newsics.com
ಚಾಮರಾಜನಗರ: ಯೂನಿಕೋಡ್ನಲ್ಲಿ ಬಳಸಲು ಅನುಕೂಲವಾಗುವಂತೆ ಕನ್ನಡದಲ್ಲಿ ಹೊಸ ಫಾಂಟ್ವೊಂದನ್ನು ಆವಿಷ್ಕರಿಸಲಾಗಿದೆ
ಮೈಸೂರು ಜಿಲ್ಲೆ ಟಿ. ನರಸೀಪುರದ ಆರ್ ಮಂಜುನಾಥ್ ಈ ಫಾಂಟ್ ಆವಿಷ್ಕರಿಸಿದ್ದು, ಸಂಕ್ರಾಂತಿಯಂದು ಬಿಡುಗಡೆಯಾದ ಈ ಫಾಂಟ್ ಹೆಸರು ಬಂಡೀಪುರ.
ಆನೆಯಿಂದ ಪ್ರೇರಣೆ ಪಡೆದು ಈ ಫಾಂಟ್ ರಚಿಸಲಾಗಿದ್ದು, ಆದ್ದರಿಂದ ಆನೆಗಳ ತಾಣವಾಗಿರುವ ಬಂಡೀಪುರ ಹೆಸರನ್ನೇ ಫಾಂಟ್ಗೆ ಇಟ್ಟಿದ್ದಾಗಿ ಫಾಂಟ್ ತಯಾರಕ ಮಂಜುನಾಥ್ ಹೇಳಿದ್ದಾರೆ.
ಈ ಫಾಂಟ್ನ ಅಕ್ಷರದ ಶೈಲಿ ಆನೆಯಿಂದ ಪ್ರೇರಿತವಾಗಿದೆ. ಚೂಪಾದ ಅಂಚುಗಳು ಮತ್ತು ಅನಿಯಮಿತವಾದ ದಪ್ಪವನ್ನು ಹೊಂದಿವೆ. ಹೀಗಾಗಿ ಈ ಫಾಂಟ್ ಶೀರ್ಷಿಕೆಗಳು, ಪೋಸ್ಟರ್ಗಳಿಗೆ ದೊಡ್ಡ ಗಾತ್ರದಲ್ಲಿ ಬಳಸಲು ಸೂಕ್ತವಾಗಿದೆ.
ಮಂಜುನಾಥ್ ಅವರು ಮೂಲತಃ ಪೇಂಟಿಂಗ್ ಆರ್ಟಿಸ್ಟ್ ಆಗಿದ್ದು, ಪ್ರಸ್ತುತ ಆನಿಮೇಷನ್ ಕೋರ್ಸ್ ಹಾಗೂ ಗ್ರಾಫಿಕ್ ಡಿಸೈನ್ ಶಿಕ್ಷಕರಾಗಿ ಮೈಸೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಆರ್ಟಿಸ್ಟ್ ಆಗಿದ್ದಾಗ ಬ್ಯಾನರ್, ಪೋಸ್ಟರ್ಗಳು, ಫಲಕಗಳಲ್ಲಿ ಬರೆಯುತ್ತಿದ್ದ ಅಕ್ಷರಗಳ ಶೈಲಿಯನ್ನು ಡಿಜಿಟಲ್ ಫಾಂಟ್ಗಳಾಗಿ ಮಾಡಬೇಕೆಂಬ ಕನಸನ್ನು ಈಗ ನನಸಾಗಿಸಿದ್ದಾರೆ.
ಬಂಡೀಪುರ ಫಾಂಟ್ ಕನ್ನಡವಲ್ಲದೇ ಇಂಗ್ಲಿಷ್ ಸೇರಿ ಲ್ಯಾಟಿನ್ನ 135 ಲಿಪಿಗಳನ್ನು ಬೆಂಬಲಿಸುತ್ತದೆ. ಈ ಫಾಂಟಿನ ಪೂರ್ತಿ ಹೆಸರು ಎಟಿಎಸ್ ಬಂಡೀಪುರ.ಎಟಿಎಸ್ ಅಂದರೆ ಅಕ್ಷರ ಟೈಪ್ ಸ್ಟೂಡಿಯೋ. ಇದು ಮಂಜುನಾಥ್ ಅವರ ಸ್ವಂತ ಸಂಸ್ಥೆಯ ಹೆಸರು. ಇದು ಯೂನಿಕೋಡ್ ಫಾಂಟ್ ಆಗಿರುವುದರಿಂದ ಎಲ್ಲ ಕೀಬೋರ್ಡ್ಗಳಲ್ಲಿಯೂ ಬಳಸಬಹುದಾಗಿದೆ. ತಮ್ಮ ವೆಬ್ಸೈಟಿನಲ್ಲಿ ಹೆಸರಿಡದ ಇನ್ನಷ್ಟು ಹೊಸ ಫಾಂಟಿನ ಮಾದರಿಗಳನ್ನು ಮಂಜುನಾಥ್ ನೀಡಿದ್ದಾರೆ. ಮಾದರಿಗಳನ್ನು ನೋಡಲು aksharatypestudio.in/fonts/bandipura/ ಈ ಲಿಂಕ್ ಬಳಸಬಹುದು.
ಸಿಎಂ ಮನೆ ಭದ್ರತೆಯಲ್ಲಿದ್ದ ಪೊಲೀಸರಿಂದಲೇ ಡ್ರಗ್ ಡೀಲ್: ಇಬ್ಬರು ಕಾನ್ಸ್ಟೆಬಲ್ಗಳ ಬಂಧನ
ರೈಲಲ್ಲಿ ಹಸಿವಿನಿಂದ ಅತ್ತ ಮಗು, ಸಚಿವರಿಗೆ ತಾಯಿಯ ಟ್ವೀಟ್, 23 ನಿಮಿಷದಲ್ಲೇ ಸಿಕ್ತು ಹಾಲು!
ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂಗೆ ಬಿಜೆಪಿ ನಾಯಕರ, ಉದ್ಯಮಿಗಳ ಅಸಮಾಧಾನ