Saturday, December 10, 2022

ಸದ್ಯಕ್ಕೆ ಐಷಾರಾಮಿ ವಸ್ತು ಖರೀದಿ ಬೇಡ ಎಂದ ಅಮೇಜಾನ್ ಸಂಸ್ಥಾಪಕ, ಆರ್ಥಿಕ ಹಿಂಜರಿತ ಆತಂಕ

Follow Us

newsics.com

ಕ್ಯಾಲಿಫೋರ್ನಿಯಾ: ಸದ್ಯಕ್ಕೆ ಐಷಾರಾಮಿ ವಸ್ತು ಖರೀದಿ ಮಾಡದಂತೆ ಅಮೆಜಾನ್ ಸಂಸ್ಥಾಪಕ ಮತ್ತು ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಜನಸಾಮಾನ್ಯರಿಗೆ ಸಲಹೆ ನೀಡಿದ್ದಾರೆ.

ಟಿವಿ, ಫ್ರಿಡ್ಜ್, ಕಾರು ಖರೀದಿಸಲೇಬೇಡಿ, ನಿಮ್ಮ ಹಣವನ್ನು ಉಳಿಸಿಕೊಳ್ಳಿ ಎಂದಿರುವ ಅವರು, ಸದ್ಯದಲ್ಲೇ ಆರ್ಥಿಕ ಹಿಂಜರಿತದ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಮುಂಬರುವ ದಿನಗಳಲ್ಲಿ ಬದುಕು ಬಹಳ ಕಠಿಣವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಜಗತ್ತಿನ ಆರ್ಥಿಕತೆಯು ಇದೀಗ ಉತ್ತಮವಾಗಿ ಕಾಣುತ್ತಿಲ್ಲ. ಹೀಗಾಗಿ ಜನರು ದೊಡ್ಡ ಮೊತ್ತದ ಖರೀದಿಗಳನ್ನು ಮಾಡದಿರುವುದೇ ಉತ್ತಮ ಎಂದು ಸಂದರ್ಶನವೊಂದರಲ್ಲಿ, ಬೆಜೋಸ್ ಹೇಳಿದ್ದಾರೆ.

ದೊಡ್ಡ ಪರದೆಯ ಟಿವಿ, ಆಟೋಮೊಬೈಲ್ ಮತ್ತು ರೆಫ್ರಿಜರೇಟರ್‌ನಂತಹ ವಸ್ತುಗಳ ಖರೀದಿಯನ್ನು ಮುಂದೂಡುವಂತೆ ವಿಶೇಷವಾಗಿ ಅಮೆರಿಕನ್ನರಿಗೆ ಸಲಹೆ ನೀಡಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

2023ರ ‘ಬಾಬಾ ವಂಗಾ’ ಭವಿಷ್ಯ – ಲ್ಯಾಬ್​ನಲ್ಲಿ ಮಕ್ಕಳ ಜನನ, ಲಕ್ಷಾಂತರ ಮಂದಿ ಸಾವು

newsics.com ನವದೆಹಲಿ: ವಿಶ್ವ ಪ್ರಸಿದ್ಧ ಬಾಬಾ ವಂಗಾ ಅನೇಕ ಭವಿಷ್ಯವಾಣಿಗಳು ನಿಜವೆಂದು ಸಾಬೀತಾಗಿದೆ. ಇದೀಗ 2023ರ ಕುರಿತು ಭಯಾನಕ ಭವಿಷ್ಯ ನುಡಿದಿದ್ದಾರೆ. 2023 ರ ಬಗ್ಗೆ ಬಾಬಾ ವಂಗಾ...

ಕೆಎಂಎಫ್ ಸಿಹಿ ತಿನಿಸು, ತುಪ್ಪದ ದರ ಏರಿಕೆ

newsics.com ಬೆಂಗಳೂರು: ಹಾಲಿನಿಂದ ತಯಾರಾಗುವ ಎಲ್ಲ ಉತ್ಪನ್ನಗಳ ಬೆಲೆಯಲ್ಲಿ ಏರಿಕೆ ಮಾಡಲಾಗಿದೆ.  ಇದೀಗ ಕೆಎಂಎಫ್ ಸಿಹಿ ತಿನಿಸು ಹಾಗೂ ತುಪ್ಪದ ದರ ಏರಿಕೆ. ಕೆಎಂಎಫ್  ಪ್ರತಿ ಉತ್ಪನ್ನದ ಮೇಲೆ ಶೇ. 5 ರಿಂದ ರಿಂದ ಶೇ....

18-25 ವರ್ಷದ ಒಳಗಿನ ಯುವಜನತೆಗೆ ಉಚಿತ ಕಾಂಡೋಮ್‌

newsics.com ಪ್ಯಾರಿಸ್: ಯುವಜನರಿಗೆ ಕಾಂಡೋಮ್‌ಗಳನ್ನು ಉಚಿತವಾಗಿ ನೀಡಲಾಗುವುದು ಎಂದು ಫ್ರಾನ್ಸ್‌  ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ತಿಳಿಸಿದ್ದಾರೆ. ಯುವ ಜನರ ಆರೋಗ್ಯದ ಕುರಿತಾದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು,ಲೈಂಗಿಕವಾಗಿ ಹರಡುವ ರೋಗಗಳ ಹರಡುವಿಕೆಯನ್ನು ಕಡಿಮೆ...
- Advertisement -
error: Content is protected !!