Monday, May 17, 2021

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com

ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ.

ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ ಮಾರಾಟದ ಬೇಡಿಕೆ ಕೂಡ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ನಡೆಸುವ ಮೆಡಿಕಲ್ ಕಾಲೇಜಿಗೆ ನುಗ್ಗಿದ ದುಷ್ಕರ್ಮಿಗಳು ಕೊರೋನಾ ಲಸಿಕೆಯಾಗಿ ಬಳಸುತ್ತಿರುವ ರೆಮಿಡಿಸಿವರ್ 850 ಇಂಜೆಕ್ಷನ್ ಗಳನ್ನು ಕದ್ದಿದ್ದಾರೆ.

ಕೊರೋನಾ ಪೀಡಿತರಿಗೆ 5ರಿಂದ 6 ಬಾರಿ ರೆಮಿಡಿಸಿವರ್ ಇಂಜೆಕ್ಷನ್ ನೀಡಬೇಕು. ಒಂದು ಇಂಜೆಕ್ಷನ್ ಬೆಲೆ ಕಾಳಸಂತೆಯಲ್ಲಿ 20 ಸಾವಿರ ರೂ. ಇದೆ. ಇದರಿಂದ ಹಣ ಮಾಡಲು ದುಷ್ಕರ್ಮಿಗಳು ರೆಮಿಡಿಸಿವರ್ ಇಂಜೆಕ್ಷನ್ ಗಳ ಕಳ್ಳತನಕ್ಕೆ ಇಳಿದಿದ್ದಾರೆ. ಇತ್ತೀಚೆಗಷ್ಟೇ ಮೆಡಿಕಲ್ ಸ್ಟೋರ್ ವೊಂದರಲ್ಲಿ ಇದೇ ರೀತಿ ಕಳ್ಳತನವಾಗಿತ್ತು.

ಮತ್ತಷ್ಟು ಸುದ್ದಿಗಳು

Latest News

ಮರದ ಮೇಲೆಯೇ 11 ದಿನ‌ ಐಸೋಲೇಟ್ ಆದ ಕೊರೋನಾ ಸೋಂಕಿತ ವಿದ್ಯಾರ್ಥಿ!

newsics.com ಹೈದರಾಬಾದ್: ಕೊರೋನಾ ಸೋಂಕಿತರು ಹೋಂ‌ ಐಸೋಲೇಷನ್ ಗೆ ಒಳಗಾಗಲು ಹಲವು‌ ಕುಟುಂಬಗಳು ಮನೆಯಲ್ಲಿ ಜಾಗದ ಅಭಾವವನ್ನೂ ಎದುರಿಸುತ್ತಿವೆ. ತೆಲಂಗಾಣದ ನಲಗೊಂಡ ಜಿಲ್ಲೆಯ ಹಲವು ಕುಟುಂಬಗಳು ಅಡುಗೆ ಕೋಣೆ...

ಏನಿದು ಲಸಿಕೆ ಪಾಸ್‌ಪೋರ್ಟ್‌?

newsics.com ನವದೆಹಲಿ: ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ ವಿರುದ್ಧದ ಲಸಿಕೆ ಅಭಿಯಾನ ನಡೆಯುತ್ತಿರುವ ವೇಳೆಯಲ್ಲೇ 'ಲಸಿಕೆ ಪಾಸ್‌ಪೋರ್ಟ್‌' ಸದ್ದು ಮಾಡುತ್ತಿದೆ. ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಪದ. ಹೆಚ್ಚು ಜನರು ಲಸಿಕೆ...

ಫೇಸ್’ಬುಕ್’ನಲ್ಲಿ ಉಗ್ರ ಸಿದ್ಧಾಂತದ ಫೋಸ್ಟ್: ತಮಿಳುನಾಡಿನ 4 ಕಡೆ ಎನ್ಐಎ ಶೋಧ

newsics.com ಚೆನ್ನೈ: ಉಗ್ರ ಸಂಘಟನೆಗಳ ಸಿದ್ಧಾಂತ ಪ್ರತಪಾದಿಸುವ ಪೋಸ್ಟ್'ಗಳನ್ನು ಫೇಸ್'ಬುಕ್'ನಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಭಾನುವಾರ ತಮಿಳುನಾಡಿನ ಮಧುರೈ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಿದೆ. ಮಧುರೈ ಜಿಲ್ಲೆಯ ಕಾಜಿಮಾರ್...
- Advertisement -
error: Content is protected !!