newsics.com
ಬೆಂಗಳೂರು: ಚಂದನವನದ ಮಾದಕದ್ರವ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಜಾಮೀನು ಅರ್ಜಿಯನ್ನು ಎನ್’ಡಿಪಿಎಸ್ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.
ಇಬ್ಬರೂ ನಟಿಯರು ಸೇರಿ ಎಲ್ಲರೂ ನಗರದ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಕೈದಿಗಳಾಗಿ ಮುಂದುವರಿಯುವುದು ಅನಿವಾರ್ಯವಾಗಿದೆ. ಸೆಪ್ಟೆಂಬರ್ 14ರಿಂದ ಜೈಲಿನಲ್ಲಿರುವಂತ ನಟಿ ರಾಗಿಣಿ ಹಾಗೂ ಸೆ.16ರಿಂದ ಜೈಲಿನಲ್ಲಿರುವ ನಟಿ ಸಂಜನಾ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸಿದ ಎನ್ ಡಿಪಿಎಸ್ ಕೋರ್ಟ್, ಇಬ್ಬರ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವುದರಿಂದ ಇನ್ನೂ ಕೆಲ ಕಾಲ ಜೈಲಿನಲ್ಲಿರಬೇಕಾಗಿದೆ.
ರಾಗಿಣಿ ಬಾಯ್ ಫ್ರೆಂಡ್ ಶಿವಪ್ರಕಾಶ್ ಚಪ್ಪಿ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ. ಶಿವಪ್ರಕಾಶ್ ಚಪ್ಪಿ ತಲೆಮರೆಸಿಕೊಂಡಿದ್ದು, ಚಪ್ಪಿಗಾಗಿ ಪೊಲೀಸರು ಇನ್ನೂ ಶೋಧ ಮುಂದುವರಿಸಿದ್ದಾರೆ. ಇತರ ಆರೋಪಿಗಳಾದ ರಾಹುಲ್, ವಿನಯ್ ಕುಮಾರ್ ಅವರ ಜಾಮೀನು ಅರ್ಜಿಯೂ ವಜಾಗೊಂಡಿದೆ. ಪ್ರಕರಣದ ಎ1 ಆರೋಪಿ ಶಿವಪ್ರಕಾಶ್, ಸಂಜನಾ ಆಪ್ತ ರಾಹುಲ್ ಹಾಗೂ ಎ12 ಆರೋಪಿ ವಿನಯ್ ನಿರೀಕ್ಷಾಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದಂತ ಎನ್ ಡಿ ಪಿಎಸ್ ಕೋರ್ಟ್ ನ ನ್ಯಾಯಾಧೀಶರಾದಂತ ಸೀನಪ್ಪ ಅವರು, ಜಾಮೀನು ಅರ್ಜಿಯನ್ನು ವಜಾ ಗೊಳಿಸಿದೆ. ಹೀಗಾಗಿ ಮೂವರಿಗೂ ಜೈಲೇ ಗತಿಯಾದಂತೆ ಆಗಿದೆ.
ಎನ್’ಡಿಪಿಎಸ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ.ಜಿ.ಎಂ.ಶೀನಪ್ಪ ಈ ಆದೇಶ ನೀಡಿದ್ದು, ಈ ಆದೇಶ ಪ್ರಶ್ನಿಸಿ ರಾಗಿಣಿ, ಸಂಜನಾ ಸೇರಿ ಎಲ್ಲ ಆರೋಪಿಗಳು ಜಾಮೀನಿಗಾಗಿ ಹೈಕೋರ್ಟ್ ಮೊರೆ ಹೋಗುವ ಸಾಧ್ಯತೆಯಿದೆ. ಏನೇ ಆದರೂ ಇನ್ನೂ ಒಂದು ವಾರ ಎಲ್ಲರೂ ಜೈಲು ವಾಸ ಅನುಭವಿಸುವುದು ಅನಿವಾರ್ಯವಾಗಿದೆ. ರಾಗಿಣಿ, ಸಂಜನಾ ಮತ್ತಿತರ ಆರೋಪಿಗಳು ನಾಳೆ ಅಥವಾ ಬುಧವಾರ ಹೈಕೋರ್ಟ್ ಗೆ ಅರ್ಜಿ ಸಲ್ಲಿಸುವ ಸಾಧ್ಯತೆಗಳಿವೆ.
ಜಾಮೀನು ಅರ್ಜಿ ವಜಾಗೊಂಡಿರುವುದರಿಂದ ಹಾಗೂ ಕೊರೋನಾ ಕ್ವಾರಂಟೈನ್ ಅವಧಿ ಮುಗಿದಿರುವುದರಿಂದ ರಾಗಿಣಿ ದ್ವಿವೇದಿ, ಸಂಜನಾ ಸೇರಿ ಎಲ್ಲರೂ ಸಾಮಾನ್ಯ ಸೆಲ್ ಗೆ ಸ್ಥಳಾಂತರಗೊಳ್ಳಲಿದ್ದಾರೆ ಎಂದು ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ತಿಳಿಸಿದ್ದಾರೆ.
ನನಗೆ ಕೊರೋನಾ ಬಂದರೆ ಮಮತಾ ಬ್ಯಾನರ್ಜಿ ತಬ್ಬಿಕೊಳ್ಳುವೆ
ಐಸಿಸ್ ಉಗ್ರನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಎನ್ ಐ ಎ ಕೋರ್ಟ್