ಟೋಕಿಯೊ: ಚಂದ್ರಯಾನಕ್ಕೆ ಸಂಗಾತಿ ಹುಡುಕುವುದಕ್ಕಾಗು ಜಾಹೀರಾತು ನೀಡಿದ್ದ ಜಪಾನ್ ಬಿಲಿಯನೇರ್ ಯುಸಾಕು ಮೇಜಾವಾ, ಈಗ ಯೂಟರ್ನ್ ಹೊಡೆದಿದ್ದಾರೆ.
2023ರಲ್ಲಿ ಚಂದ್ರಯಾನಕ್ಕೆ ತೆರಳಲು ಸಂಗಾತಿ ಬೇಕು ಎಂದು ತಮ್ಮ ವೆಬ್ಸೈಟ್ನಲ್ಲಿ ಪ್ರಕಟಿಸಿದ್ದರು. 20 ವರ್ಷದ ಯುವತಿಯರಿಗಾಗಿ ಅರ್ಜಿ ಕರೆಯಲಾಗಿತ್ತು. 28 ಸಾವಿರ ಯುವತಿಯರು ಅರ್ಜಿ ಸಲ್ಲಿಸಿದ್ದರು. ಈಗ ಯುಸಾಕು ತಾವು ನೀಡಿದ್ದ ಆಹ್ವಾನವನ್ನು ವಾಪಸ್ ಪಡೆದಿದ್ದಾರೆ.
ಇದರ ಬಗ್ಗೆ ಯುಸಾಕು ಮೇಜಾವಾ, ಹೀಗೆ ಅರ್ಜಿ ಕರೆದು ವಾಪಸ್ ಪಡೆಯಲು ಅತ್ಯಂತ ಹಿಂಸೆಯಾಗುತ್ತಿದೆ. ಅರ್ಜಿ ಹಾಕಿದವರು ಮತ್ತು ಅಬೆಮಾ ಟಿವಿಗೆ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
“ನಾನೀಗ ಜೀವನ ಸಂಗಾತಿಯನ್ನು ಹುಡುಕಬೇಕಿದೆ. ಭವಿಷ್ಯದಲ್ಲಿ ಆಕೆ ನನ್ನ ಜೀವನದ ಭಾಗವಾಗಿ ಇರಲಿದ್ದಾಳೆ. ಇಂತಹ ಪ್ರೀತಿಯನ್ನು ನಾನು ಬಾಹ್ಯಾಕಾಶದಿಂದ ಜಗತ್ತಿಗೆ ಕೂಗಿ ಹೇಳಬೇಕಿದೆ” ಎಂದು ಬರೆದುಕೊಂಡಿದ್ದಾರೆ.
2023ರಲ್ಲಿ ಎಲೋನ್ ಮಸ್ಕ್ ಎಂಬಲ್ಲಿನ ಸ್ಪೇಸ್‌ಎಕ್ಸ್‌ನಿಂದ ಯುಸಾಕು ಮೇಜಾವಾ ಮೊದಲ ಖಾಸಗಿ ಪ್ರಯಾಣಿಕನಾಗಿ ಚಂದ್ರನ ಸುತ್ತ ಹಾರಾಟ ನಡೆಸಲಿದ್ದರು.