ಮುಂಬೈ: ಎಲ್ಲರನ್ನು ನಿಬ್ಬೆರಗುಗೊಳಿಸಿ ಆತ್ಮಹತ್ಯೆಗೆ ಶರಣಾಗಿರುವ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ರಹಸ್ಯ ಇನ್ನೂ ನಿಗೂಢವಾಗಿ ಉಳಿದಿದೆ. ಸಿಬಿಐ ತನಿಖೆ ನಡೆಸಬೇಕು ಎಂಬ ಬೇಡಿಕೆ ಕೂಡ ತೀವ್ರಗೊಂಡಿದೆ. ಇದೇ ಸಂದರ್ಭದಲ್ಲಿ ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮದ ಜತೆ ನಡೆಸಿದ ಮಾತುಕತೆಯೆಂದು ಬಿಂಬಿಸುವ ವೀಡಿಯೊವೊಂದು ಬಿಡುಗಡೆಯಾಗಿದೆ. ಇದು ಸಂಚಲನ ಮೂಡಿಸಿದೆ.
ಅತೀಂದ್ರ ಸಂವಹನಕಾರರೆಂದೇ ಹೆಸರುವಾಸಿಯಾಗಿರುವ ಸ್ಟೀವ್ ಹಫ್ ಈ ವೀಡಿಯೊ ಬಿಡುಗಡೆ ಮಾಡಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮದ ಜತೆ ಮಾತುಕತೆ ನಡೆಸಿದ್ದೇನೆ ಎಂದು ಅವರು ಹಕ್ಕು ಮಂಡಿಸುತ್ತಿದ್ದಾರೆ.
ನನ್ನ ಪರಿಚಯವಿದೆಯೇ ಎಂಬ ಪ್ರಶ್ನೆಯೊಂದಿಗೆ ಮಾತು ಆರಂಭವಾಗುತ್ತದೆ.. ಅದು ಮುಂದುವರಿಯುತ್ತದೆ. ಮನುಷ್ಯರ ಜತೆ ದೊಡ್ಡ ವಾಗ್ವಾದ ಎಂದು ಹೇಳಿದೆಯಲ್ಲ ಎಂಬ ಪ್ರಶ್ನೆಗೆ ಅದು ಇದೀಗ ಕೊನೆಗೊಂಡಿದೆ ಎಂಬ ಉತ್ತರ ಬರುತ್ತದೆ.
ಏನನ್ನಾದರೂ ಹೇಳಲು ಇಚ್ಚಿಸುತ್ತೀಯಾ ಎಂಬ ಪ್ರಶ್ನೆಗೆ ಆತ್ಮ ನಾನು ಚೆನ್ನಾಗಿದ್ದೇನೆ ಎಂಬ ಉತ್ತರ ನೀಡುತ್ತದೆ.
ನೀನು ಹೇಗೆ ಸತ್ತು ಹೋದೆ ಏನಾದರೂ ಜ್ಞಾಪಕ ಬರುತ್ತದೆಯೇ ಎಂಬ ಪ್ರಶ್ನೆಗೆ ಅವರು ಮೊಳೆ ತಂದರು ಎಂದು ಆತ್ಮ ಉತ್ತರಿಸುತ್ತದೆ. ಇಲ್ಲಿ ಮೊಳೆ ಎಂಬ ಶಬ್ದ ನೇಣು ಹಗ್ಗವನ್ನು ಸೂಚಿಸುತ್ತದೆ ಎಂದು ಸುಶಾಂತ್ ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ.
ಸುಶಾಂತ್ ಸಿಂಗ್ ನಿಧನಹೊಂದಿ ಒಂದು ತಿಂಗಳು ಕಳೆದರೂ ಅವರ ಸಾವಿನ ಕುರಿತ ನಿಗೂಢತೆ ಇನ್ನೂ ಬಗೆಹರಿದಿಲ್ಲ. ದಿನಕ್ಕೊಂದು ಹೊಸ ವಾದ ಆರೋಪ ಕೇಳಿ ಬರುತ್ತಲೆ ಇದೆ.