newsics.com
ನವದೆಹಲಿ: ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಪ್ರದೇಶದಲ್ಲಿ ಯುದ್ಧ ಸಾಮಗ್ರಿ ಕೊಂಡೊಯ್ಯಲು ಹಾಗೂ ಗಸ್ತು ತಿರುಗಲು 2 ಡುಬ್ಬಗಳ ಒಂಟೆಗಳನ್ನು ಬಳಸಲು ಸೇನೆ ನಿರ್ಧರಿಸಿದೆ.
ಲಡಾಖ್‌ನ ಪೂರ್ವ ಭಾಗದ ದೌಲತ್‌ಬಾಗ್ ಓಲ್ಡಿ ಮತ್ತು ಡೆಪ್ಸಾಂಗ್‌ನಲ್ಲಿ ಈ ಒಂಟೆಗಳು ನಿಯೋಜನೆಗೊಳ್ಳಲಿವೆ. ಎತ್ತರದ ಶಿಖರಗಳಲ್ಲಿ ಇವು ಏಕಕಾಲಕ್ಕೆ 170 ಕೆ.ಜಿ. ತೂಕದ ಸಾಮಗ್ರಿಗಳನ್ನು ಹೊತ್ತೊಯ್ಯಬಲ್ಲವು.
ಭಾರತದ ವಶವಾದ ಈಶಾನ್ಯ ಲಡಾಖ್’ನ 6 ಗುಡ್ಡ
ಲಡಾಖ್’ನಲ್ಲಿ 12 ಸಾವಿರ ಅಡಿಗಳಿಗಿಂತಲೂ ಎತ್ತರದಲ್ಲಿರುವ ನುಬ್ರಾ ಕಣಿವೆ ಪ್ರದೇಶಗಳಲ್ಲಿ ಕಾಣಸಿಗುವ ಅವಳಿ ಡುಬ್ಬಗಳ ಈ ಒಂಟೆಯನ್ನು ಬ್ಯಾಕ್ಟ್ರಿಯನ್ ಒಂಟೆ ಎಂದೂ ಕರೆಯಲಾಗುತ್ತದೆ. ದುರ್ಗಮ ಬೆಟ್ಟಗಳನ್ನು ಹತ್ತಿಳಿಯುವಲ್ಲಿ ಇವು ಸಮರ್ಥವಾಗಿವೆ ಎಂಬುದು ಡಿಆರ್‌ಡಿಒ ಪರೀಕ್ಷೆಯಲ್ಲಿ ಸಾಬೀತಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
ಯುದ್ಧ ನೌಕೆಗೆ ಇಬ್ಬರು ಮಹಿಳಾ ಪೈಲಟ್!
ಚೀನಾ ಮತ್ತು ಭಾರತದ ನಡುವೆ ಯುದ್ಧದ ಕಾರ್ಮೋಡ ಕವಿದಿರುವ ಈ ಸಮಯದಲ್ಲಿ ಈ ಒಂಟೆಗಳನ್ನು ಬಳಸಿಕೊಳ್ಳಲು ಮುಂದಾಗಿರುವ ಭಾರತೀಯ ಸೇನೆಯ ನಿರ್ಧಾರ ಕುತೂಹಲ ಸೃಷ್ಟಿಸಿದೆ.
ಹೈಡ್ರೋಜನ್ ಚಾಲಿತ ವಿಮಾನ ನಿರ್ಮಾಣಕ್ಕೆ ಏರ್ ಬಸ್ ಸಿದ್ಧತೆ
ಇನ್ಮುಂದೆ ವಿದ್ಯುತ್‌ಗೂ ಸಿಗಲಿದೆ ಎಲ್‌ಪಿಜಿ ಮಾದರಿ ಸಬ್ಸಿಡಿ..!
ಅ.3ರಂದು ವಿಶ್ವದ ಅತಿ ಉದ್ದದ ‘ಅಟಲ್ ಸುರಂಗ ಮಾರ್ಗ’ ಲೋಕಾರ್ಪಣೆ
10 ಬಾರಿ ಎವರೆಸ್ಟ್ ಏರಿದ್ದ ‘ಹಿಮದ ಚಿರತೆ’ ಇನ್ನಿಲ್ಲ
ಚೀನಾದಿಂದ ಆಮದು ಪ್ರಮಾಣ ಶೇ.27 ಕುಸಿತ