ಬ್ರೆಜಿಲ್: ಮದುವೆಗೆ ಮುನ್ನ ದೈಹಿಕ ಸಂಬಂಧ ಬೆಳೆಸಬೇಡಿ ಎಂದು ಬ್ರೆಜಿಲ್ ಸರ್ಕಾರ ಯುವಜನತೆಗೆ ಮನವಿ ಮಾಡಿದೆ.
ಬ್ರೆಜಿಲ್ ನಲ್ಲಿ ಹದಿಹರೆಯದ ಹುಡುಗಿಯರ ಗರ್ಭಧಾರಣೆಯ ಪ್ರಮಾಣ ಮತ್ತು ಎಚ್ಐವಿ ಸೋಂಕಿನ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿರುವುದರಿಂದ ಇಲ್ಲಿನ ಸರ್ಕಾರಕ್ಕೆ ಹದಿಹರೆಯದ ಸೆಕ್ಸ್ ತಲೆನೋವಾಗಿ ಪರಿಣಮಿಸಿದೆ.
ಬ್ರೆಜಿಲ್ನ ಮಾನವ ಹಕ್ಕುಗಳ ಸಚಿವ ದಮರೆಸ್ ಎಲ್ವೆಸ್, ಯುವಜನರು ಒತ್ತಡದಿಂದ ದೈಹಿಕ ಸಂಬಂಧ ಬೆಳೆಸುತ್ತಿದ್ದಾರೆ ಎಂದು ಹೇಳಿದ್ದ್ದಾರೆ.
ಬ್ರೆಜಿಲ್ ನಲ್ಲಿ ಹದಿಹರೆಯದ ಗರ್ಭಧಾರಣೆ ಪ್ರಮಾಣವು ಇಡೀ ವಿಶ್ವದಲ್ಲೇ ಅತಿ ಹೆಚ್ಚಿದ್ದು, ಹದಿಹರೆಯದ ಗರ್ಭಧಾರಣೆಯ ಪ್ರಮಾಣ ಜಾಗತಿಕವಾಗಿ ಶೇಕಡಾ 44 ರಷ್ಟಿದ್ದರೆ, ಬ್ರೆಜಿಲ್ನಲ್ಲಿ ಈ ಪ್ರಮಾಣವು ಶೇ.62 ರಷ್ಟಿದೆ.
ಮದುವೆಗೆ ಮುನ್ನ ದೈಹಿಕ ಸಂಬಂಧ ಬೇಡವೆಂದ ಬ್ರೆಜಿಲ್ ಸರ್ಕಾರ!
Follow Us