Monday, March 8, 2021

ಡಿ.31ರಂದು ಸಿಬಿಎಸ್‌ಇ ಪರೀಕ್ಷಾ ವೇಳಾಪಟ್ಟಿ ಪ್ರಕಟ

newsics.com
ನವದೆಹಲಿ: ಇದೇ ಡಿಸೆಂಬರ್ 31ರಂದು ಸಿಬಿಎಸ್‌ಇ ಪರೀಕ್ಷಾ ವೇಳಾಪಟ್ಟಿ ಪ್ರಕಟವಾಗಲಿದೆ.
ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಈ ಮಾಹಿತಿ ನೀಡಿದ್ದಾರೆ. ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಯ ವೇಳಾಪಟ್ಟಿಯನ್ನು ಡಿ.31ರಂದು ಸಂಜೆ ಆರು ಗಂಟೆಗೆ ಪ್ರಕಟಿಸುವುದಾಗಿ ಟ್ವೀಟ್‌ ಮಾಡಿದ್ದಾರೆ.
‘2021ನೇ ಸಾಲಿನಲ್ಲಿ ಸಿಬಿಎಸ್‌ಇ ಬೋರ್ಡ್‌ ಪರೀಕ್ಷೆಯನ್ನು ಎದುರಿಸಲಿರುವ ವಿದ್ಯಾರ್ಥಿಗಳಿಗೆ ಯಾವಾಗಿನಿಂದ ಪರೀಕ್ಷೆ ಆರಂಭವಾಗುವುದು ಎನ್ನುವುದನ್ನು ಡಿ.31ರಂದು ಘೋಷಿಸಲಿದ್ದೇನೆ’ ಎಂದು ಟ್ವೀಟ್‌ನಲ್ಲಿ ಹೇಳಿದ್ದಾರೆ.
ಕೋವಿಡ್‌-19 ಕಾರಣದಿಂದಾಗಿ ಮುಂದಿನ ವರ್ಷದ ಫೆಬ್ರವರಿಯವರೆಗೆ ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಡೆಸುವುದಿಲ್ಲ ಎಂದು ಕಳೆದ ಮಂಗಳವಾರ ನಿಶಾಂಕ್‌ ತಿಳಿಸಿದ್ದರು. ಆದರೆ ಪರಿಸ್ಥಿತಿಯನ್ನು ನೋಡಿಕೊಂಡು ಹಾಗೂ ತಜ್ಞರ ಜತೆ ಚರ್ಚೆ ನಡೆಸಿ, ಪರೀಕ್ಷೆ ನಡೆಸುವ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಅವರು ತಿಳಿಸಿದ್ದರು. ಇದೀಗ ಡಿಸೆಂಬರ್ 31ರಂದು ಪರೀಕ್ಷಾ ವೇಳಾಪಟ್ಟಿ ಘೋಷಣೆ ಮಾಡುವುದಾಗಿ ಟ್ವೀಟ್ ನಲ್ಲಿ ಹೇಳಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಶಿಫ್ಟ್

newsics.com ನವದೆಹಲಿ:‌ ಲಂಡನ್ʼನ ಲಾರ್ಡ್ಸ್ʼನಲ್ಲಿ ನಡೆಯಬೇಕಿದ್ದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯ ಸೌತಾಂಪ್ಟನ್ʼಗೆ ಸ್ಥಳಾಂತರವಾಗಿದೆ.ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ...

ಗುಜರಾತ್, ರಾಜಸ್ಥಾನದ ಮಾಜಿ ರಾಜ್ಯಪಾಲ ಅನ್ಶುಮಾನ್ ಸಿಂಗ್ ನಿಧನ

newsics.com ಲಕ್ನೋ: ರಾಜಸ್ಥಾನ ಮತ್ತು ಗುಜರಾತಿನ ಮಾಜಿ ರಾಜ್ಯಪಾಲ, ರಾಜಸ್ಥಾನ ಹೈಕೋರ್ಟ್ ಮಾಜಿ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅನ್ಶುಮಾನ್ ಸಿಂಗ್ (85) ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸೋಮವಾರ (ಮಾ.8) ಲಕ್ನೋದಲ್ಲಿ ಕೊನೆಯುಸಿರೆಳೆದರು. 1999-2003ರ ನಡುವೆ...

ವೇದಾದ್ಯಯನ ವಿದ್ಯಾರ್ಥಿ ಪಯಸ್ವಿನಿ ನದಿ ಪಾಲು

newsics.com ಸುಳ್ಯ(ದಕ್ಷಿಣ ಕನ್ನಡ): ವೇದಾದ್ಯಯನ ಮಾಡುತ್ತಿದ್ದ ಬಾಲಕನೊಬ್ಬ ಕಾಲುಜಾರಿ ಪಯಸ್ವಿನಿ ನದಿಗೆ ಬಿದ್ದು ಸಾವನಪ್ಪಿದ್ದಾನೆ.ಜಿಲ್ಲೆಯ ಸುಳ್ಯದಲ್ಲಿ ಈ ದುರಂತ ನಡೆದಿದ್ದು, ದರ್ಬೆತ್ತಡ್ಕ ನಿವಾಸಿ ಗೋಪಾಲಕೃಷ್ಣ ಭಟ್ ಅವರ ಪುತ್ರ ಉದನೇಶ್ವರ...
- Advertisement -
error: Content is protected !!