Wednesday, November 30, 2022

ಚಂಡೀಗಢ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರು: ಪ್ರಧಾನಿ ಮೋದಿ ಘೋಷಣೆ

Follow Us

newsics.com

ನವದೆಹಲಿ: ಚಂಡೀಗಢ ವಿಮಾನ ನಿಲ್ದಾಣಕ್ಕೆ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಹೆಸರಿಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ‘ಮನ್ ಕಿ ಬಾತ್’ ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಈ‌ ಘೋಷಣೆ ಮಾಡಿದ್ದಾರೆ.

ಸೆ.28ರಂದು ಭಗತ್ ಸಿಂಗ್ ಅವರ ಜನ್ಮ ದಿನಾಚರಣೆ ರೂಪದಲ್ಲಿ ಮತ್ತೊಂದು ಮುಖ್ಯ ಅಮೃತ ಮಹೋತ್ಸವ ಬರುತ್ತಿದೆ. ಅವರ ನೆನಪಿಗಾಗಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮೋದಿ ಹೇಳಿದರು.

ಚೀತಾಗಳನ್ನು‌ ಮರಳಿ ತಂದಿರುವ ಬಗ್ಗೆ 130 ಕೋಟಿ ಭಾರತೀಯರು ಹೆಮ್ಮೆಪಟ್ಟಿದ್ದಾರೆ. ಹಲವರು ಚೀತಾಗಳನ್ನು ನೋಡುವ ಅವಕಾಶದ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಚೀತಾಗಳ ಕುರಿತು ನಿಗಾ ವಹಿಸಿ, ಇಲ್ಲಿನ ವಾತಾವರಣಕ್ಕೆ ಅವು ಹೇಗೆ ಹೊಂದಿಕೊಳ್ಳುತ್ತವೆ ಎಂಬುದರ ಬಗ್ಗೆ ಕಾರ್ಯಪಡೆ ಅಧ್ಯಯನ ನಡೆಸಿ ವರದಿ ನೀಡಲಿದೆ. ಇದನ್ನು ಆಧರಿಸಿ ನಿರ್ಣಯ ಕೈಗೊಳ್ಳಲಾಗುವುದು ಎಂದು ಮೋದಿ ತಿಳಿಸಿದರು.

ಸೋಮವಾರ ಸಾಮಾನ್ಯ ವಿಶ್ವವಿದ್ಯಾಲಯ ಪ್ರವೇಶ ಪರೀಕ್ಷೆ – ಪಿ. ಜಿ. ಫಲಿತಾಂಶ ಪ್ರಕಟ

ಗೃಹ ಬಂಧನದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್?

ಮತ್ತಷ್ಟು ಸುದ್ದಿಗಳು

vertical

Latest News

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್...

ನಟಿ ಮಲೈಕಾ ಅರೋರಾ ಪ್ರೆಗ್ನೆಂಟ್!

newsics.com ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಿಯತಮ ಅರ್ಜುನ್ ಕಪೂರ್ ಮಗುವಿಗೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಮಲೈಕಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಸಂತಸದ ವಿಚಾರವನ್ನು ಸದ್ಯದಲ್ಲೇ ಶೇರ್ ಮಾಡುತ್ತಾರೆ ಎಂದು ಅವರ...

ಹೃದಯಾಘಾತವಾಗಿ ದೇವಾಲಯದ ಆನೆ ಸಾವು

newsics.com ಪುದುಚೇರಿ: ಇತಿಹಾಸ ಪ್ರಸಿದ್ಧ ದೇಗುಲದ ಆನೆಯೊಂದು ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ. ಪುದುಚೇರಿಯ ಪ್ರಸಿದ್ಧ ದೇವಾಲಯ ಮನಕುಲ ವಿನಾಯಕರ ದೇಗುಲಕ್ಕೆ ಸೇರಿದ್ದ ಆನೆ ಲಕ್ಷ್ಮಿ ವಿಹರಿಸುತ್ತಿದ್ದಾಗ ಹಠಾತ್ ಕುಸಿದಿದೆ. ಈ ವೇಳೆ ಆನೆಗೆ...
- Advertisement -
error: Content is protected !!