newsics.com
ನವದೆಹಲಿ: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಈವರೆಗೆ ಒಂದೂವರೆ ಕೋಟಿ ಭಾರತೀಯರು ರಾಷ್ಟ್ರಗೀತೆ ಹಾಡಿದ್ದಾರೆ.
ಭಾರತೀಯರು ರಾಷ್ಟ್ರಗೀತೆಯನ್ನು ಒಟ್ಟಾಗಿ ಹಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ್ದ ಕರೆಗೆ ಭಾರೀ ಸ್ಪಂದನೆ ವ್ಯಕ್ತವಾಗಿದೆ.
1.5 ಕೋಟಿ ಮಂದಿ ರಾಷ್ಟ್ರಗೀತೆ ಹಾಡಿ ವಿಡಿಯೋಗಳನ್ನು ಸರ್ಕಾರದ ವೆಬ್‌ಸೈಟ್ rashtragaan.inಗೆ ಅಪ್ಲೋಡ್ ಮಾಡಿದ್ದಾರೆ ಎಂದು ಪ್ರೆಸ್ ಇನ್ಫರ್ಮೇಷನ್ ಬ್ಯೂರೊ (ಪಿಐಬಿ) ತಿಳಿಸಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 25 ರಂದು ‘ಮನ್ ಕಿ ಬಾತ್’ನಲ್ಲಿ ದೇಶದ ನಾಗರಿಕರು ರಾಷ್ಟ್ರಗೀತೆಯನ್ನು ಒಟ್ಟಿಗೆ ಹಾಡಲು ಕರೆ ನೀಡಿದ್ದರು.
ನಾಗರಿಕರು ರಾಷ್ಟ್ರಗೀತೆ ‘ಜನ ಗಣ ಮನ’ ಹಾಡಿ, ಅದನ್ನು ವಿಡಿಯೊ ಮಾಡಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಆಗಸ್ಟ್ 15 ರವರೆಗೆ ಸಂಸ್ಕೃತಿ ಇಲಾಖೆ ತಿಳಿಸಿತ್ತು.
ಪ್ರಸಿದ್ಧ ವಿದ್ವಾಂಸರು, ಕಲಾವಿದರು, ಹಿರಿಯ ಅಧಿಕಾರಿಗಳು, ಕೆಚ್ಚೆದೆಯ ಸೈನಿಕರು, ರೈತರು, ಕಾರ್ಮಿಕರು ಸೇರಿ ದೇಶದ ಎಲ್ಲ ಭಾಗಗಳ ಜನರೂ ರಾಷ್ಟ್ರಗೀತೆಯನ್ನು ಹಾಡಿದ್ದಾರೆ. ವಿದೇಶಗಳಲ್ಲಿ ನೆಲೆಸಿರುವ ಭಾರತೀಯರೂ ರಾಷ್ಟ್ರಗೀತೆಗೆ ದನಿಗೂಡಿಸಿದ್ದಾರೆ.
ಭಾರತೀಯ ಅಥ್ಲೀಟ್ಸ್’ಗಳ ಸಾಧನೆ ಯುವ ಪೀಳಿಗೆಗೆ ಸ್ಪೂರ್ತಿ-ರಾಷ್ಟ್ರಪತಿ ರಾಮನಾಥ್ ಕೋವಿಂದ್
ಕೊರೋನಾ ಸೋಂಕು ಹೆಚ್ಚಿರುವ ಜಿಲ್ಲೆಗಳಲ್ಲಿ ಶಾಲೆ ಆರಂಭ ಇಲ್ಲ: ಸಿಎಂ ಬೊಮ್ಮಾಯಿ