Wednesday, July 6, 2022

ಬಹುತೇಕ ಮುಳುಗಿದ ವಿದೇಶಿ ಹಡಗು: ತೈಲ ಸೋರಿಕೆ ಭೀತಿ

Follow Us

newsics.com

ಮಂಗಳೂರು: ವಿದೇಶಿ ಹಡಗೊಂದು‌ ಇಲ್ಲಿಗೆ ಸಮೀಪದ ಬಟ್ಟಪ್ಪಾಡಿಯಲ್ಲಿ ಬಹುತೇಕ ಮುಳುಗಿದ್ದು, ತೈಲ ಸೋರಿಕೆ ಭೀತಿ ಎದುರಾಗಿದೆ.

ಹಡಗಿನಿಂದ ಎಂಜಿನ್ ತೈಲ ಸೋರಿಕೆ ತಡೆಗಟ್ಟಲು ಹಾಗೂ ಹಡಗಿನಲ್ಲಿರುವ ಫರ್ನಸ್ ತೈಲ ಮತ್ತು ಎಂಜಿನ್ ತೈಲ ಹೊರತೆಗೆಯಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಕರಾವಳಿ ಕಾವಲು ಪಡೆಯ ಡಿಐಜಿಗೆ ಸೂಚಿಸಿದೆ.

ರಂಧ್ರದ ಮೂಲಕ ನೀರು ಒಳಗೆ ಬರುತ್ತಿದ್ದ ಕಾರಣ ಸಮುದ್ರದ ಮಧ್ಯೆ ಇರುವ ಹಡಗು ಬಹುತೇಕ ಮುಳುಗಿದೆ. ‘ಪ್ರಿನ್ಸೆಸ್ ಮಿರಾಲ್’ ಹಡಗಿನಲ್ಲಿ 160 ಟನ್‌ನಷ್ಟು ಫರ್ನಸ್ ತೈಲ ಹಾಗೂ 60 ಟನ್‌ನಷ್ಟು ಎಂಜಿನ್ ತೈಲ ಇದೆ ಎಂದು ಅಂದಾಜಿಸಲಾಗಿದೆ.

ದೊಡ್ಡ ಪ್ರಮಾಣದಲ್ಲಿ ತೈಲ ಸೋರಿಕೆಯಾಗುವ ಸಾಧ್ಯತೆ ಇರುವುದರಿಂದ ನೆರೆಯ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಗೂ ಎಚ್ಚರಿಕೆಯ ಸಂದೇಶ ರವಾನಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಸರಕು, ಇಂಧನ, ಸಿಬ್ಬಂದಿ, ಆಹಾರ ಸೇರಿ 7,061 ಮೆಟ್ರಿಕ್ ಟನ್ ಡೆಡ್‌ ವೇಟ್‌ ಟನೇಜ್ ಹೊಂದಿರುವ 32 ವರ್ಷ ಹಳೆಯದಾದ ಈ ಹಡಗು 8 ಸಾವಿರ ಟನ್‌ ಉಕ್ಕಿನ ಕಾಯಿಲ್‌ಗಳನ್ನು ಚೀನಾದ ಟಿಯಾಂಜಿನ್‌ನಿಂದ ಲೆಬನಾನ್‌ಗೆ ಸಾಗಿಸಲಾಗುತ್ತಿತ್ತು.

ಆರು ಹಡಗು, ಎರಡು ಡಾರ್ನಿಯರ್‌ ವಿಮಾನಗಳು, ಎರಡು ಸ್ಥಳೀಯ ಹಡಗುಗಳ ಮೂಲಕ ತೈಲ ಸೋರಿಕೆ ಬಗ್ಗೆ ನಿರಂತರ ನಿಗಾ ವಹಿಸಲಾಗುತ್ತಿದೆ

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಘೋಷಣೆ ಅಸಾಧ್ಯ: ಸಿಎಂ

ಮೂವರು ಮಕ್ಕಳನ್ನು‌ ಕೊಂದು ಪತ್ನಿಯನ್ನೂ ಬಾವಿಗೆ ತಳ್ಳಿ ಆತ್ಮಹತ್ಯೆ ಯತ್ನ, ತಂದೆ- ತಾಯಿ ಬಚಾವ್

ಟಾನ್ಸಿಲ್‌ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮಿಸ್ ಬ್ರೆಜಿಲ್ ಗ್ರೇಸಿ ಕೊರಿಯಾ ನಿಧನ

ಮತ್ತಷ್ಟು ಸುದ್ದಿಗಳು

vertical

Latest News

ಅವಧಿಗೂ ಮುನ್ನವೇ ಖೈದಿಗಳ ಬಿಡುಗಡೆ : ಕೇಂದ್ರ

newsics.com ನವದೆಹಲಿ: ಸ್ವಾತಂತ್ರ್ಯ ಅಮೃತಮಹೋತ್ಸವದ ಅಂಗವಾಗಿ 50 ವರ್ಷ ಮೇಲ್ಪಟ್ಟ ಮಹಿಳಾ ಖೈದಿ, ತೃತೀಯ ಲಿಂಗಿ, 60 ವರ್ಷ ಮೇಲ್ಪಟ್ಟ ಪುರುಷ ಮತ್ತು ಅಂಗವಿಕಲ ಖೈದಿಗಳನ್ನೂ ಸೆರೆವಾಸದಿಂದ...

ಸಾವಿರ ಕೋಟಿಯ ಗುರೂಜಿ ದಾರುಣ ಅಂತ್ಯ

newsics.com ಹುಬ್ಬಳ್ಳಿ; ವಾಸ್ತು ಶಾಸ್ತ್ರ  ಹೇಳುವ ಮೂಲಕ ಕರ್ನಾಟಕ ಮಾತ್ರವಲ್ಲದೆ ಇಡೀ ದೇಶಾದ್ಯಂತ ಚಿರಪರಿಚಿತರಾಗಿದ್ದ ಸರಳ ವಾಸ್ತು ಚಂದ್ರಶೇಖರ್ ಗುರೂಜಿ ಅವರನ್ನು ಇಂದು (ಜು.5) ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಬರ್ಬರವಾಗಿ ಕೊಲೆ ಮಾಡಲಾಗಿದೆ. ಆಸ್ತಿ...

ದಿಢೀರ್ ಶಬ್ದದಿಂದ ಭೂಮಿ ಸೀಳು, ಭಯಭೀತರಾದ ಶಿವಮೊಗ್ಗ ಮಂದಿ

newsics.com ಶಿವಮೊಗ್ಗ: ದಿಢೀರ್ ಶಬ್ದದಿಂದ ಭೂಮಿ ಸೀಳಾಗಿರುವ ಘಟನೆ ಸಾಗರದ ನೆಹರು ನಗರದಲ್ಲಿ ನಡೆದಿದೆ. ಒಮ್ಮೆಲೆ ಬಂದ ಶಬ್ದಕ್ಕೆ ನೆಹರು ನಗರದ ನಿವಾಸಿಗಳು ಭಯಭೀತರಾಗಿ ಹೊರಗೆ ಬಂದು ನೋಡಿದರೆ, ಭೂಮಿ ಸೀಳಾಗಿರುವುದು ಕಂಡು ಬಂದಿದೆ. ಭೂಮಿಯಿಂದ...
- Advertisement -
error: Content is protected !!