newsics.com
ಬೆಂಗಳೂರು: ಹಾಲು, ವಿದ್ಯುತ್ ದರ ಏರಿಕೆ ಬಗ್ಗೆ ಸದ್ಯ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಆಡಳಿತದಲ್ಲಿ ದರ ಏರಿಕೆಯ ಪ್ರಸ್ತಾಪಗಳು ಇದ್ದೇ ಇರುತ್ತವೆ. ಎಲ್ಲ ಆಯಾಮಗಳಿಂದಲೂ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಈ ವಿಚಾರವಾಗಿ ಅವಸರದಲ್ಲಿ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಶನಿವಾರ ಹೇಳಿದರು.
ವಿದ್ಯುತ್ ದರ ಹೆಚ್ಚಳಕ್ಕಾಗಿ ಸದ್ಯ ಎಲ್ಲ ಎಸ್ಕಾಂಗಳು, ನೀರಿನ ದರ ಹೆಚ್ಚಳಕ್ಕಾಗಿ ಬೆಂಗಳೂರು ಜಲಮಂಡಳಿ, ಹಾಲಿನ ದರ ಹೆಚ್ಚಳಕ್ಕಾಗಿ ಕರ್ನಾಟಕ ಹಾಲು ಮಹಾಮಂಡಳಿ ದರ ಹೆಚ್ಚಳ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿರುವ ಹಿನ್ನೆಲೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ, ತಕ್ಷಣ ದರ ಹೆಚ್ಚಳ ಇಲ್ಲ ಎಂದರು.
ವೀಕೆಂಡ್ ಕರ್ಫ್ಯೂ ರದ್ದು ಒತ್ತಡದ ನಿರ್ಧಾರ ಅಲ್ಲ. ಮೂರನೇ ಅಲೆಯಲ್ಲಿ ಪಾಸಿಟಿವ್ ಹೆಚ್ಚಿದ್ದರೂ ತೀವ್ರತೆ ಕಡಿಮೆ ಇದೆ, ಬೇಕಾದ ಔಷಧಗಳು ಲಭ್ಯ ಇವೆ. ಅಲ್ಲದೆ, ಗುಣಮುಖ ಆಗುವವರ ಪ್ರಮಾಣ ಹೆಚ್ಚಾಗಿದೆ. ಹೀಗಾಗಿ ತಜ್ಞರು ಇದನ್ನು ಹೇಗೆ ನಿರ್ವಹಣೆ ಮಾಡಬಹುದು ಎಂಬ ಭರವಸೆ ನೀಡಿದ್ದಾರೆ. ಅಲ್ಲದೆ, ದುಡಿಯುವ ವರ್ಗಕ್ಕೆ ಆಗುತ್ತಿರುವ ತೊಂದರೆಯನ್ನು ಗಮನದಲ್ಲಿ ಇಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಹೇಳಿದರು.
ಸೂಕ್ಷ್ಮ ಮಾಹಿತಿಯನ್ನು ವಾಟ್ಸಾಪ್, ಟೆಲಿಗ್ರಾಂ ಮೂಲಕ ಕಳುಹಿಸದಂತೆ ಕೇಂದ್ರದ ಸೂಚನೆ
ಮುಂಬೈ 20 ಮಹಡಿ ಕಟ್ಟಡದಲ್ಲಿ ಅಗ್ನಿ ದುರಂತ: ಸತ್ತವರ ಸಂಖ್ಯೆ ಏಳಕ್ಕೆ ಏರಿಕೆ