ಫ್ರಾನ್ಸ್: ವಿಶ್ವಪ್ರಸಿದ್ಧ ಫ್ರಾನ್ಸ್‍ನ ಐಫೆಲ್ ಟವರ್‍ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಕೊರೋನಾ ಮಧ್ಯದಲ್ಲೂ ಐಫೆಲ್ ಟವರ್‍ಗೆ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಬುಧವಾರ ಸ್ಥಳೀಯ ಪೊಲೀಸರಿಗೆ ಕರೆ ಮಾಡಿದ ವ್ಯಕ್ತಿಯೊರ್ವ ಐಫೆಲ್ ಟವರ್ ಗೆ ಬಾಂಬ್ ಇಟ್ಟು ಉಡಾಯಿಸುವುದಾಗಿ ಹೇಳಿದ್ದು, ಈಗಾಗಲೇ ಬಾಂಬ್ ಇಟ್ಟಿರುವುದಾಗಿಯೂ ಹೆದರಿಸಿದ್ದಾನೆ ಎನ್ನಲಾಗಿದೆ.
ಬಾಂಬ್ ಕರೆ ಹಿನ್ನೆಲೆಯಲ್ಲಿ ಸಧ್ಯ ಐಫೆಲ್ ಟವರ್‍ಗೆ ಪ್ರವಾಸಿಗರ ಭೇಟಿಯನ್ನು ನಿಷೇಧಿಸಲಾಗಿದ್ದು, ಪೊಲೀಸರು ದೂರವಾಣಿ ಕರೆ ಮಾಡಿದ ವ್ಯಕ್ತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಅಲ್ಲದೇ ಐಫೆಲ್ ಟವರ್ ಬಳಿ ಭದ್ರತೆ ಹೆಚ್ಚಿಸಿ ಪರಿಶೀಲನೆ ನಡೆಸಲಾಗುತ್ತಿದೆ.
ಸ್ಥಳೀಯ ಪತ್ರಿಕೆಯೊಂದರ ಪ್ರಕಾರ ವ್ಯಕ್ತಿಯೊರ್ವ ಐಫೆಲ್ ಟವರ್ ಬಳಿ ಅಲ್ಲಾಹೋ ಅಕ್ಬರ್ ಎಂದು ಕೂಗಿದ್ದು, ಬಳಿಕ ಬಾಂಬ್ ಇಟ್ಟಿರುವುದಾಗಿ ದೊಡ್ಡದಾಗಿ ಕೂಗಿ ಹೇಳಿದ್ದಾನೆ ಎನ್ನಲಾಗಿದೆ. ಆದರೆ ಇದನ್ನು ಪೊಲೀಸರು ಖಚಿತಪಡಿಸಿಲ್ಲ.
ವಿಶ್ವವಿಖ್ಯಾತ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ
Follow Us