Monday, October 3, 2022

ಅಮೆರಿಕ ಅಧ್ಯಕ್ಷರಾಗಿ ಜೊ ಬಿಡೆನ್ ಆಯ್ಕೆ, ಕಮಲಾ ಹ್ಯಾರಿಸ್ ವೈಸ್ ಪ್ರೆಸಿಡೆಂಟ್

Follow Us

newsics.com
ವಾಷಿಂಗ್ಟನ್: ಕೊನೆಗೂ ಡೊನಾಲ್ಡ್ ಟ್ರಂಪ್ ಕನಸು ನನಸಾಗಲಿಲ್ಲ. ಟ್ರಂಪ್ ಕನಸನ್ನು 77 ವರ್ಷದ ಡೆಮೊಕ್ರಾಟ್ ಜೋ ಬಿಡೆನ್ ನುಚ್ಚುನೂರಾಗಿಸಿದ್ದಾರೆ.
ಅಮೆರಿಕದ ನೂತನ ಅಧ್ಯಕ್ಷರಾಗಿ ಡೆಮಾಕ್ರಟ್ ಪಕ್ಷದ ಅಭ್ಯರ್ಥಿ ಜೊ ಬಿಡೆನ್ ಆಯ್ಕೆಯಾಗಿದ್ದಾರೆ. ಬಿಬಿಸಿ ಸೇರಿದಂತೆ ಪ್ರಮುಖ ಸುದ್ದಿ ವಾಹಿನಿಗಳು ಬಿಡೆನ್ ಅಮೆರಿಕದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ವರದಿ ಮಾಡಿವೆ. ಅಧಿಕೃತವಾಗಿ ಫಲಿತಾಂಶ ಪ್ರಕಟಿಸಲಾಗಿಲ್ಲ.
ಬಿಡೆನ್ ಗೆ 273 ಎಲೆಕ್ಟೋರಲ್  ಕಾಲೇಜು ಮತಗಳು ದೊರೆತಿದ್ದು, ಟ್ರಂಪ್  ಕೇವಲ 214 ಸ್ಥಾನಗಳಲ್ಲಿ ಮಾತ್ರ ದೊರೆತಿದೆ ಎಂದು ವರದಿಯಾಗಿದೆ. ಮ್ಯಾಜಿಕ್ ನಂಬರ್ 270.
ಚುನಾವಣಾ ಫಲಿತಾಂಶ ಒಪ್ಪಲು ನಿರಾಕರಿಸಿರುವ ಟ್ರಂಪ್, ಕಾನೂನು ಸಮರದ ಮೊರೆ ಹೋಗುವ ಸೂಚನೆ ನೀಡಿದ್ದಾರೆ.
ಸುಮಾರು ಒಂದು ವಾರ ಕಾಲ ನಡೆದ ಚುನಾವಣಾ ಪ್ರಕ್ರಿಯೆ ಬಳಿಕ ಅಂತಿಮವಾಗಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ 46ನೇ ಅಧ್ಯಕ್ಷರಾಗಿ ಜೋ ಬಿಡೆನ್ ಆಯ್ಕೆಯಾಗಿದ್ದಾರೆ.
ಡೆಲಾವೇರ್’ನಿಂದ ಆರು ಬಾರಿ ಸೆನೆಟರ್ ಆಗಿದ್ದ ಅವರು 1972ರಲ್ಲಿ ಮೊದಲ ಬಾರಿಗೆ ಚುನಾಯಿತರಾದರು. 2009ರಿಂದ 2017ರ ವರೆಗೆ ಒಬಾಮಾ ಆಡಳಿತದಲ್ಲಿ ಅಮೆರಿಕದ 47ನೇ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

vertical

Latest News

ಸೋನಿಯಾ ಗಾಂಧಿ ಮಡಿಕೇರಿ ಭೇಟಿ ರದ್ದು

newsics.com ಮೈಸೂರು: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ತಮ್ಮ ಕೊಡಗು ಪ್ರವಾಸ ರದ್ದುಪಡಿಸಿದ್ದಾರೆ. ಹವಾಮಾನ ವೈಫರೀತ್ಯದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ತೆರಳಲು ಅಸಾಧ್ಯವಾದ ಕಾರಣ ಮಡಿಕೇರಿ...

ಹೆಚ್ ಎ ಎಲ್ ಸಿದ್ದಪಡಿಸಿದ ಹಗುರ ಯುದ್ಧ ಹೆಲಿಕಾಪ್ಟರ್ ಸೇನೆಗೆ ಸೇರ್ಪಡೆ

newsics.com ನವದೆಹಲಿ: ರಕ್ಷಣೆಯ ಸ್ವಾವಲಂಬನೆ ನಿಟ್ಟಿನಲ್ಲಿ ಭಾರತ ಮಹತ್ವದ ಮೈಲುಗಲ್ಲು ಸ್ಧಾಪಿಸಿದೆ.  ಆತ್ಮ ನಿರ್ಬರ್ ಭಾರತ ಯೋಜನೆಯ ಅಂಗವಾಗಿ  ದೇಶಿಯವಾಗಿ ಅಭಿವೃದ್ದಿಪಡಿಸಲಾಗಿರುವ ಹಗುರ ಯುದ್ಧ ಹೆಲಿಕಾಪ್ಟರ್ ಗಳನ್ನು ಸೇನೆಗೆ ಅರ್ಪಿಸಲಾಗಿದೆ. ಜೋಧ್ ಪುರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

ಮಡಿಕೇರಿ ಭೇಟಿ ಮುಂದೂಡಿದ ಸೋನಿಯಾ ಗಾಂಧಿ

newsics.com ಮೈಸೂರು:  ಭಾರತ್ ಜೋಡೋ ಯಾತ್ರೆ  ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಸೋನಿಯಾ ಗಾಂಧಿ ಹವಾಮಾನ ವೈಫರೀತ್ಯದಿಂದ ಮಡಿಕೇರಿ ಭೇಟಿ ಮುಂದೂಡಿದ್ದಾರೆ. ಹವಾಮಾನ ಪರಿಸ್ಥಿತಿ ಸುಧಾರಿಸಿದ ಬಳಿಕ ಅವರು ಮಡಿಕೇರಿಗೆ ತೆರಳಲಿದ್ದಾರೆ. ಮೂರು ದಿನಗಳ ಕಾಲ ಸೋನಿಯಾ...
- Advertisement -
error: Content is protected !!