ಬೆಂಗಳೂರು: ಒಂದೆಡೆ ಮದ್ಯವರ್ಜನ ಶಿಬಿರ, ಇನ್ನೊಂದೆಡೆ ಕುಡಿಯಲು ಪ್ರೋತ್ಸಾಹಿಸುವ ಅಬಕಾರಿ ಇಲಾಖೆ. ಇದೆಂಥ ವಿಚಿತ್ರ!
ಬಿಯರ್ ಬದಲು ವಿಸ್ಕಿ, ರಮ್ ಕುಡಿಸಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದ ಅಂಗಡಿ ಮಾಲೀಕರಿಗೆ ಒತ್ತಡ ಹೇರುತ್ತಿದ್ದಾರೆ.
ಬೆಂಗಳೂರಿನ ನೈಟ್‌ಲೈಫ್ ಅವಧಿ ರಾತ್ರಿ 11ರಿಂದ 1 ಗಂಟೆಗೆ ವಿಸ್ತರಣೆಯಾದ ಬಳಿಕ ಬಿಯರ್ ಮಾರಾಟ ಹೆಚ್ಚಳವಾಗಿತ್ತು. ವರ್ಷಕ್ಕೆ ಸರಾಸರಿ ಶೇ.4ರಿಂದ ಶೇ.8ರಷ್ಟು ಹೆಚ್ಚಳ ಕಾಣುತ್ತಿದ್ದ ಬಿಯರ್ ಮಾರಾಟದ ಪ್ರಮಾಣ ಹಿಂದಿನ ಎರಡು ವರ್ಷಗಳಲ್ಲಿ ಶೇ.12ರಿಂದ ಶೇ.20ರಷ್ಟು ಏರಿಕೆ ಕಂಡಿತ್ತು.
ಬಿಯರ್ ದರ ಕಡಿಮೆಯಿದ್ದು, ಐಎಂಎಲ್ ಮದ್ಯ ಮಾರಾಟ ಹೆಚ್ಚಳವಾದರೆ ವರಮಾನ ಹೆಚ್ಚುತ್ತದೆ. ‘ಬೆಂಗಳೂರಿನ ಕೆಲವೆಡೆ ಬಿಯರ್‌ಗೆ ಹೆಚ್ಚು ಬೇಡಿಕೆ ಇದೆ. ಐಟಿ ಕಂಪನಿಗಳು, ಕಾಲೇಜುಗಳು ಇರುವ ಪ್ರದೇಶಗಳಲ್ಲಿ ಬಿಯರ್ ಖರೀದಿಸುವವರೇ ಹೆಚ್ಚಿದ್ದಾರೆ. ದಿನಕ್ಕೆ 20 ಬಾಕ್ಸ್ ಬಿಯರ್, 10 ಬಾಕ್ಸ್ ಐಎಂಎಲ್‌ಗೆ ಬೇಡಿಕೆ ಸಲ್ಲಿಸಿದರೆ 10 ಬಾಕ್ಸ್ ಬಿಯರ್ ಮಾತ್ರ ಪೂರೈಸಿ, 20 ಬಾಕ್ಸ್ ಐಎಂಎಲ್ ನೀಡಲಾಗುತ್ತಿದೆ’ ಎಂಬುದು ಮದ್ಯದ ಅಂಗಡಿ ಮಾಲೀಕರ ಅಳಲು.
‘ಆದ್ದರಿಂದಲೇ ಪ್ರಸಕ್ತ ಸಾಲಿನಲ್ಲಿ ಬಿಯರ್ ಮಾರಾಟ ಶೇ.30 ಕಡಿಮೆಯಾಗಿದೆ. ಇದಕ್ಕೆ ಅಬಕಾರಿ ಇಲಾಖೆ ಅಧಿಕಾರಿಗಳೇ ಕಾರಣ’ ಎಂದು ಮದ್ಯದಂಗಡಿ ಮಾಲೀಕರೊಬ್ಬರು ದೂರುತ್ತಾರೆ.
ಐಎಂಎಲ್ ಮಾರಾಟಕ್ಕೆ ಮೇಲಧಿಕಾರಿಗಳಿಂದ ಒತ್ತಡ ಇರುವುದನ್ನು ಇನ್‌ಸ್ಪೆಕ್ಟರ್ ಹಂತದ ಅಧಿಕಾರಿಗಳು ಒಪ್ಪಿಕೊಳ್ಳುತ್ತಾರೆ.
ಬಿಯರ್ ಬದಲು ರಮ್ ಕುಡಿಸಲು ಅಬಕಾರಿ ಇಲಾಖೆ ಒತ್ತಡ
Follow Us