Friday, September 30, 2022

ಸುಳ್ಳು ಸುದ್ದಿ ತಡೆಯದ ಗೂಗಲ್‌ಗೆ ಆಸ್ಟ್ರೇಲಿಯಾ ಕೋರ್ಟ್‌ನಿಂದ ₹4 ಕೋಟಿ ದಂಡ

Follow Us

newsics.com

ಆಸ್ಟ್ರೇಲಿಯಾ: ಗಂಭೀರವಾದ ಸುಳ್ಳು ಸುದ್ದಿಗಳು ಯೂಟ್ಯೂಬ್‌ನಲ್ಲಿ ಹರಿದಾಡಿದರೂ ಅದನ್ನು ತಡೆಯದೇ ಗೂಗಲ್‌ಗೆ ಆಸ್ಟ್ರೇಲಿಯಾದ ನ್ಯಾಯಾಲಯ ಬಿಸಿ ಮುಟ್ಟಿಸಿದೆ.

ರಾಜಕೀಯ ವಿಶ್ಲೇಷಕರಾದ ಜೋರ್ಡಾನ್ ಶಾಂಕ್ಸ್ ಎಂಬವರು ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್‌ನ ಡೆಪ್ಯೂಟಿ ಪ್ರೀಮಿಯರ್, ಜಾನ್ ಬರಿಲಾರೊ ಅವರನ್ನು ಟೀಕಿಸಿದ್ದಲ್ಲದೇ, ಭ್ರಷ್ಟಾಚಾರ ಆರೋಪ ಹೊರಿಸಿ 2020 ರಲ್ಲಿ ಯೂಟ್ಯೂಬ್‌ನಲ್ಲಿ ಕೆಲವು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು.

ಯಾವುದೇ ಸಾಕ್ಷ್ಯಾಧಾರಗಳು ಇಲ್ಲದೇ ಇದ್ದರೂ ವಿಶ್ಲೇಷಕ ಶಾಂಕ್ಸ್ ಅವರು, ಜಾನ್ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಿದ್ದರು. ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿದ ಶ್ಯಾಂಕ್ಸ್ ವಿರುದ್ಧ ಜಾನ್ ಕೋರ್ಟ್ ಮೆಟ್ಟಿಲೇರಿದ್ದರು. ಇಲ್ಲದೇ, ಸುಳ್ಳು ಸುದ್ದಿಗಳನ್ನು ನಿಯಂತ್ರಿಸದ ಗೂಗಲ್ ವಿರುದ್ಧವೂ ಜಾನ್ ದೂರು ನೀಡಿದ್ದರು.

ವಿಚಾರಣೆ ನಡೆಸಿದ ಕೋರ್ಟ್, ಜಾನ್ ವಿರುದ್ಧ ಅಪ್ಲೋಡ್ ಮಾಡಿದ ಯೂಟ್ಯೂಬ್ ವಿಡಿಯೋಗಳ ಮೂಲಕ ಗೂಗಲ್ ಕೋಟ್ಯಂತರ ರೂಪಾಯಿ ಲಾಭ ಗಳಿಸಿದೆ. ಈ ಪ್ರಕರಣದಲ್ಲಿ ಗೂಗಲ್ ಕ್ರಮವೂ ಸಮರ್ಥನೀಯವಲ್ಲ ಎಂದು ತಿಳಿಸಿ, ₹4 ಕೋಟಿ ದಂಡ ವಿಧಿಸಿದೆ.ಈ ತೀರ್ಪಿನ ಬಗ್ಗೆ ಗೂಗಲ್ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದೃಷ್ಟಿಹೀನರೂ ಗುರುತಿಸಬಲ್ಲ ಹೊಸ ಮಾದರಿಯ ನಾಣ್ಯ ಬಿಡುಗಡೆಗೊಳಿಸಿದ ಪ್ರಧಾನಿ

ಮತ್ತಷ್ಟು ಸುದ್ದಿಗಳು

vertical

Latest News

ದೇವಸ್ಥಾನಕ್ಕೆ ​1 ಕೆಜಿ 16 ತೊಲೆ ಚಿನ್ನ ಅರ್ಪಿಸಿದ ಸಿಎಂ ಕೆಸಿಆರ್

newsics.com ತೆಲಂಗಾಣ:ಯಾದಾದ್ರಿಯ ಶ್ರೀಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನಕ್ಕೆ ತೆಲಂಗಾಣ ಸಿಎಂ ಕೆಸಿಆರ್​ ​1 ಕೆಜಿ 16 ತೊಲೆ ಚಿನ್ನವನ್ನು ಅರ್ಪಿಸಿದರು. ದೇವಸ್ಥಾನ ಗೋಪುರಕ್ಕೆ 65 ಕೆಜಿಯಷ್ಟು ಚಿನ್ನದ ಲೇಪನ...

ಉಕ್ರೇನ್‌ನ 4 ಪ್ರದೇಶಗಳು ರಷ್ಯಾ ವಶ- ಒಪ್ಪಂದಕ್ಕೆ ಸಹಿ ಹಾಕಿದ ಪುಟಿನ್‌!

newsics.com ರಷ್ಯಾ: ಉಕ್ರೇನ್‌ನ ನಾಲ್ಕು ರಾಜ್ಯಗಳನ್ನು ಅಧಿಕೃತವಾಗಿ ರಷ್ಯಾ ಸುಪರ್ದಿಗೆ ತೆಗೆದುಕೊಂಡಿದೆ. ರಷ್ಯಾ ಇಂದು ಉಕ್ರೇನ್‌ನ 4 ರಾಜ್ಯಗಳನ್ನು ತನ್ನ ಭೂಪ್ರದೇಶದಲ್ಲಿ ಸೇರಿಸಿದೆ. ಈ ಪ್ರದೇಶಗಳು ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಜಪೋರಿಜಿಯಾ ಆಗಿವೆ....

ವಂದೇ ಭಾರತ್ ಪ್ರಯಾಣ ಮಾಡಿದ್ರೆ ವಿಮಾನಕ್ಕಿಂತ ರೈಲಿಗೆ ಆದ್ಯತೆ ನೀಡುತ್ತಾರೆ: ಮೋದಿ

newsics.com ಗಾಂಧಿನಗರ: ಒಮ್ಮೆ ವಂದೇ ಭಾರತ್ ರೈಲಿನಲ್ಲಿ ಪ್ರಯಾಣಿಸಿದರೆ ವಿಮಾನದಲ್ಲಿ ಪ್ರಯಾಣಿಸುವುದನ್ನೇ ಜನರು ನಿಲ್ಲಿಸುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗಾಂಧಿನಗರದ ರೈಲು ನಿಲ್ದಾಣದಲ್ಲಿ ಹೊಸ ವಂದೇ ಭಾರತ್ ರೈಲಿಗೆ ಚಾಲನೆ ನೀಡಿ ಬಳಿಕ...
- Advertisement -
error: Content is protected !!