newsics.com
ಹೊಸಪೇಟೆ: ಖಾತೆ ಹಂಚಿಕೆ ವಿಚಾರವಾಗಿ ಮುನಿಸಿಕೊಂಡಿರುವ ಸಚಿವ ಆನಂದ್ ಸಿಂಗ್ ಇಂದು ತಮ್ಮ ಅನಿಸಿಕೆಯನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ.
ಹೊಸಪೇಟೆಯಲ್ಲಿರುವ ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ನಡೆದ ಪೂಜೆಯ ಬಳಿಕ ಅವರು ತಮ್ಮ ಮನದಾಳದ ಮಾತನ್ನು ಬಹಿರಂಗಪಡಿಸಿದ್ದಾರೆ.
ಶ್ರೀಕೃಷ್ಣನ ಅನುಗ್ರಹ ಇದ್ದರೆ ರಾಜಕೀಯದಲ್ಲಿ ಮುಂದುವರಿಯುತ್ತೇನೆ. ಇಲ್ಲದಿದ್ದರೆ ಅದು ಇಲ್ಲಿಯೇ ಕೊನೆಗೊಳ್ಳುತ್ತದೆ ಎಂದು ಆನಂದ್ ಸಿಂಗ್ ಮಾರ್ಮಿಕವಾಗಿ ನುಡಿದಿದ್ದಾರೆ.
15 ವರ್ಷಗಳ ಹಿಂದೆ ಇದೇ ದೇವಸ್ಥಾನದಲ್ಲಿ ನನ್ನ ರಾಜಕೀಯ ಜೀವನ ಆರಂಭವಾಗಿತ್ತು. ಮುಂದೆ ಏನಾಗಲಿದೆ ಎಂಬುದನ್ನು ಆ ಕೃಷ್ಣ ಪರಮಾತ್ಮ ತೀರ್ಮಾನಿಸಲಿದ್ದಾನೆ ಎಂದು ಆನಂದ್ ಸಿಂಗ್ ಹೇಳಿದ್ದಾರೆ.