Tuesday, July 5, 2022

ಈಕೆಯನ್ನು ನೋಡಿಯಾದರೂ ನಮ್ಮ ನಾಯಕರು ಪಾಠ ಕಲಿಯಬಹುದೇ?

Follow Us

newsics.com

ಮಾಲ್ಡೋವಾ(ಯುರೋಪ್): ಈಕೆ ಮಾಲ್ಡೋವಾ ಅಧ್ಯಕ್ಷೆ ಮೈಯಾ ಸಾಂಡು. ಐಷಾರಾಮಿ ಜೀವನದಿಂದ ಬಲು ದೂರ. ತಮ್ಮ ಸರಳತೆ ಹಾಗೂ ಮಿತವ್ಯಯದ ಗುಣಕ್ಕಾಗಿಯೇ ಅವರು ಹೆಚ್ವು ಪ್ರಸಿದ್ಧರಾಗಿದ್ದಾರೆ.
ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಬಳಿಕ ಬಹಳ ಸಂಯಮದ, ಸರಳ ಆಡಳಿತಗಾರ್ತಿ ಎನಿಸಿದ್ದಾರೆ. ಇದೇ ಕಾರಣಕ್ಕಾಗಿಯೇ ಅಲ್ಲಿನ ಜನ ಇವರನ್ನು ಕೊಂಡಾಡುತ್ತಿದ್ದಾರೆ. ಒಳ್ಳೆಯವಳ ಹಾಗೂ ಸಮರ್ಥಳ ಕೈಯಲ್ಲಿ ನಾವಿದ್ದೇವೆ ಎಂದು ಹೆಮ್ಮೆಪಡುತ್ತಿದ್ದಾರೆ.
ಶನಿವಾರ(ಮೇ 28) ಅವರು ಮ್ಯಾಕ್ರೋನ್ ಅವರನ್ನು ಭೇಟಿಯಾಗಲು ಬ್ರಸೆಲ್ಸ್‌ಗೆ ತೆರಳಿದಾಗ ಪ್ರಯಾಣಕ್ಕೆ ಸಾಮಾನ್ಯ ಗುಣಮಟ್ಟದ ಮಿತವ್ಯಯದ ವಿಮಾನದಲ್ಲಿ ಸಾಮಾನ್ಯ ದರ್ಜೆಯಲ್ಲೇ ಇತರ ಪ್ರಯಾಣಿಕರೊಂದಿಗೆ ಪ್ರಯಾಣಿಸಿದ್ದಾರೆ. ಅಷ್ಟೇ ಅಲ್ಲ, ವಿಮಾನದಲ್ಲಿ ತಾವೇ ಸ್ವತಃ ಸುಮಾರು‌ ಮುನ್ನೂರು ರೂಪಾಯಿ (ಮೂರು ಯೂರೋ) ನೀಡಿ ಸ್ಯಾಂಡ್‌ವಿಚ್ ಸೇವಿಸಿದ್ದಾರೆ.
ಈ ದೇಶದಲ್ಲಿ ಸದ್ಯ ಯಾವುದೇ ಚುನಾವಣೆಯಿಲ್ಲ. ಹೀಗಾಗಿ‌ ಇದು ಚುನಾವಣಾ ಗಿಮಿಕ್‌ ಕೂಡ ಅಲ್ಲ. ಮೈಯಾ ಸಾಂಡು ಸದಾ ಇರುವುದೇ ಹೀಗೆ. ಜನರ ದುಡ್ಡನ್ನು ಬಳಸುವಾಗ ಅತಿ ಹೆಚ್ವು ಜಾಗರೂಕರಾಗಿರುತ್ತಾರೆ ಎಂದು ಮಾಲ್ಡೋವಾ ದೇಶದ ಜನ ಮಾತನಾಡಿಕೊಳ್ಳುತ್ತಾರೆಂದು ಮಾಧ್ಯಮಗಳು ವರದಿ‌ ಮಾಡಿವೆ.
ತಮ್ಮ ಕರ್ತವ್ಯ‌ ನಿರ್ವಹಣೆಯಲ್ಲಿ ಸದಾ ಬ್ಯುಸಿಯಾಗಿರುವ ಮೈಯಾ ಸಾಂಡು, ಹಾರ್ವರ್ಡ್ ವಿಶ್ವವಿದ್ಯಾಲಯದ ಪದವೀಧರೆ. ಆದರೂ ಸರಳ- ಸಜ್ಜನಿಕೆ, ಮಿತವ್ಯಯದಿಂದಲೇ ಅವರು ಮನೆಮಾತಾಗಿದ್ದಾರೆ. ಮೈಯಾ ಸಾಂಡು ಅವರನ್ನು ನೋಡಿಯಾದರೂ ನಮ್ಮ ನಾಯಕರು ಪಾಠ ಕಲಿಯುವರೇ?

