Saturday, April 17, 2021

ಜುಲೈ 1ರಿಂದ 15ರವರೆಗೆ CBSE ಪರೀಕ್ಷೆ

ನವದೆಹಲಿ: ಕೊರೋನಾ ಹಿನ್ನೆಲೆಯಲ್ಲಿ ತಡೆಹಿಡಿಯಲಾಗಿದ್ದ ಸಿಬಿಎಸ್ ಇ ಪಠ್ಯಕ್ರಮದ 10 ಮತ್ತು 12ನೇ ತರಗತಿಯ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಜುಲೈ 1 ರಿಂದ 15 ರವರೆಗೆ ಪರೀಕ್ಷೆಗಳು ನಡೆಯಲಿವೆ.
ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗೆ ಸಿಬಿಎಸ್ ಇ ವೆಬ್ ಸೈಟ್ ನಲ್ಲಿ ಈ ಮಾಹಿತಿ ಪಡೆಯುವಂತೆ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಸೂಚಿಸಿದ್ದಾರೆ. ಶನಿವಾರ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಲು ಸಿಬಿಎಸ್ಇ ನಿರ್ಧರಿಸಿತ್ತು. ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಸೋಮವಾರಕ್ಕೆ ಮುಂದೂಡಲಾಗಿತ್ತು. ಜೆಇಇ (ಮೇನ್ಸ್) ಪರೀಕ್ಷೆಯನ್ನು ಜುಲೈ 18 ರಿಂದ ಜುಲೈ 23ರವರೆಗೂ ನಡೆಸುವುದಾಗಿ ಈಗಾಗಲೇ ಮಾನವ ಸಂಪನ್ಮೂಲ ಮತ್ತು ಅಭಿವೃದ್ದಿ ಇಲಾಖೆ ಘೋಷಿಸಿದೆ. ನೀಟ್‌ ಪರೀಕ್ಷೆಗಳನ್ನು ಜುಲೈ 26 ರಂದು ನಡೆಸಲು ತೀರ್ಮಾನಿಸಿದೆ.

ಮತ್ತಷ್ಟು ಸುದ್ದಿಗಳು

Latest News

ಕುಂಭಮೇಳದ ಪ್ರಧಾನ ಸಾಧು ಕೊರೋನಾಗೆ ಬಲಿ

newsics.com ಹರಿದ್ವಾರ: ಕುಂಭಮೇಳದಲ್ಲಿ ಪಾಲ್ಗೊಂಡಿದ್ದ ಪ್ರಧಾನ ಸಾಧು ಕೊರೋನಾ ಸೋಂಕಿಗೆ ಬಲಿಯಾಗಿದ್ದಾರೆ. 65 ವರ್ಷದ ಸಾಧು ಈ ವಾರದ ಆರಂಭದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದು, ಕೊರೋನಾ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕುಂಭಮೇಳಕ್ಕೆ ಮಧ್ಯಪ್ರದೇಶದಿಂದ...

ಬೆಂಗಳೂರು ವಿವಿ ಪರೀಕ್ಷೆಗಳು‌ ಮುಂದೂಡಿಕೆ

newsics.com ಬೆಂಗಳೂರು: ಕೊರೋನಾ ಅಬ್ಬರ ಹಾಗೂ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಶೀಘ್ರದಲ್ಲೇ ಮುಂದಿನ ದಿನಾಂಕಗಳನ್ನು ಪ್ರಕಟಿಸುವುದಾಗಿ ತಿಳಿಸಿದೆ. ಏ.19, 20, 21ರಂದು ನಡೆಯಬೇಕಿದ್ದ ಬೆಂಗಳೂರು ವಿಶ್ವವಿದ್ಯಾಲಯದ ಪರೀಕ್ಷೆಗಳನ್ನು ಮುಂದೂಡಲಾಗಿದೆ...

ಪಂಜಾಬ್ ವಿರುದ್ಧ ಚೆನ್ನೈಗೆ ಸುಲಭದ ಗೆಲುವು

newsics.com ಮುಂಬೈ: ಐಪಿಎಲ್ 2021ರ ಆವೃತ್ತಿಯ 8ನೇ ಪಂದ್ಯದಲ್ಲಿ ಚೆನ್ನೈ ಬೌಲರ್ಗಳ ದಾಳಿಗೆ ನಲುಗಿದ ಪಂಜಾಬ್ ಕಿಂಗ್ಸ್ ಹೀನಾಯ ಸೋಲು ಅನುಭವಿಸಿತು. ಪಂದ್ಯದಲ್ಲಿ ಚೆನ್ನೈ ತಂಡ 6 ವಿಕೆಟ್ ಗೆಲುವು ಗಳಿಸಿದೆ. 106 ರನ್ಗಳ...
- Advertisement -
error: Content is protected !!