ಬೆಂಗಳೂರು: ಸರ್ಕಾರಿ ನೌಕರರ 2020ನೇ ಸಾಲಿನ 15 ದಿನಗಳ ಗಳಿಕೆ ರಜೆಗೆ ರಾಜ್ಯ ಸರ್ಕಾರ ಕತ್ತರಿ ಹಾಕಿದ್ದು, ಗಳಿಕೆ ರಜೆಯನ್ನು ವೇತನವಾಗಿ ಪರಿವರ್ತಿಸುವ ಸೌಲಭ್ಯವನ್ನು ಸರ್ಕಾರ ರದ್ದುಪಡಿಸಿದೆ.
ಈ ಸಂಬಂಧ ಸುತ್ತೋಲೆ ಹೊರಡಿಸಿರುವ ಆರ್ಥಿಕ ಇಲಾಖೆಯ(ಸೇವೆಗಳು-1) ಸರ್ಕಾರದ ಉಪ ಕಾರ್ಯದರ್ಶಿ ಜಿ ಬಿ ಹೇಮಣ್ಣ, ಈ ಆದೇಶವು ಸರ್ಕಾರದಿಂದ ಸಹಾಯಾನುದಾನ ಪಡೆಯುತ್ತಿರುವ ಸಂಸ್ಥೆಗಳ ನೌಕರರಿಗೂ ಅನ್ವಯಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ. ಸರ್ಕಾರವು ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಮಣ್ಣ ತಿಳಿಸಿದ್ದಾರೆ.
ಆದರೆ, ಜನವರಿ 2020ರಿಂದ ಡಿಸೆಂಬರ್ 2020ರಲ್ಲಿ ನಿವೃತ್ತಿ ಹೊಂದುವ ಎಲ್ಲಾ ಅರ್ಹ ನೌಕರರು, ಅಧಿಕಾರಿಗಳು, ಅವರು ನಿವೃತ್ತಿ ಹೊಂದುವ ತಿಂಗಳಲ್ಲಿ ಗಳಿಕೆ ರಜೆ ನಗದೀಕರಣ ಪ್ರಯೋಜನ ಪಡೆಯಲು ಅರ್ಹರಾಗಿರುತ್ತಾರೆ ಎಂದು ಹೇಮಣ್ಣ ಸುತ್ತೋಲೆಯಲ್ಲಿ ವಿವರಿಸಿದ್ದಾರೆ.
ಕೇಂದ್ರ ಸರ್ಕಾರದ ಹಾದಿ ಹಿಡಿದಿರುವ ರಾಜ್ಯ ಸರ್ಕಾರ, 2021ರ ಜೂನ್’ವರೆಗೆ ತುಟ್ಟಿಭತ್ಯೆ ಸೌಲಭ್ಯಕ್ಕೂ ರಾಜ್ಯ ಸರ್ಕಾರ ತಡೆ ನೀಡಿದೆ ಎಂದು ತಿಳಿದುಬಂದಿದೆ.