Thursday, August 18, 2022

ಗುರೂಜಿ ಹಂತಕರಿಬ್ಬರ ಬಂಧನ

Follow Us

newsics.com

ಹುಬ್ಬಳ್ಳಿ: ಸರಳ ವಾಸ್ತು ತಜ್ಞ ಚಙದ್ರಶೇಖರ ಗುರೂಜಿ ಹಂತಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾಂತೇಶ್ ಶಿರೋಳ್, ಮಂಜುನಾಥ್ ದುಮ್ಮವಾಡ ಬಂಧಿತ ಆರೋಪಿಗಳು. ಮಹಾಂತೇಶ್ ಈ ಕೊಲೆಯ‌ ರೂವಾರಿ‌ ಹಾಗೂ ಗುರೂಜಿ ಸಂಸ್ಥೆಯ ಮಾಜಿ ಉದ್ಯೋಗಿ ವನಜಾಕ್ಷಿಯ ಪತಿ. ವನಜಾಕ್ಷಿಯನ್ನು ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದು, ಈಕೆ ನೀಡಿದ ಮಾಹಿತಿ ಆಧರಿಸಿಯೇ ಈ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬೆಳಗಾವಿಯ ರಾಮದುರ್ಗ ಬಳಿ ಈ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ನಡೆದ ನಾಲ್ಕು ಗಂಟೆಯಲ್ಲೇ ಹಂತಕರನ್ನು ಪೊಲೀಸರು ಹೆಡೆಮುರಿ‌ ಕಟ್ಟಿದ್ದಾರೆ.

ಹುಬ್ಬಳ್ಳಿ ಹಾಗೂ ರಾಮದುರ್ಗ ಪೊಲೀಸರು ಜಂಟಿ‌ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು‌ ಬಂಧಿಸಿದ್ದಾರೆ.

ಗುರೂಜಿಯನ್ನು ಕೊಲೆ‌ ಮಾಡಿದ ಬಳಿಕ ಬಟ್ಟೆ ಬದಲಾಯಿಸಿ ಕಾರಿನಲ್ಲಿ ಪರಾರಿಯಾಗುತ್ತಿದ್ದಾಗ ಬೆಳಗಾವಿ ಮಾರ್ಗದಲ್ಲಿ ಬಂಧಿಸಿರುವುದಾಗಿ‌ ಪೊಲೀಸರು ತಿಳಿಸಿದ್ದಾರೆ. ಬಂಧಿತರಿಬ್ಬರೂ ಗುರೂಜಿ ಆಪ್ತರು ಎನ್ನಲಾಗಿದೆ.

ಮತ್ತಷ್ಟು ಸುದ್ದಿಗಳು

vertical

Latest News

ಚಿನ್ನದ ದರದಲ್ಲಿ ಇಳಿಕೆ, ಬೆಳ್ಳಿ ದರ 200 ರೂಪಾಯಿ ಕಡಿಮೆ

newsics.com ಮುಂಬೈ: ಕಳೆದ ಎರಡು ದಿನಗಳಿಂದ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಇಳಿಕೆ ಕಂಡು ಬಂದಿದೆ. ಚಿನ್ನದ ದರ 110 ರೂಪಾಯಿ ಕಡಿಮೆಯಾಗಿದೆ. 22 ಕ್ಯಾರೆಟ್ 10 ಗ್ರಾಂ...

ಕೊಲೆಯಾದ ಸ್ಥಿತಿಯಲ್ಲಿ ಸಾಧುವಿನ ಮೃತದೇಹ ಪತ್ತೆ

newsics.com ಜೈಪುರ:  ರಾಜಸ್ತಾನದಲ್ಲಿ ಮತ್ತೊಂದು ಸಾಧು ನಿಗೂಢವಾಗಿ ಮೃತಪಟ್ಟಿದ್ದಾರೆ. ಕೊಲೆಯಾದ  ಸ್ಥಿತಿಯಲ್ಲಿ ಸಾಧುವಿನ ಮೃತ ದೇಹ ಪತ್ತೆಯಾಗಿದೆ. ಹನುಮಾನ್ ಘಡ್ ನ ಭಾಖ್ರವಾಲಿ ಎಂಬಲ್ಲಿ ಸಾಧು ನಾಗ ಚೇತನ್ ದಾಸ್ ಎಂಬವರ ಮೃತ ದೇಹ...

ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರ ಗೀತೆ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

newsics.com ಬೆಂಗಳೂರು:  ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತಿ ದಿನ ರಾಷ್ಟ್ರಗೀತೆ ಹಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರಾಜ್ಯ  ಸರ್ಕಾರ ಈ ಸಂಬಂಧ ಆದೇಶ ಹೊರಡಿಸಿದೆ. ಪದವಿ ಪೂರ್ವ ಕಾಲೇಜುಗಳಿಗೆ ಕೂಡ ಆದೇಶ ಅನ್ವಯವಾಗಲಿದೆ. ಸರ್ಕಾರಿ, ಖಾಸಗಿ  ಅನುದಾನ  ಮತ್ತು...
- Advertisement -
error: Content is protected !!