ಬೆಂಗಳೂರು: ಒಂದೆಡೆ ಸ್ಯಾಂಡಲ್‍ವುಡ್ ಡ್ರಗ್ಸ್ ಪ್ರಕರಣದ ತನಿಖೆ ಚುರುಕುಗೊಂಡಿದ್ದರೇ ಇನ್ನೊಂದೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಿರೇನ್ ಖನ್ನಾಗೆ ಸಹಕರಿಸಿದ ಆರೋಪದ ಮೇಲೆ ಎಸಿಪಿ ಮುದವಿಯನ್ನು ಅÀಮಾನತ್ತುಗೊಳಿಸಿ ಸಿಸಿಬಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಎಸಿಪಿ ಮುದವಿ ಆರೋಪಿ ವಿರೇನ್ ಖನ್ನಾ ಜೊತೆ ನಿಕಟ ಸಂಪರ್ಕ ಹೊಂದಿದ್ದಲ್ಲದೇ ತನಿಖೆಯ ಸಮಗ್ರ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇದಲ್ಲದೇ ಆರೋಪಿ ವಿರೇನ್ ಖನ್ನಾಗೆ ಮೊಬೈಲ್ ಒದಗಿಸಿ ಆತನಿಂದ 50 ಲಕ್ಷ ರೂಪಾಯಿ ಲಂಚ ಡಿಮ್ಯಾಂಡ್ ಮಾಡಿದ್ದರು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಎಸಿಪಿ ವಿರುದ್ಧ ಕ್ರಮಕೈಗೊಳ್ಳಲು ಅವಕಾಶ ಕೋರಿ ಸರ್ಕಾರಕ್ಕೆ ಪತ್ರ ಬರೆದಿದ್ದರು. ಸರ್ಕಾರದ ಅನುಮತಿ ಮೇರೆಗೆ ಎಸಿಪಿ ಮುದವಿಯನ್ನು ಅಮಾನತ್ತುಗೊಳಿಸಿ ಸಿಸಿಬಿ ಆಯುಕ್ತ ಸಂದೀಪ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.