ಮೂವರು ಮಹಿಳೆಯರು ಸೇರಿ ಇಬ್ಬರು ಮಕ್ಕಳ ಶವ ಬಾವಿಯಲ್ಲಿ ಪತ್ತೆ

ವಿಶೇಷ ಚೇತನ ಮಗುವಿಗೆ ವಿಮಾನ ಏರುವುದಕ್ಕೆ ನಿರ್ಬಂಧ: ಇಂಡಿಗೋ ಸಂಸ್ಥೆಗೆ ₹5 ಲಕ್ಷ ದಂಡ

ಕೆಜಿಎಫ್​ 2ದಿಂದ ಸ್ಫೂರ್ತಿ ಪಡೆದು ಸಿಗರೇಟ್​ ಸೇದಿದ 15ರ ಬಾಲಕ ಆಸ್ಪತ್ರೆಗೆ ದಾಖಲು!

ಮತ್ತಷ್ಟು ಸುದ್ದಿಗಳು

vertical

Latest News

ಕಾಲಿಗೆ ನಮಸ್ಕಾರ ಮಾಡುವ ನಾಟಕ: ಚಂದ್ರಶೇಖರ್ ಗುರೂಜಿಗೆ 70 ಬಾರಿ ಇರಿದ ದುಷ್ಕರ್ಮಿಗಳು

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಮೇಲೆ ದುಷ್ಕರ್ಮಿಗಳು 70 ಬಾರಿ ಇರಿದು ಹತ್ಯೆ ಮಾಡಿದ್ದಾರೆ.  ಅತ್ಯಂತ ಭೀಕರವಾಗಿ ಚುಚ್ಚಿ ಚುಚ್ಚಿ ಹತ್ಯೆ ಮಾಡಲಾಗಿದೆ. ಇಬ್ಬರು...

ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ ಮಾಡಿದ ಸ್ಪೈಸ್ ಜೆಟ್

newsics.com ನವದೆಹಲಿ:  ದೆಹಲಿಯಿಂದ  ದುಬೈಗೆ ಪ್ರಯಾಣಿಸುತ್ತಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷದ ಕಾರಣ ಕರಾಚಿಯಲ್ಲಿ ತುರ್ತು ಭೂ ಸ್ಪರ್ಶ  ಮಾಡಿದೆ. ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ತಕ್ಷಣ ಪೈಲಟ್ ಕರಾಚಿ ವಿಮಾನ ನಿಲ್ದಾಣ...

ಚಾಕು ಇರಿದು ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್ ಗುರೂಜಿ ಕೊಲೆ

newsics.com ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ್‌ ಗುರೂಜಿ ಹುಬ್ಬಳ್ಳಿಯ ಖಾಸಗಿ ಹೋಟೆಲ್‌ನಲ್ಲಿ ಕೊಲೆಯಾಗಿದ್ದಾರೆ. ಭಕ್ತರ ಸೋಗಿನಲ್ಲಿ ಬಂದ ದುಷ್ಕರ್ಮಿಗಳು ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಸರಳ ವಾಸ್ತು ಸಲಹೆ ನೀಡುವ ಮೂಲಕ ಹಲವರ ಬಾಳಿಗೆ...
- Advertisement -
error: Content is protected !!