ಗುವಾಹಟಿ: ಅಸ್ಸಾಂನಲ್ಲಿ ಎಂಟು ಉಗ್ರ ಸಂಘಟನೆಗಳ ಒಟ್ಟು 644 ಉಗ್ರರು ಗುರುವಾರ ಮುಖ್ಯವಾಹಿನಿಗೆ ಸೇರ್ಪಡೆಯಾಗಿದ್ದಾರೆ.
ಎನ್ಡಿಎಫ್ಬಿ, ಯುಎಲ್ಎಫ್ಎ(ಐ), ಸಿಪಿಐ(ಮಾವೋವಾದಿ), ಆರ್ಎನ್ಎಲ್ಎಫ್, ಕೆಎಲ್ಒ, ಎನ್ಎಲ್ಎಫ್ಬಿ, ಎನ್ಎಸ್ಎಲ್ಎ ಮತ್ತು ಎಡಿಎಫ್ ಸಂಘಟನೆಗಳ ಉಗ್ರರು ಗುರುವಾರ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಸಮ್ಮುಖದಲ್ಲಿ ಶರಣಾಗಿದ್ದಾರೆ. ಔಪಚಾರಿಕವಾಗಿ ಶಸ್ತ್ರಾಸ್ತ್ರಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಶರಣಾಗಿರುವ ಉಗ್ರರ ಪುನರ್ವಸತಿ, ಜೀವನಕ್ಕಾಗಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಸರ್ಬಾನಂದ ತಿಳಿಸಿದರು.
ಅಸ್ಸಾಂ: ಸರ್ಕಾರಕ್ಕೆ ಶರಣಾದ 644 ಉಗ್ರರು
Follow Us