ನವದೆಹಲಿ: ಉಸೇನ್ ಬೋಲ್ಟ್ ದಾಖಲೆ ಮುರಿದ ಕಂಬಳ ವೀರ ಮಿಜಾರು ಅಶ್ವತ್ಥಪುರ ಶ್ರೀನಿವಾಸಗೌಡ ಅವರಿಗೆ ದೆಹಲಿಯ ಎಸ್ಎಐ ನಿಂದ ಕರೆಬಂದಿದೆ.
ಈ ವಿಷಯವನ್ನು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ತಮ್ಮ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ತಮ್ಮ ಇಲಾಖೆ ಅಧಿಕಾರಿಗಳು ಈಗಾಗಲೇ ಶ್ರೀನಿವಾಸ್ ಅವರನ್ನು ಸಂಪರ್ಕಿಸಿದ್ದು ಸೋಮವಾರ (ಫೆ.17) ಎಸ್ಎಐ ತರಬೇತುದಾರರ ಎದುರು ಹಾಜರಾಗಲು ಅಗತ್ಯವಾದ ಎಲ್ಲ ವ್ಯವಸ್ಥೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕಂಬಳದ ಕೆಸರುಗದ್ದೆಯಲ್ಲಿ ಉಸೇನ್ ಬೋಲ್ಟ್ಗಿಂತ ವೇಗವಾಗಿ ಓಡಿದ ಶ್ರೀನಿವಾಸ್ ಗೌಡ ಬಗ್ಗೆ ಕೇಂದ್ರ ಕ್ರೀಡಾ ಸಚಿವಾಲಯದ ರಾಜ್ಯ ಸಚಿವ ಕಿರೆನ್ ರಿಜಿಜು ಶನಿವಾರ ಮೆಚ್ಚುಗೆಯ ಮಾತುಗಳನ್ನಾಡಿದ್ದರು.
ಶ್ರೀನಿವಾಸರನ್ನು ತಾವು ದೆಹಲಿಗೆ ಕರೆಸಿಕೊಳ್ಳುವುದಾಗಿ ಕಿರೆನ್ ರಿಜಿಜು ಟ್ವಿಟ್ಟರ್ನಲ್ಲಿ ತಿಳಿಸಿದ್ದರು. ದೆಹಲಿಯಲ್ಲಿರುವ ಭಾರತೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರ ಎದುರಿಗೆ ಶ್ರೀನಿವಾಸ್ ಅವರ ಓಟದ ವೇಗವನ್ನು ಪರೀಕ್ಷಿಸಲಾಗುವುದು ಎಂದು ರಿಜಿಜು ತಿಳಿಸಿದ್ದರು. ಭಾರತದ ಯಾವುದೇ ಪ್ರತಿಭೆಯೂ ಅವಕಾಶದಿಂದ ವಂಚಿತರಾಗಲು ನಾವು ಬಿಡುವುದಿಲ್ಲ ಎಂದು ಸಚಿವ ರಿಜಿಜು ಹೇಳಿದ್ದರು.
ಕಂಬಳದ ಉಸೇನ್ ಬೋಲ್ಟ್ ಗೆ ದೆಹಲಿಯ ಎಸ್ಎಐ ಬುಲಾವ್
Follow Us