ಅಮೆರಿಕ: ಮಗುವಿಗೆ ಜನ್ಮ ನೀಡಲು ಅಮೆರಿಕಕ್ಕೆ ತೆರಳುತ್ತಿದ್ದ ‘ಬರ್ತ್ ಟೂರಿಸಂ’ ಮೇಲೆ ವಿಸಾ ನೀಡುವ ವಿಚಾರದಲ್ಲಿ ನಿರ್ಬಂಧ ಹೇರಲು ಅಮೆರಿಕ ಮುಂದಾಗಿದೆ. ಹೊಸ ವೀಸಾ ನಿಯಮಗಳು ಶುಕ್ರವಾರ(ಜ.24)ದಿಂದಲೇ ಜಾರಿಗೆ ಬರಲಿವೆ.
ಅಮೆರಿಕಕ್ಕೆ ಬರುವ ಗರ್ಭಿಣಿ ವಿಸಾ ಅರ್ಜಿದಾರರನ್ನು ಈಗ ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ಬರುವ ಇತರ ವಿದೇಶಿಯರಂತೆ ಪರಿಗಣಿಸಲು ತೀರ್ಮಾನಿಸಿದೆ.
ಮಗುವಿಗೆ ಜನ್ಮ ನೀಡಲು ಅಮೆರಿಕಕ್ಕೆ ತೆರಳುವ ಅರ್ಜಿದಾರರು ತಾವು ವೈದ್ಯಕೀಯ ಚಿಕಿತ್ಸೆಗಾಗಿ ಬರುತ್ತಿದ್ದೇವೆ ಎಂದು ಸಾಬೀತುಪಡಿಸಬೇಕು ಮತ್ತು ಅದನ್ನು ಪಾವತಿಸಲು ಅವರ ಬಳಿ ಹಣವಿದೆ ಎಂದು ತಿಳಿಸಬೇಕು.
ಮಗುವಿಗೆ ಅಮೆರಿಕ ಪೌರತ್ವ ಪಡೆಯುವ ನೆಪದಿಂದ ‘ಬರ್ತ್ ಟೂರಿಸಂ’ ವೀಸಾದಡಿಯಲ್ಲಿ ತೆರಳಿ ಮಕ್ಕಳಿಗೆ ಅಲ್ಲಿನ ಪೌರತ್ವ ಪಡೆಯುವ ಪ್ರಕರಣಗಳು ಹೆಚ್ಚಾಗಿವೆ ಎಂದು ಅಲ್ಲಿನ ಮೂಲಗಳು ಹೇಳಿವೆ. ವಿಸಾ ವಂಚನೆ ಹಾಗೂ ತೆರಿಗೆ ವಂಚನೆ ಹೆಚ್ಚಾಗಿದೆ ಎಂಬುದು ಟ್ರಂಪ್ ಆಡಳಿತದ ಆರೋಪ.
ಈ ಸೌಲಭ್ಯ ಒದಗಿಸಲು 80,000 ಡಾಲರ್ ವರೆಗೂ ಶುಲ್ಕ ವಿಧಿಸುತ್ತವೆ. ಸೆಂಟರ್ ಫಾರ್ ಇಮಿಗ್ರೇಷನ್ ಸ್ಟಡೀಸ್ ಪ್ರಕಾರ, 2012 ರಲ್ಲಿ ಅಮೆರಿಕದಲ್ಲಿ ಸುಮಾರು 36,000 ವಿದೇಶಿ ಮೂಲದ ಮಹಿಳೆಯರು ಮಗುವಿಗೆ ಜನ್ಮ ನೀಡಿದ್ದರು.
ಬರ್ತ್ ಟೂರಿಸಂ ವಿಸಾ ಮೇಲೆ ನಿರ್ಬಂಧ ಹೇರಿದ ಅಮೆರಿಕ
Follow Us