newsics.com
ಲಂಡನ್: ಇನ್ನೂ ಒಂದು ದಶಕ ಕಾಲ ಕೊರೋನಾ ವೈರಸ್ ನಮ್ಮ ಜತೆಯೇ ಇರಲಿದೆ ಎಂದು ಬಯೋಟೆಕ್ ಸಿಇಓ ಉಗುರ್ ಸಾಹಿನ್ ಹೇಳಿದ್ದಾರೆ.
ಕೊರೋನಾ ವೈರಸ್ ಇನ್ನೂ ಎಷ್ಟು ಸಮಯ ನಮ್ಮ ಮಧ್ಯೆ ಇರಬಹುದು ಎಂದು ಕೇಳಲಾದ ಪ್ರಶ್ನೆಗೆ ಸಾಹಿನ್ ಈ ಉತ್ತರ ನೀಡಿದ್ದಾರೆ. ಕೊರೋನಾ ವೈರಸ್ ಹೊಡೆತಕ್ಕೆ ತತ್ತರಿಸಿರುವ ಸಂಪೂರ್ಣ ಜಗತ್ತು ರೂಪಾಂತರಿ ಕೊರೋನಾ ವೈರಸ್ ಭಯದಲ್ಲಿದೆ. ಉಗುರ್ ಸಾಹಿನ್ ಅವರ ಹೇಳಿಕೆ ಮತ್ತಷ್ಟು ಆತಂಕ ಹುಟ್ಟಿಸಿದೆ.
ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಮಾನ್ಯ ಜೀವನಕ್ಕೆ ಮರಳುವುದು ಸುಲಭದ ಮಾತಲ್ಲ. ಮುಂದಿನ 10 ವರ್ಷ ಕಾಲ ಈ ವೈರಸ್ ನಮ್ಮೊಟ್ಟಿಗೇ ಇರಲಿದೆ ಎಂದು ಹೇಳಿದ್ದಾರೆ.
ಅಮೆರಿಕ ಔಷಧೀಯ ಸಂಸ್ಥೆ ದೈತ್ಯ ಫೈಜರ್ನೊಂದಿಗೆ ಸೇರಿದ ಬಯೋಟೆಕ್ ಕೊರೊನಾ ವಿರುದ್ಧ ಲಸಿಕೆ ಅಭಿವೃದ್ಧಿ ಪಡಿಸಿದ್ದು ಈಗಾಗಲೇ ಅಮೆರಿಕ, ಬ್ರಿಟನ್ ಸೇರಿದಂತೆ ವಿಶ್ವದ 45 ರಾಷ್ಟ್ರಗಳಲ್ಲಿ ತುರ್ತು ಅನುಮೋದನೆ ಪಡೆದುಕೊಂಡಿದೆ.
ಅಮೇಜಾನ್ ಕಚೇರಿ ದ್ವಂಸಗೊಳಿಸಿದ ನವನಿರ್ಮಾಣ ಸೇನಾ ಕಾರ್ಯಕರ್ತರು
ವೈಕುಂಠ ಏಕಾದಶಿ; ತಿರುಪತಿ ಹುಂಡಿಯಲ್ಲಿ ದಾಖಲೆ ಹಣ ಸಂಗ್ರಹ