಿದ್ದಾರೆ.

ಹೆಲಿಕಾಪ್ಟರ್ ದುರಂತ: ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಮಂದಿ ಸಾವು

ಮತ್ತಷ್ಟು ಸುದ್ದಿಗಳು

Latest News

2 ಖಾಸಗಿ ಬಸ್ಸುಗಳ ನಡುವೆ ಅಪಘಾತ ; ವಿಡಿಯೋ ವೈರಲ್

newsics.com ತಮಿಳುನಾಡು: ರಾಜ್ಯದ ಸೇಲಂನಲ್ಲಿ 2 ಖಾಸಗಿ ಬಸ್ಸುಗಳ ನಡುವೆ ಅಪಘಾತ ಸಂಭವಿಸಿದ್ದು ಮೂವತ್ತಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಅಪಘಾತದ ರಭಸಕ್ಕೆ ಬಸ್ ಚಾಲಕ ಸೇರಿದಂತೆ ಸೀಟಿನಲ್ಲಿದ್ದ ಪ್ರಯಾಣಿಕರು...

ಪಿ ಎಸ್ ಐ ಅಕ್ರಮ ನೇಮಕಾತಿ: ಜಾಮೀನು ಅರ್ಜಿ ತಿರಸ್ಕರಿಸಿದ ನ್ಯಾಯಾಲಯ

newsics.com ಕಲಬುರಗಿ: ಪಿ ಎಸ್ ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಭಾಗಿಯಾಗಿದ್ದ ಅಭ್ಯರ್ಥಿ ಪ್ರಭು ಹಾಗೂ ಶರಣಪ್ಪ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ. ಕಲಬುರಗಿಯ ಮೂರನೇ ಜೆ ಎಂ ಎಫ್ ನ್ಯಾಯಾಲಯದ ನ್ಯಾಯಾಧೀಶರಾದ ಬಸವರಾಜ...

ಉಪ್ಪಿನ ಕಾರ್ಖಾನೆ ಗೋಡೆ ಕುಸಿದು 12‌ ಕಾರ್ಮಿಕರು ಸಾವು

newsics.com ಅಹಮದಾಬಾದ್: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯೊಂದರ ಗೋಡೆ ಕುಸಿದು ಬುಧವಾರ 12 ಕಾರ್ಮಿಕರು ಮೃತಪಟ್ಟಿದ್ದಾರೆ. ಗುಜರಾತ್‌ನ ಮೊರ್‌ಬಿ ಜಿಲ್ಲೆಯ ಹಲ್‌ವಾಡ್ ಕೈಗಾರಿಕಾ ಪ್ರದೇಶದ ‘ಸಾಗರ್ ಸಾಲ್ಟ್ ಫ್ಯಾಕ್ಟರಿ’ಯಲ್ಲಿ ಈ ದುರಂತ ಸಂಭವಿಸಿದೆ. ಗುಜರಾತ್‌ನ ಕೈಗಾರಿಕಾ ಸಚಿವ ಬೃಜೇಶ್...
- Advertisement -
error: Content is protected !!