ಕಲಬುರ್ಗಿ: ತನಗೆ ಕೊರೋನಾ ಪಾಸಿಟಿವ್ ಎಂಬುದನ್ನು ತಿಳಿದ ವ್ಯಕ್ತಿಯೊಬ್ಬ ಆತಂಕದಿಂದ ಅಲ್ಲೇ ಕುಸಿದು ಅಸುನೀಗಿದ್ದಾನೆ.
ಆದರೆ, ಆತನ ಮರಣೋತ್ತರ ಪರೀಕ್ಷೆಯಲ್ಲಿ ಆತನಿಗೆ ಕೊರೋನಾ ಇಲ್ಲ ಎಂಬುದು ದೃಢವಾಗಿದೆ. ಇಷ್ಟಕ್ಕೆಲ್ಲ ಕಾರಣ ಕೊರೋನಾ ವರದಿ ತಡವಾಗಿ ಬಂದದ್ದು. ಹದಿನೈದು ದಿನವಾದರೂ ಕೊರೋನಾ ವರದಿ ಬಾರದ್ದರಿಂದ ತನಗೆ ಕೊರೋನಾ ಎಂದು ಭಾವಿಸಿ ಆತಂಕಗೊಂಡಿದ್ದ. ಅದೇ ವೇಳೆ ಆರೋಗ್ಯ ಇಲಾಖೆ ಸಿಬ್ಬಂದಿ ದೂರವಾಣಿ ಕರೆ ಮಾಡಿ ನಿಮಗೆ ಕೊರೋನಾ ಪಾಸಿಟಿವ್ ಇದೆ ಎಂದು ಹೇಳಿದ್ದರಿಂದ ಆತಂಕಗೊಂಡು ಅಲ್ಲೇ ಕುಸಿದಿದ್ದಾರೆ. ಮತ್ತೆ ಮೇಲೇಳಲೇ ಇಲ್ಲ.
ಕಲಬುರ್ಗಿಯ ಭವಾನಿ ನಗರದಲ್ಲಿ ಈ ಘಟನೆ ನಡೆದಿದೆ. ಪಾಸಿಟಿವ್ ವರದಿ ಸುದ್ದಿ ಕೇಳಿ ಮೃತ ದುರ್ದೈವಿಯನ್ನು ಅಶೋಕ (55) ಎಂದು ಗುರುತಿಸಲಾಗಿದೆ. ಜುಲೈ 8ರಂದು ಕೊರೋನಾ ಟೆಸ್ಟ್ ಮಾಡಿಸಿಕೊಂಡಿದ್ದ ಅಶೋಕ ಅವರಿಗೆ ಗುರುವಾರ (ಜುಲೈ 23) ಬೆಳಗ್ಗೆ ಅಶೋಕ್ಗೆ ಕಾಲ್ ಮಾಡಿದ್ದ ಆರೋಗ್ಯ ಇಲಾಖೆ ಸಿಬ್ಬಂದಿ, ಕೊರೋನಾ ಪಾಸಿಟಿವ್ ಬಂದಿದೆ ಎಂದಿದ್ಧಾರೆ.
ಪಾಸಿಟಿವ್ ಬಂದಿರೋ ಸುದ್ದಿ ಕೇಳಿದ ಅಶೋಕ್, ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಆಟೋ ಚಾಲಕನಾಗಿದ್ದ ಅಶೋಕ, ಅದರಿಂದಲೇ ಕುಟುಂಬದ ನಿರ್ವಹಣೆ ಮಾಡುತ್ತಿದ್ದ. ಅಶೋಕನ ಅಳಿಯನಿಗೆ ಕೊರೋನಾ ಪಾಸಿಟಿವ್ ಬಂದಿತ್ತು. ಈ ಹಿನ್ನೆಲೆಯಲ್ಲಿ ಅಶೋಕ ಮತ್ತು ಆತನ ಕುಟುಂಬದವರು ಟೆಸ್ಟ್ ಮಾಡಿಸಿಕೊಂಡಿದ್ದರು. ಆದರೆ ವರದಿ ಹದಿನೈದು ದಿನಗಳ ನಂತರ ಬಂದಿದೆ.
ವಿಚಿತ್ರವೆಂದರೆ ಅಶೋಕನ ಶವವನ್ನು ಆಸ್ಪತ್ರೆ ಗೆ ತಂದು ಥ್ರೋಟ್ ಸ್ಯಾಂಪಲ್ ಸಂಗ್ರಹಿಸಿ, ಪರೀಕ್ಷೆ ಮಾಡಿದಾಗ ಆತನಿಗೆ ಕೊರೋನಾ ನೆಗೆಟಿವ್ ಬಂದಿದೆ. ರೋಗ ನಿರೋಧಕ ಶಕ್ತಿಯಿಂದ ಹದಿನೈದು ದಿನಗಳಲ್ಲಿ ಸೋಂಕು ಹೋಗಿರೋ ಸಾಧ್ಯತೆ ಇದೆ. ಆದರೆ ವರದಿಯ ವಿಳಂಬದಿಂದಾಗಿ ಒಂದು ಜೀವ ಬಲಿಯಾಗಿದೆ. ಆರೋಗ್ಯ ಇಲಾಖೆ ವಿರುದ್ಧ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವರದಿ ವಿಳಂಬವಾಗಿ ಬಂದಿದ್ದರಿಂದ ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾಗಿದೆ ಎಂದು ಮೃತ ಅಶೋಕನ ಪುತ್ರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾಳೆ.
ಆರೋಗ್ಯ ಇಲಾಖೆ ವಿಳಂಬ, ತಪ್ಪು ಮಾಹಿತಿಗೆ ಜೀವ ತೆತ್ತ ‘ಕೊರೋನಾ ಇಲ್ಲದ’ ಆಟೋ ಡ್ರೈವರ್!
Follow Us