Wednesday, May 18, 2022

ಅಂತ್ಯಕ್ರಿಯೆ ನಡೆಸುವುದನ್ನೇ ಮರೆತ ಬಿಬಿಎಂಪಿ: 15 ತಿಂಗಳ ಬಳಿಕ ಪತ್ತೆಯಾಯ್ತು 2 ಕೋವಿಡ್ ಶವ!

Follow Us

newsics.com

ಬೆಂಗಳೂರು: ಕೋವಿಡ್‌ನಿಂದ ಮೃತಪಟ್ಟ ಇಬ್ಬರ ಶವಸಂಸ್ಕಾರ ಮಾಡುವುದನ್ನೇ ಮರೆತ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅಷ್ಟೇ ಅಲ್ಲ, 15 ತಿಂಗಳ ಬಳಿಕ ಎರಡು ಶವಗಳನ್ನು ಹೊರಕ್ಕೆ ತಂದ ವಿಚಿತ್ರ ಘಟನೆಯಿದು.

ಕೊರೋನಾದಂತಹ ಸಮಯದಲ್ಲೂ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ರಾಜಾಜಿನಗರ ಇಎಸ್‌ಐ ಆಸ್ಪತ್ರೆ ಶವಾಗಾರದಲ್ಲಿ ಕೊರೋನಾ ಸೋಂಕಿತರಿಬ್ಬರ ಶವಗಳನ್ನಿಟ್ಟು ಸಿಬ್ಬಂದಿ ಮರೆತಿದ್ದರು. ಶವ ದುರ್ನಾತ ಬೀರುತ್ತಿದ್ದುದರಿಂದ ಈ ಘಟನೆ ಬೆಳಕಿಗೆ ಬಂದಿದೆ.

2020ರ ಜುಲೈನಲ್ಲಿ ಕೊರೋನಾ ಸೋಂಕಿನಿಂದ ಬಳಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದವರನ್ನು ಶವಾಗಾರದಲ್ಲಿ ಇಡಲಾಗಿತ್ತು. ಆದರೆ ಆ ಶವಗಳಿಗೆ ಮುಕ್ತಿ ಕೊಡದೆ ಮರೆತಿದ್ದಾರೆ.

15 ತಿಂಗಳ ಬಳಿಕ ಶವಗಳನ್ನು ಎರಡು ದಿನಗಳ ಹಿಂದೆ ಹೊರಕ್ಕೆ ತೆಗೆಯಲಾಗಿದೆ. ಚಾಮರಾಜಪೇಟೆಯ ದುರ್ಗಾ(40) ಮತ್ತು ಕೆ.ಪಿ. ಅಗ್ರಹಾರದ ಮುನಿರಾಜು (35) ಅವರ ಶವ ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಗೆ ಎರಡೂ ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬಿಬಿಎಂಪಿಯೇ ಕೋವಿಡ್ ಶವಗಳನ್ನ ಅಂತ್ಯಸಂಸ್ಕಾರ ಮಾಡುತ್ತಿದ್ದ ಕಾರಣ ಮೃತ ದೇಹಗಳ ಬಗ್ಗೆ ಕುಟುಂಬಸ್ಥರು ಕೂಡ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಹೊಸ ಶವಾಗಾರ‌ ನಿರ್ಮಾಣದ ಬಳಿಕ ಹಳೆ ಶವಾಗಾರದ ಬಳಕೆ ನಿಲ್ಲಿಸಿದ್ದ ಸಿಬ್ಬಂದಿ ಹಳೆ ಕಟ್ಟಡದಲ್ಲಿ ಎರಡು ಶವಗಳನ್ನ ಇಟ್ಟಿರುವುದನ್ನೇ ಮರೆತಿದ್ದರು. ನಿನ್ನೆ ಹಳೆ ಶವಾಗಾರ ಸ್ವಚ್ಛತೆಗೆ ಹೋದಾಗ ದುರ್ನಾತ ಬಂದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.

