newsics.com
ಸ್ತನ ಕ್ಯಾನ್ಸರ್ನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚುವಂತಹ ರಕ್ತ ಪರೀಕ್ಷೆಯು ಇನ್ಮುಂದೆ ಭಾರತದಲ್ಲಿಯೂ ಲಭ್ಯವಿರಲಿದೆ. ಈ ರೀತಿಯ ಪರೀಕ್ಷೆಯಲ್ಲಿ ವಿಶ್ವದಲ್ಲಿ 15ಕ್ಕೂ ಹೆಚ್ಚು ದೇಶಗಳಲ್ಲಿ ಮಾತ್ರ ಲಭ್ಯವಿದೆ. ರಕ್ತ ಪರೀಕ್ಷೆಯ ಮೂಲಕ 99 ಪ್ರತಿಶತದವರೆಗೆ ಮಹಿಳೆಯರಿಗೆ ಕಾಣಿಸಿಕೊಳ್ಳುವ ಸ್ತನ ಕ್ಯಾನ್ಸರ್ನ ಮೊದಲ ಹಂತವನ್ನು ಪತ್ತೆ ಮಾಡಬಹುದಾಗಿದೆ.
ಈ ಮಾದರಿಯ ರಕ್ತ ಪರೀಕ್ಷೆಯು 40 ವರ್ಷ ಮೇಲ್ಪಟ್ಟ ಮಹಿಳೆಯರಲ್ಲಿ ಆರಂಭಿಕ ಹಂತದಲ್ಲಿ ಸ್ತನ ಕ್ಯಾನ್ಸರ್ ಪತ್ತೆ ಹಚ್ಚಲಿದೆ ಎನ್ನಲಾಗಿದೆ. ಈ ಪರೀಕ್ಷೆಗೆ ಭಾರತದಲ್ಲಿ 6000 ರೂಪಾಯಿ ನಿಗದಿ ಮಾಡಲಾಗಿದೆ.