newsics.com
ಲಂಡನ್: ಆರ್ಥಿಕ ಅಪರಾಧಿ, ಮದ್ಯ ಉದ್ಯಮಿ ವಿಜಯ್ ಮಲ್ಯ ಅವರ ಲಂಡನ್ ನಿವಾಸವನ್ನು ಯುಕೆ ಕೋರ್ಟ್ ವಶಪಡಿಸಿಕೊಂಡಿದೆ.
ಮಲ್ಯ ಹಾಗೂ ಅವರ ಇಡೀ ಕುಟುಂಬವನ್ನು ಲಂಡನ್ ಮನೆಯಿಂದ ಹೊರಹಾಕುವಂತೆ ಕೋರ್ಟ್ ಮಂಗಳವಾರ ಆದೇಶ ನೀಡಿದೆ.
ಮಲ್ಯ ಅವರ ಕೋಟ್ಯಂತರ ರೂ. ಬೆಲೆಬಾಳುವ ಐಷಾರಾಮಿ ಮನೆಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳಬೇಕೇ? ಬೇಡವೇ ಎಂಬುದರ ಬಗ್ಗೆ ಹೈಕೋರ್ಟ್ ಕಳೆದ ವಾರ ತೀರ್ಪನ್ನು ಕಾಯ್ದಿರಿಸಿತ್ತು.
ತೀರ್ಪು ಪ್ರಕಟಿಸಿದ ಕೋರ್ಟ್, ಮಲ್ಯ ಅವರ ಮನೆಯನ್ನು ಸ್ವಿಸ್ ಬ್ಯಾಂಕ್ ಯುಬಿಎಸ್ ಸ್ವಾಧೀನಪಡಿಸಿಕೊಳ್ಳಬೇಕು ಎಂದು ಆದೇಶಿಸಿದೆ.
ಭಾರತೀಯ ಬ್ಯಾಂಕುಗಳಿಂದ ಸುಮಾರು 9 ಸಾವಿರ ಕೋಟಿ ರೂ. ಸಾಲ ಮಾಡಿ ಇಂಗ್ಲೆಂಡ್ಗೆ ಪರಾರಿಯಾಗಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಲಂಡನ್ನಲ್ಲೂ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬ್ಯಾಂಕ್ಗಳಿಗೆ 9 ಸಾವಿರ ಕೋಟಿ ಬಾಕಿ ಹಣ ನೀಡಬೇಕಿರುವ ವಿಜಯ್ ಮಲ್ಯ ಅವರ ಲಂಡನ್ ನಲ್ಲಿರುವ ಆಸ್ತಿಯನ್ನು ವಶಪಡಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ ಇಂಗ್ಲೆಂಡ್ ನ್ಯಾಯಾಲಯದಲ್ಲಿ 13 ಭಾರತೀಯ ಬ್ಯಾಂಕ್ಗಳ ಒಕ್ಕೂಟ ಕಾನೂನು ಸಮರ ನಡೆಸುತ್ತಿದೆ.
2017ರಲ್ಲಿ ಇಂಗ್ಲೆಂಡ್ನಲ್ಲಿ ಮಲ್ಯ ಅವರನ್ನು ಬಂಧಿಸಲಾಗಿತ್ತು. ಮಲ್ಯ ಪಾಸ್ಪೋರ್ಟ್ ರದ್ದು ಮಾಡಿದ್ದ ಭಾರತ, ಇಂಗ್ಲೆಂಡ್ ಸರ್ಕಾರಕ್ಕೆ ಮಲ್ಯರನ್ನು ಗಡೀಪಾರು ಮಾಡುವಂತೆ ಕೇಳಿತ್ತು. ಆದರೆ ಪಾಸ್ಪೋರ್ಟ್ ಮಾನ್ಯತೆ ಕಳೆದುಕೊಂಡಿದ್ದರೂ ಯುಕೆ ಪೌರತ್ವ ಪಡೆದವರಿಗೆ ಇಂಗ್ಲೆಂಡ್ನಲ್ಲೇ ನೆಲೆಸಲು ಅವಕಾಶವಿದೆ. ಹೀಗಾಗಿ ಮಲ್ಯ ಲಂಡನ್ನಲ್ಲೇ ನೆಲೆಸಿದ್ದಾರೆ.
ಕೊರೋನಾ ಆತಂಕ: ಮತ್ತೆ ವರ್ಕ್ ಫ್ರಂ ಹೋಂ ಅಳವಡಿಕೆಗೆ ಮುಂದಾದ ಐಟಿ ಕಂಪನಿಗಳು
ನೇತಾಜಿ ಸುಭಾಷ್ 125ನೇ ಜನ್ಮದಿನ: ಅರ್ಥಫೂರ್ಣ ಆಚರಣೆಗೆ ಸರ್ಕಾರ ನಿರ್ಧಾರ
ಆಸ್ಕರ್ ಯೂಟ್ಯೂಬ್ ಚಾನೆಲ್’ನಲ್ಲಿ ಸ್ಥಾನ ಪಡೆದ ‘ಜೈ ಭೀಮ್’ ಚಿತ್ರದ ದೃಶ್ಯ