ಕೃಷ್ಣನ ವಿಗ್ರಹ ಸ್ಥಾಪನೆ ಹೇಳಿಕೆ: ಮಥುರಾದಲ್ಲಿ ನಿಷೇಧಾಜ್ಞೆ

ತಿರುಮಲ ತಿರುಪತಿ ದೇವಸ್ಥಾನಮ್’ನ ಒಎಸ್’ಡಿ ಡಾಲರ್ ಶೇಷಾದ್ರಿ ನಿಧನ

ಇಂದಿನಿಂದ ಚಳಿಗಾಲದ ಸಂಸತ್ ಅಧಿವೇಶನ: ಕ್ರಿಪ್ಟೋಕರೆನ್ಸಿ ಸೇರಿ 26 ಮಸೂದೆ ಮಂಡನೆ

ಮತ್ತಷ್ಟು ಸುದ್ದಿಗಳು

Latest News

ಉಪ್ಪಿನ ಕಾರ್ಖಾನೆ ಗೋಡೆ ಕುಸಿದು 12‌ ಕಾರ್ಮಿಕರು ಸಾವು

newsics.com ಅಹಮದಾಬಾದ್: ಉಪ್ಪು ಪ್ಯಾಕೇಜಿಂಗ್ ಕಾರ್ಖಾನೆಯೊಂದರ ಗೋಡೆ ಕುಸಿದು ಬುಧವಾರ 12 ಕಾರ್ಮಿಕರು ಮೃತಪಟ್ಟಿದ್ದಾರೆ. ಗುಜರಾತ್‌ನ ಮೊರ್‌ಬಿ ಜಿಲ್ಲೆಯ ಹಲ್‌ವಾಡ್ ಕೈಗಾರಿಕಾ ಪ್ರದೇಶದ ‘ಸಾಗರ್ ಸಾಲ್ಟ್ ಫ್ಯಾಕ್ಟರಿ’ಯಲ್ಲಿ ಈ...

ಕನ್ನಡ ಕಲಿಕೆಗೆ‌ ಬಂತು ಸರ್ಕಾರಿ ಇ- ಪೋರ್ಟಲ್

newsics.com ಬೆಂಗಳೂರು: ಕನ್ನಡ ಕಲಿಯುವವರಿಗಾಗಿ ಸರ್ಕಾರಿ ಇ‌- ಕನ್ನಡ ಪೋರ್ಟಲ್ ಅಸ್ತಿತ್ವಕ್ಕೆ ಬಂದಿದೆ. ಇದರಿಂದ ಕರ್ನಾಟಕ ಹಾಗು ಹೊರಗೆ ವಾಸಿಸುತ್ತಿರುವ ಕನ್ನಡೇತರರು ಸರ್ಕಾರಿ ವೆಬ್ ಸೈಟ್‌ನಲ್ಲಿ ಕನ್ನಡ ಕಲಿಯಬಹುದು. ಇ-ಕನ್ನಡ ಪೋರ್ಟಲ್‌ಗೆ ಹೋಗಿ ಆನ್‌ಲೈನ್...

ನಾಳೆ ಮಧ್ಯಾಹ್ನ 12:30ಕ್ಕೆ SSLC ರಿಸಲ್ಟ್

newsics.com ಬೆಂಗಳೂರು: ಗುರುವಾರ (ಮೇ 19) ಮಧ್ಯಾಹ್ನ 12.30ಕ್ಕೆ SSLC ಪರೀಕ್ಷೆ ಫಲಿತಾಂಶ ಪ್ರಕಟವಾಗಲಿದೆ. ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಈ ಕುರಿತಂತೆ ಟ್ವೀಟ್ ಮಾಡಿದ್ದಾರೆ. 'ನಾಳೆ ಮಧ್ಯಾಹ್ನ 12.30ಕ್ಕೆ ಎಸ್ಎಸ್ಎಲ್‌ಸಿ ಫಲಿತಾಂಶ ಪ್ರಕಟಿಸಲಾಗುತ್ತದೆ. ಮಧ್ಯಾಹ್ನ 1...
- Advertisement -
error: Content is protected !!