newsics.com
ಶ್ರೀನಗರ: ಜಮ್ಮು ಕಾಶ್ಮೀರದ ಪೂಂಛ್ ವಲಯದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ವೇಳೆ ಭಾರತದ ಐವರು ಯೋಧರು ಹುತಾತ್ಮರಾಗಿದ್ದಾರೆ. ಇವರಲ್ಲಿ ಜೂನಿಯರ್ ಕಮಿಷನ್ಡ್ ದರ್ಜೆ. ಅಧಿಕಾರಿಯೊಬ್ಬರು ಸೇರಿದ್ದಾರೆ.
ಪೂಂಛ್ ವಲಯ ವ್ಯಾಪ್ತಿಗೆ ಸೇರಿದ ಸುರಾಣ್ ಕೋಟ್ ಪ್ರದೇಶದಲ್ಲಿ ಉಗ್ರರಿಗೆ ಶೋಧ ನಡೆಸುತ್ತಿದ್ದ ವೇಳೆ ಗುಂಡಿನ ಚಕಮಕಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಯೋಧರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಐವರು ಯೋಧರು ವೀರ ಮರಣವನ್ನಪ್ಪಿದ್ದಾರೆ.
ಸುರಾಣ್ ಕೋಟ್ ಪ್ರದೇಶದಲ್ಲಿ ಕಾರ್ಯಾಚರಣೆ ಮುಂದುವರಿದಿದ್ದು. ಹೆಚ್ಚುವರಿ ಪಡೆಗಳನ್ನು ರವಾನಿಸಲಾಗಿದೆ.