ಬೆಂಗಳೂರು: ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ವಿಧಾನಸಭಾ ಅಧಿವೇಶನ ನಿಗದಿತ ಅವಧಿಗಿಂತ ಮೊದಲೇ ಕೊನೆಗೊಳ್ಳಲಿದೆ. ಇದೇ ಶನಿವಾರ ಅಧಿವೇಶನವನ್ನು ಮೊಟಕುಗೊಳಿಸಲು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ.
ಈ ಮೊದಲು ಸದನವನ್ನು ಮೂರು ದಿನಗಳಿಗೆ ಮೊಟಕುಗೊಳಿಸಲು ಸರ್ಕಾರ ಉದ್ದೇಶಿಸಿತ್ತು. ಆದರೆ ಸಿಎಂ ಈ ಪ್ರಸ್ತಾಪಕ್ಕೆ ವಿರೋದ ಪಕ್ಷದ ನಾಯಕ ಸಿದ್ಧರಾಮಯ್ಯ ಒಪ್ಪಿಕೊಂಡಿರಲಿಲ್ಲ.
ಮಸೂದೆ ಮಂಡಿಸುವುದಾದರೇ ಚರ್ಚೆಗೆ ಅವಕಾಶ ಬೇಕು. ಹೀಗಾಗಿ ಮೂರು ದಿನಗಳಿಗೆ ಮಂಡಿಸಲು ಸಾಧ್ಯವಿಲ್ಲ. ಮಸೂದೆ ಮಂಡಿಸುವುದಿಲ್ಲ ಎಂದಾದರೇ ಮುಗಿಸಿ ಎಂದು ಸಿದ್ಧರಾಮಯ್ಯ ಹೇಳಿದ್ದರು. ಬಳಿಕ ಚರ್ಚೆ ನಡೆಸಿ ಇದೀಗ ಶನಿವಾರದವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ 7 ವರೆಗೆ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.
ಸಭೆಯಲ್ಲಿ ತಾವು ಮಂಡನೆಯಾಗುವ 40 ಕ್ಕೂ ಹೆಚ್ಚು ಮಸೂದೆಗಳ ಕುರಿತು ವಿಸ್ಕøತ ಚರ್ಚೆಗೆ ಅವಕಾಶನೀಡಬೇಕೆಂದು ಒತ್ತಾಯಿಸಿರುವುದಾಗಿ ಮಾಜಿಸಿಎಂ ಹಾಗೂ ವಿರೋದ ಪಕ್ಷದ ನಾಯಕ ಸಿದ್ಧರಾಮಯ್ಯ ಮಾಧ್ಯಮದವರಿಗೆ ತಿಳಿಸಿದ್ದಾರೆ. ಈ ಕುರಿತು ವಿಧಾನಸಭೆಯಲ್ಲಿ ನಡೆದ ಸಭೆಯಲ್ಲಿ ಸಂಸದೀಯ ವ್ಯೆವಹಾರಗಳ ಖಾತೆ ಸಚಿವ ಮಾಧುಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶಾಸಕರಾದ ರಮೇಶ್ ಕುಮಾರ್,ಆರ್.ವಿ.ದೇಶಪಾಂಡೆ, ಮುಖ್ಯಸಚೇತಕ ಸುನಿಲ್ ಕುಮಾರ್ ಹಾಜರಿದ್ದರು.
ವಿಧಾನಸಭಾ ಅಧಿವೇಶನ ಶನಿವಾರಕ್ಕೆ ಅಂತ್ಯ
Follow Us