newsics.com
ಪಾಟ್ನಾ: ತೀವ್ರ ಕುತೂಹಲ ಕೆರಳಿಸಿದ್ದ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ಎನ್’ಡಿಎಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಈ ಮೂಲಕ ತೇಜಸ್ವಿ ಯಾದವ್ ಅವರ ಸಿಎಂ ಕನಸು ಭಗ್ನವಾಗಿದೆ.
ಮಂಗಳವಾರ (ನ.10) ಬೆಳಗ್ಗಿನಿಂದ ಏರಿಳಿತ ಕಾಣುತ್ತಲೇ ಇದ್ದ ಬಿಹಾರ ಚುನಾವಣೆ ಫಲಿತಾಂಶ, ಅತಂತ್ರ ಸ್ಥಿತಿಯತ್ತ ವಾಲಿದಂತೆ ಕಾಣಿಸಿತ್ತು. ಆದರೆ ಅಂತಿಮವಾಗಿ ಅಂತಿಮವಾಗಿ ಎನ್’ಡಿಎ 125 ಕ್ಷೇತ್ರಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಪಕ್ಷಗಳ ನಡುವಿನ ಸ್ಪರ್ಧೆಯಲ್ಲಿ ಆರ್ ಜೆಡಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಆರ್’ಜೆಡಿ ಬರೋಬ್ಬರಿ 75 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದೆ. ಆದರೆ ಕಳೆದ ಚುನಾವಣೆಯಲ್ಲಿ 80 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಫಲಿತಾಂಶದ ಆರಂಭದಲ್ಲಿ 80 ಸ್ಥಾನಗಳೊಂದಿಗೆ ಮುನ್ನಡೆ ಸಾಧಿಸಿದ್ದ ಅಂತಿಮವಾಗಿ ಬಿಜೆಪಿ 74 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷ ಹಿಂದಿಗಿಂತ ಹೆಚ್ಚು ಸ್ಥಾನಗಳನ್ನು ಕಳೆದುಕೊಂಡು 43 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, ಇನ್ನು ಕಾಂಗ್ರೆಸ್ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿ ನಾಲ್ಕನೇ ಸ್ಥಾನದಲ್ಲಿದೆ.
ಆರ್.ಆರ್.ನಗರ, ಶಿರಾದಲ್ಲಿ ಬಿಜೆಪಿ ಜಯಭೇರಿ; ಕನ್ನಡದಲ್ಲೇ ಮೋದಿ ಶುಭಹಾರೈಕೆ
ಕಳೆದ 2015ರ ಬಿಹಾರ ಚುನಾವಣೆಯಲ್ಲಿ ಜೆಡಿಯು 71 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ ಪ್ರಸಕ್ತ ಚುನಾವಣೆಯಲ್ಲಿ ಜೆಡಿಯು 43 ಕ್ಷೇತ್ರಕ್ಕೆ ಕುಸಿದಿದೆ. ಕಳೆದ ಬಾರಿ 53 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಚುನಾವಣೆಯಲ್ಲಿ 74 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.
ಪ್ರಜಾಪ್ರಭುತ್ವಕ್ಕೆ ಮತ್ತೆ ಗೆಲುವು- ಮೋದಿ
ಬಿಹಾರದಲ್ಲಿ ಪ್ರಜಾಪ್ರಭುತ್ವ ಮತ್ತೆ ಗೆಲುವು ದಾಖಲಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಬಿಜೆಪಿಯ ಪ್ರತಿ ಕಾರ್ಯಕರ್ತನ ಗೆಲುವು ಇದು. ಎನ್ಡಿಎ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಮೋದಿ ಹೇಳಿದ್ದಾರೆ. ಸರಣಿ ಟ್ವೀಟ್ ಮಾಡಿರುವ ಮೋದಿ, ಬಿಹಾರ ಯುವಜನತೆ ಆತ್ಮನಿರ್ಭರ ಬಿಹಾರದ ಪರವಾಗಿ ನಿಂತಿದ್ದಾರೆ. ಎನ್ಡಿಎ ಆಡಳಿತದ ಮೇಲೆ ಬಿಹಾರದ ಜನತೆ ವಿಶ್ವಾಸವಿಟ್ಟಿದ್ದಾರೆ. ಅವರ ಈ ಉತ್ಸಾಹ, ಹುಮ್ಮಸ್ಸು ಎನ್ಡಿಎಯಲ್ಲಿ ಶಕ್ತಿ ತುಂಬಿದೆ. ಬಿಹಾರದ ಸಂತುಲಿತ ಅಭಿವೃದ್ಧಿಗಾಗಿ ಎನ್ಡಿಎ ಸರ್ಕಾರ ಪೂರ್ಣಬದ್ಧತೆಯೊಂದಿಗೆ ಕೆಲಸ ಮಾಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್; ಮಾರ್ಚ್ ಅಂತ್ಯಕ್ಕೆ ಗಡುವು ಕೊನೆ
ಬಾಸ್ಮತಿ ಅಕ್ಕಿ ಸಂಸ್ಕರಣಾ ಘಟಕ ‘ಬೆಸ್ಟ್ ಫುಡ್ಸ್’ ಮೇಲೆ ಸಿಬಿಐ ದಾಳಿ
ಕೊರೋನಾಗೆ ಪೆಲೆಸ್ತೀನ್‌ನ ರಾಜತಾಂತ್ರಿಕ ಸಾಯಿಬ್ ಬಲಿ
ಮುಂಬೈಗೆ ಐಪಿಎಲ್ ಚಾಂಪಿಯನ್ ಗರಿ
ದಾವೂದ್ ಇಬ್ರಾಹಿಂನ ಆರು ಆಸ್ತಿ ಹರಾಜು
ಅಡ್ಡ ಪರಿಣಾಮ; ಚೀನಾದಲ್ಲಿ ಕೊರೋನಾ ಲಸಿಕೆ ಪ್ರಯೋಗ ತಾತ್ಕಾಲಿಕ ಸ್ಥಗಿತ