ನವದೆಹಲಿ: ನಗದು ವ್ಯವಹಾರ ನಡೆಸುವವರಿಗೆ ಮಿತಿ ಹೇರಲು ಕೇಂದ್ರ ಸರ್ಕಾರ ಮುಂದಾಗಿದೆ.
ನಗದು ರೂಪದಲ್ಲಿ ದಿನವೊಂದಕ್ಕೆ 10 ಸಾವಿರ ರೂ. ಮಾತ್ರ ಪಾವತಿಸಬಹುದು. 10 ಸಾವಿರ ರೂ. ಗಿಂತ ಹೆಚ್ಚು ನಗದು ಪಾವತಿಗೆ ನಿರ್ಬಂಧ ಹೇರಲಾಗಿದೆ.
ಆದಾಯ ತೆರಿಗೆ ನಿಯಮದ ಅನುಸಾರ ಒಬ್ಬ ವ್ಯಕ್ತಿ ದಿನಕ್ಕೆ ಮತ್ತೊಬ್ಬ ವ್ಯಕ್ತಿಗೆ 20 ಸಾವಿರ ರೂಪಾಯಿವರೆಗೆ ನಗದು ರೂಪದಲ್ಲಿ ಹಣ ಕೊಡಬಹುದಾಗಿತ್ತು. ಈ ನಿಯಮಕ್ಕೆ ತಿದ್ದುಪಡಿ ತಂದು ದಿನಕ್ಕೆ 10 ಸಾವಿರ ನಿಗದಿ ಮಾಡಲಾಗಿದೆ.
10 ಸಾವಿರ ರೂಪಾಯಿಗಿಂತ ಹೆಚ್ಚು ನಗದು ಪಾವತಿಗೆ ನಿರ್ಬಂಧ ಹೇರಿರುವುದರಿಂದ ಕ್ರೆಡಿಟ್ ಕಾರ್ಡ್, ನೆಟ್ ಬ್ಯಾಂಕಿಂಗ್, ಡೆಬಿಟ್ ಕಾರ್ಡ್ ಮೊದಲಾದವುಗಳ ಮೂಲಕ ಹೆಚ್ಚು ಹಣ ಪಾವತಿಸಬಹುದು. ಇ-ವ್ಯವಹಾರಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಕೇಂದ್ರ ಇಂತಹ ಕ್ರಮ ಕೈಗೊಂಡಿದೆ.
ನಗದು ವ್ಯವಹಾರಕ್ಕೆ 10 ಸಾವಿರ ರೂ. ಮಿತಿ
Follow Us